Thursday, July 02, 2009

ವಿದ್ಯುತ್ ಗರೀಷ್ಟ ಬೇಡಿಕೆ ನಿಬಾಯಿಸುವ ಬಗ್ಗೆ ಚಿಂತನೆ

 

ದೆಹಲಿಯಲ್ಲಿ ಎರಡರಿಂದ ಹನ್ನೆರಡು ಘಂಟೆ ವಿದ್ಯುತ್ ಕಡಿತ ಜನರ ಪ್ರತಿಭಟನೆ ಎಂದು ನಿತ್ಯವೂ ಪತ್ರಿಕೆಗಳಲ್ಲಿ ಓದುತ್ತಿದ್ದೇವೆ. ನೀರು ಮತ್ತು ವಿದ್ಯುತ್ ಪರಸ್ಪರ ಅವಲಂಬಿತವಾಗಿ ಪರೀಸ್ಥಿತಿ ಇನ್ನೂ ಕಠೀಣ. ಉತ್ತರ ಪ್ರದೇಶದಲ್ಲಿ ಬೆಳಗ್ಗಿನಿಂದ ರಾತ್ರಿ ವರೆಗೆ ಹವಾ ನಿಯಂತ್ರಣ ಉಪಯೋಗಿಸಲು ನಿರ್ಬಂದ ಸಂಭವ ಪತ್ರಿಕೆಯಲ್ಲಿ ಓದುತ್ತಿದ್ದೇವೆ. ಈ ಅವ್ಯವಸ್ಥೆ ನಿರ್ವಹಿಸಲು ಇಲ್ಲೊಂದು ಉತ್ತಮ ಪರ್ಯಾಯ ಇದ್ದಂತಿದೆ.

ನಾಳೆಗೆ ತಿಂಡಿಯ ಈಗಲೆ ಹುಡುಕುವ ಆಗದೆ ಅಂದಿತು ಮರಿಕಪಿಯೊಂದು ಎನ್ನುವಂತಿರುವ ಈ ಯೋಜನೆಯಲ್ಲಿ ಹಿಂದಿನ ರಾತ್ರಿ ಕಡಿಮೆ ಬೆಲೆಯ ವಿದ್ಯುತ್ ಉಪಯೋಗಿಸಿ ಹಿತ್ತಾಳೆ ಕೊಳವೆಗಳ ಸುತ್ತಲೂ ಐಸ್ ತಯಾರಿಸಿಟ್ಟರೆ ಮರುದಿನ ಅದನ್ನು ಉಪಯೋಗಿಸಲು ಸಾದ್ಯವಂತೆ. ಹಿಂದಿನ ದಿನದ ಬಿಸಿಲು ನಮ್ಮ ಮರುದಿನದ ಬೆಳಗಿನ ಸ್ನಾನಕ್ಕೆ ಬಿಸಿನೀರು ಒದಗಿಸುವಂತೆ. ಆಗ ಮದ್ಯಾಹ್ನ ಹವಾನಿಯಂತ್ರಣ ಯಂತ್ರ ಉಪಯೋಗಿಸುವ ವಿದ್ಯುತ್ ಶೇಕಡಾ ೯೫ ಕಡಿಮೆ ಎಂದವರು ಹೇಳುತ್ತಾರೆ. ಇದನ್ನು ಅಳವಡಿಸಲು ಗ್ರಾಹಕರ ಮೇಲೆ ಒತ್ತಡ ಹೇರಬೇಕಾದರೆ ಹಗಲು ಬಳಸುವ ವಿದ್ಯುತ್ ಹೆಚ್ಚು ದುಬಾರಿಯಾಗಬೇಕು.

ದೆಹಲಿಯಲ್ಲಿ ಉಪಯೋಗಿಸುವ ಹೊತ್ತು ಅವಲಂಬಿಸಿ ವಿದ್ಯುತ್ ದರ ಎನ್ನುವ ಹೊಸ ವಿದಾನ ಜಾರಿಗೆ ತರಲು ಉದ್ದೇಶಿಸಲಾಗಿತ್ತು. ಆಗ ಅತಿ ಹೆಚ್ಚು ಬೇಡಿಕೆಯ ಸಮಯದಿಂದ ಕಮ್ಮಿ ಬೇಡಿಕೆಯ ಸಮಯಕ್ಕೆ ಬಳಕೆಯನ್ನು ವರ್ಗಾಯಿಸಿ ಜಾಲದ ಮೇಲಿರುವ ಒತ್ತಡ ಕಡಿಮೆ ಮಾಡಲು ಉದ್ದೇಶಿಸಲಾಗಿತ್ತು. ಸಂಜೆ ಆರೂವರೆಯಿಂದ ಹತ್ತೂವರೆ ವರೆಗೆ ಅತಿ ಹೆಚ್ಚು ಅಂದರೆ  ೬.೪೦ರಂತೆ   ದರ ವಿದಿಸಿ ಅನಂತರ ಬೆಳಗ್ಗೆ ಆರುವರೆ ವರೆಗೆ ೧.೬೦ ಪೈಸೆ ದರ ವಿಧಿಸುವ ಉದ್ದೇಶವಿತ್ತು. ಆಗ ಗೃಹ ಬಳಕೆದಾರರ ಸಂಘಟನೆ ಆಕ್ಷೇಪಣೆ ವ್ಯಕ್ತ ಪಡಿಸಿತ್ತು. ಆಗ ಮೋಬೈಲ್ ಚಾರ್ಜ್ ಮಾಡಿದರೂ ದುಬಾರಿ ಅನ್ನುವ ಅತಂಕ ಹೇಳಿಕೊಂಡಿದ್ದರು. ಹವಾ ನಿಯಂತ್ರಣದ ಉಪಯೋಗಕ್ಕೆ ಖಂಡಿತ ಹೆಚ್ಚಿನ ದರ ವಿದಿಸಬಹುದು.

ಒಂದು ಸಣ್ಣ ಎಸಿ ಬಳಸುವ ವಿದ್ಯುತ್ತಿನಲ್ಲಿ ಮೂವತ್ತರಿಂದ ನಲುವತ್ತು ಫಾನುಗಳು ತಿರುಗಲು ಸಾದ್ಯ. ಅದರೆ ಹವಾ ನಿಯಂತ್ರಣ ವ್ಯವಸ್ಥೆ ಹಾಕಿಸಿಕೊಂಡವರು ಬೇಸಿಗೆಯ ದಿನಗಳಲ್ಲಿ ಮದ್ಯಾಹ್ನ ಅದನ್ನು ಬಳಸಬೇಡಿ ಎಂದರೆ ಒಪ್ಪುವುದು ಅಸಂಬವ. ಆದರೆ ಅವರಿಗೆ ಸೌರ ಫಲಕಗಳ ಹಾಕಿಸಿಕೊಳ್ಳಲು ಒತ್ತಡ ಹಾಕುವುದು ಉತ್ತಮ ವಿಧಾನ. ಹೆಚ್ಚಾದ ವಿದ್ಯುತ್ ಜಾಲಕ್ಕೆ ಪೊರೈಸಬಹುದು. ಲಬ್ಯವಿರುವ ವಿದ್ಯುತ್ ಹೆಚ್ಚು ವಿದ್ಯುತ್ ಬೇಡುವ ಹವಾ ನಿಯಂತ್ರಣಕ್ಕೆ ಉಪಯೋಗವಾಗದಿದ್ದರೆ ಸಮಸ್ಯೆ ಸ್ವಲ್ಪ ಮಟ್ಟಿಗೆ ಪರಿಹಾರವಾಗಬಹುದು. ಈ ಮಾತು ನಮ್ಮ ಪಟ್ಟಣಗಳಿಗೂ ಅನ್ವಯ.

No comments: