Monday, July 27, 2009

ಗೊಡ್ಡು ಸಿದ್ದಾಂತದಡಿಯಲ್ಲಿ ಮುಲುಗುವ ಸಮಾಜಗಳು

ನಮ್ಮಲ್ಲಿ ಈಗ ಕೈತುಂಬಾ ಹಣ ಚೆಲ್ಲಿದರೆ ಎಲ್ಲ ಪಾಪವೂ ಪರಿಹಾರ ಕಾಣುತ್ತದೆ. ಇದು ಪರೋಕ್ಷವಾಗಿ ಅನ್ಯಾಯಕ್ಕೆ ಪ್ರೋತ್ಸಾಹ ಕೊಟ್ಟಂತಾಗುತ್ತದೆ. ನನ್ನ ಪ್ರಕಾರ ಅರಿತು ಮಾಡಿದ ತಪ್ಪು ನಗದಿಕರಿಸಿ ಪರಿಹಾರ ಎನ್ನುವುದೇ ಇರಬಾರದಾಗಿತ್ತು. ಹಿಂದೊಮ್ಮೆ ಒಬ್ಬರು ಜೋಯಿಸರು ನನ್ನಲ್ಲಿ ಹೇಳಿದ್ದರು. ಪುಡಿ ಕಳ್ಳರೆಲ್ಲ ದಾರ್ಮಿಕ ಕ್ಷೇತ್ರ ದಾಟುವಾಗ ವಾಪಾಸು ಬರುವಾಗ ಕಾಣುತ್ತೇನೆ ಅನ್ನುವ ಆಶ್ವಾಸನೆ ಕೊಟ್ಟು ಮುನ್ನಡೆಯುತ್ತಾರಂತೆ. ಅವರಿಗೆ ಕಾರ್ಯ ಸಾದನೆಗೆ ದೈವ ಬೆಂಬಲ ಇದೆಯೆನ್ನುವ ಬಾವನೆ ಉಂಟಾಗಿ ಹೆಚ್ಚಿನ ದೈರ್ಯ ಕೊಡುತ್ತದೆ. ಹಾಗೆ ವಾಪಾಸು ಬರುವಾಗ ತಪ್ಪದೆ ದಾಮಾಶಯ ಸಲ್ಲಿಸುವ ಪರಿಪಾಠ. ಈಗಂತೂ ಅನುಕೂಲಕ್ಕಾಗಿ ರಸ್ತೆ ಬದಿಯಲ್ಲಿಯೇ ಹುಂಡಿಗಳಿವೆ.

ಪ್ರೊಟೆಸ್ಟೆಂಟ್ ಚರ್ಚ್ ಯಾವ ರೀತಿ ಈ ಸಂಪ್ರದಾಯ ಎದುರಿಸಿತು ಮತ್ತು ನಾವು ಎಲ್ಲಿ ಎಡವುತ್ತಿದ್ದೇವೆ ಅನ್ನುವುದರ ಬಗೆಗೆ ಪ್ರತಾಪ ಸಿಂಹ ಶನಿವಾರದ ಅಂಕಣದಲ್ಲಿ ಚರ್ಚಿಸಿದ್ದಾರೆ. ನಾವೀಗ ದೇವರನ್ನೇ ಕಮಿಶನ್ ಎಜಂಟರನ್ನಾಗಿ ಮಾಡಿದ್ದೇವೆ ಎಂದು ನಾನು ಹಿಂದಿನ ದಿನ ಶುಕ್ರವಾರವಷ್ಟೇ ಬರೆದಿದ್ದೆ. ಮಾರ್ಟಿನ್ ಲೂಥರ್ ದೇವರ ಪರವಾಗಿ ರಶೀದಿ ಬರೆಯುವುದರನ್ನು ವಿರೋಧಿಸಿದ. ನಾವು ಇನ್ನೂ ರಶೀದಿ ಬರೆಸುತ್ತಲೇ ಇದ್ದೇವೆ. ರಶೀದಿ ಬರೆಸಲು ಹಲವು ಕಡೆಗಳಲ್ಲಿ ವ್ಯವಸ್ತೆ ಮಾಡಿಕೊಂಡಿದ್ದೇವೆ. ಸಂಪ್ರದಾಯ ಅನುಕೂಲಕ್ಕೆ ತಿರುಚುವುದು ನಮ್ಮ ಸಮಾಜಕ್ಕೆ ಸಿಮಿತವಲ್ಲ. ಕಿವಿಗೊಟ್ಟರೆ ಕೂಗು ಪಾಕಿಸ್ಥಾನದಿಂದಲೂ ಕೇಳಿಸುತ್ತಿದೆ.


ಕುರಾನ್ ಜನ ಸಾಮಾನ್ಯರ ಕೈಗೆ ಕೊಟ್ಟರೆ ಅನಾಹುತ ಎಂದು ಪಾಕಿಸ್ತಾನ್ ಚಾ ಅಂಗಡಿಯಲ್ಲಿ ನೋಟೀಸ್ ಅಂಟಿಸಿದ್ದಾರೆ. ಪ್ರಾಚೀನ ಗ್ರಂಥವಾದ ಕುರಾನ್ ಸಂದರ್ಬೋಚಿತವಾಗಿ ಅರ್ಥೈಸಲು ವಿದ್ವಾಂಸರಿಗೆ ಮಾತ್ರ ಸಾದ್ಯ. ಉಗ್ರಗಾಮಿಗಳು ತಮ್ಮ ಬೇಳೆ ಬೇಯಿಸಲು ನಿರ್ದಿಷ್ಟ ಸನ್ನಿವೇಶದಲ್ಲಿ ಅಲ್ಲಿ ಬರೆದಿರುವುದನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಅರ್ಥೈಸುತ್ತಿದ್ದಾರೆ. ಪ್ರವಾದಿ ಮಹಮ್ಮದರ ಅಂದಿನ ದಿರಸು ಹಾಗೂ ಗಡ್ಡ ಯಥಾವತ್ತಾಗಿ ಅನುಕರಣೆ ನಡೆದರೂ ಆಲೋಚನೆ ತಿರುಳು ಸಂಪೂರ್ಣ ಮರೆಮಾಚಲ್ಪಟ್ಟಿದೆ. 

ಅಂಬೇಡ್ಕರ್ ಚಿಂತನೆ ಕು. ಮಾಯಾವತಿ ಕೈಯಲ್ಲಿ ನರಳುವಂತೆ ಕುರಾನ್ ಚಿಂತನೆ ಮುಲ್ಲಾಗಳ ಕೈಯಲ್ಲಿ ಬಹಳಷ್ಟು ತಿರುಚಲ್ಪಟ್ಟಿದೆ. ಅಂದು ಯುದ್ದಕಾಲದ ಸನ್ನಿವೇಶ ಪ್ರತಿಕೂಲ ಎನಿಸುವಾಗ ತನಗೆ ತಾನೆ ಅಂದುಕೊಂಡ ಸ್ವಗತ ಇಂದು ವೈರಿ ನಾಶಕ್ಕೆ ಒಪ್ಪಿಗೆ ಎಂದು ಬಿಂಬಿಸಲಾಗುತ್ತಿದೆ. ಎಲ್ಲವೂ ಅನುಕೂಲಸೂತ್ರ. ಅವರಲ್ಲೂ  ಒಬ್ಬ  ಮಾರ್ಟಿನ್ ಲೂಥರ್  ಜನಿಸಿದ್ದರೆ .....................

No comments: