Saturday, August 01, 2009

ದರ್ಮಾರ್ಥ ಕುಡಿಯುವ ನೀರು -ನ್ಯೂಯೋರ್ಕ್ ಪಟ್ಟಣದಲ್ಲಿ ಆಂದೋಲನ

 ಬಾಟಲಿಯಲ್ಲಿ ಕುಡಿಯುವ ನೀರು ಹಾಗೂ ಕೋಲಾದಂತಹ ತಂಪು ಪಾನಿಯಗಳ ಬಳಸುವುದು ನಮ್ಮಲ್ಲಿ ಪ್ರತಿಷ್ಟೆಯ ವಿಷಯವಾಗುತ್ತಿದೆ. ಪತ್ರಿಕೆಗಳಲ್ಲಿ ಟಿವಿಯಲ್ಲಿ ಮೀಟಿಂಗುಗಳ ಚಿತ್ರಗಳಲ್ಲಿ ಮೇಜುಗಳ ಮೇಲೆ ಕಾಣುವುದೇ ಬಿಸ್ಲೇರಿ ಬಾಟಲಿಗಳು. ಮಾದ್ಯಮದಲ್ಲಿ ತುಂಬಾ ಜಾಹಿರಾತು ಇರುವುದರಿಂದ ಇದೊಂದು ಅನಿವಾರ್ಯ ಅಂಶ ಎಂದು ಮನಸ್ಸಿಗೆ ಒತ್ತಡ ಹಾಕುತ್ತದೆ. ಬಾಟಲಿ ನೀರು ಪ್ರಪಂಚದಾದ್ಯಂತ ಕನಿಷ್ಟ ಅಸಲಿನ ಬಹಳ ಲಾಭದಾಯಕ ಉದ್ಯಮ.  

ಐದು ವರ್ಷಗಳ ಹಿಂದೆ ಬರಹಗಾರ್ತಿ ನೇಮಿಚಂದ್ರರು ಉದಯವಾಣಿ ಅಂಕಣದಲ್ಲಿ ಒಂದು ಘಟನೆಯನ್ನು ಪ್ರಸ್ತಾಪಿಸಿದ್ದರು. ಬೆಂಗಳೂರಿನ ಒಂದು ಹೊಸ ತಲೆಮಾರಿನ ಹೋಟೆಲಿಗೆ ಹೋದಾಗ ಅಲ್ಲಿ ಕುಡಿಯಲು ಬಿಸ್ಲೇರಿ ತಂದಿಟ್ಟರಂತೆ. ನೀರು ತಾ ಎಂದಾಗ ಸಾದ್ಯವಿಲ್ಲ ಎನ್ನುವ ಉತ್ತರ ಬಂತಂತೆ. ಆ ಹೋಟೇಲಿನ ಮೇಲ್ವಿಚಾಲಕರಿಂದ ಎಲ್ಲರೂ ಬಿಸ್ಲೇರಿಯನ್ನೇ ಅಪೇಕ್ಷಿಸುತ್ತಾರೆಂಬ ಸಮಜಾಯಿಶಿ.

ನಾನು ಹೋಟೇಲಿಗೆ ಹೋದಾಗ ಕುಡಿಯಲು ನೀರು ತಂದಿಡುವುದರ ಅಪೇಕ್ಷಿಸುವುದು ಗ್ರಾಹಕರ ಹಕ್ಕೆಂದು ಬಾವಿಸಿದ್ದೆ. ಆದರೆ ಈಗ ಪರೀಸ್ಥಿತಿ ಬದಲಾಗುತ್ತಿದೆ ಎನ್ನುವ ವಿಷಾದವನ್ನು ನೇಮಿಚಂದ್ರರು ವ್ಯಕ್ತಪಡಿಸಿದ್ದರು. ಪರದೇಶದಲ್ಲಿ ಅದು ಸಾಮಾನ್ಯ. ಒಪ್ಪುತ್ತೇನೆ. ಆದರೆ ನಮ್ಮಲ್ಲಿ ದರ್ಮಾರ್ಥ ಕುಡಿಯುವ ನೀರು ಹೋಟೇಲುಗಳು ಪೊರೈಸುತ್ತಿದ್ದವಲ್ಲ ಎಂದಿದ್ದರು.  

ನಮ್ಮಲ್ಲಿ ಬಾಯಾರಿದವರಿಗೆ ದಾರಿಹೋಕರಿಗೆ ನೀರು ಕೊಡುವುದು ಒಂದು ಸಮಾಜ ಸೇವೆ ಅನ್ನುವ ಬಾವನೆ ಇತ್ತು. ಮೊದಲು ಅದಕ್ಕಾಗಿ ಜನರನ್ನು ನಿಯಮಿಸಿದ್ದೂ ಉಂಟು. ಹಲವು ಪಟ್ಟಣಗಳ ಜನನಿಬಿಡ ಸ್ಥಳಗಳಲ್ಲಿ ರೈಲು ನಿಲ್ದಾಣದಲ್ಲಿ ಜೈನ ಸಂಘದವರು ನೀರ ಸೇವೆ ಮಾಡುವುದುಂಟು.

ಈಗ ಇದರ ಅನುಕರಣೆ  ದುಡ್ಡೇ  ದೊಡ್ಡಪ್ಪ  ಅನ್ನುವ   ಅಮೇರಿಕದಲ್ಲಿ. ಇದನ್ನು ಬಾಟಲಿ ನೀರಿನ ವಿರುದ್ದ ಅಂದೋಲನದ ಗೆಲುವು ಅನ್ನಬಹುದು. ಅಮೇರಿಕದ ನ್ಯೂಯೋರ್ಕ್ ಪಟ್ಟಣದಲ್ಲಿ ಹಲವು ಹೋಟೇಲುಗಳಲ್ಲಿ ನಿಮ್ಮ ಬಾಟಲಿಗೆ ದರ್ಮಾರ್ಥ ನೀರು ತುಂಬಿಸಿಕೊಳ್ಳ ಬಹುದೆನ್ನುವ ಪ್ರಕಟನೆ ಹೊರಗೆ ಪ್ರದರ್ಶಿಸುತ್ತಾರಂತೆ. ಆ ಹೋಟೇಲುಗಳನ್ನು ಅಂತರ್ಜಾಲದಲ್ಲೂ ಗುರುತಿಸಬಹುದು. ಹೋಟೇಲುಗಳಿಗೆ ಈ ಸೇವೆಗೆ ಬಿಟ್ಟಿ ಪ್ರಚಾರ ದೊರಕುವುದು ಲಾಭ.

ಅವರ ಬ್ಲೋಗ್ ತಾಣದಲ್ಲಿ ಹಲವು ನೀರಿಗೆ ಸಂಬಂದ ಪಟ್ಟ ಲೇಖನಗಳ ಕೊಂಡಿಗಳಿವೆ. ಹಲವು ಜತೆಗಾರ ಅಂಗಡಿಗಳ ಹಾಗೂ ನಾಯಿಗಳಿಗಾಗಿ   ತಯಾರಿಸುವ    ಬಾಟಲಿ ನೀರಿನಂತಹ ಅತಿರೇಕದ ಉತ್ಪನ್ನಗಳ ವಿವರಗಳಿವೆ.

ಇತರ ಗ್ರಹಗಳ ಜೀವಿಗಳು ನಮ್ಮಲ್ಲಿಗೆ ಬಂದರೆ …….. ಮೊದಲು ಒಂದು ಲೋಟ ನೀರು ಕೊಡಿ ಎಂದು ಬಿಸಿಲಿನಲ್ಲಿ ನಡೆದು ಕೊಂಡು ಬಂದ ಅತಿಥಿ ಮೊದಲು ಅಪೇಕ್ಷಿಸುವಂತೆ ನೀರನ್ನೇ ಕೇಳಬಹುದಂತೆ.  

No comments: