Saturday, August 15, 2009

ಆರ್ಥಿಕ ಕಾರಣಗಳಿಗೆ ಬ್ರಿಟೀಷರು ನಮ್ಮಲ್ಲಿಂದ ತೊಲಗಿದರೋ ?

ಎರಡನೆಯ ಮಹಾಯುದ್ದದ ಕೊನೆಗೆ ಬ್ರಿಟೀಷರ ಆರ್ಥಿಕತೆ ಬಹಳ ಕೆಟ್ಟ ಸ್ಥಿತಿಯಲ್ಲಿತ್ತು. ಸಿಪಾಯಿ ದಂಗೆಯ ನಂತರ ಇಲ್ಲಿ ತೇರಿಗೆ ಗಮನಾರ್ಹವಾಗಿ ಏರಿಸಲು ಸಾದ್ಯವಾಗಿರಲಿಲ್ಲ. ಸ್ವಾತಂತ್ರ ಚಳುವಳಿ ಒತ್ತಡದಿಂದಾಗಿ ಅಧೀನ ರಾಷ್ಟ್ರವೆಂದು ಹೆಚ್ಚು ಭಾರದ ತೇರಿಗೆ ವಿದಿಸುವಂತಿರಲಿಲ್ಲ. ಇಲ್ಲಿಂದ ದೋಚಲು ಸಾದ್ಯವಿಲ್ಲ ಎನ್ನುವಾಗ ವಸಾವತುಗಳ ಬಗೆಗೆ ಆಕ್ರಮಿಸಿದ ದೇಶಕ್ಕೆ ಸ್ವಾಬಾವಿಕವಾಗಿ ಆಸಕ್ತಿ ಕಡಿಮೆಯಾಗುತ್ತದೆ. ನಷ್ಟ ಎಂದರೆ ಹೊರಡುವ ಆಲೋಚನೆ ಸಮಂಜಸ ಎನಿಸುತ್ತದೆ.

ಉಳಿದ ಬಿಳಿ ತೊಗಲಿನ ದೇಶಗಳ ಸೈನಿಕರು ಖರ್ಚು ಆಯಾಯ ರಾಷ್ಟ್ರಗಳೇ ವಹಿಸಿಕೊಂಡರೆ ಬಾರತ ಮಾತ್ರ ಇಂಗ್ಲೇಂಡು ಕೊಡಬೇಕೆಂದು ಹೇಳಿತು. ಅದುದರಿಂದ ಬಾರತಕ್ಕೆ ಸ್ವಾತಂತ್ರ ಬಂದಾಗ ಒಂದು ಬಿಲಿಯ ಪೌಂಡ್ ನಮಗೆ ಇಂಗ್ಲೇಂಡಿನಿಂದ ಬರಬೇಕಾಗಿತ್ತು. ಮುಖ್ಯವಾಗಿ ಕಾಂಗ್ರೇಸ್ ದುರಾಡಳಿತದಿಂದಾಗಿ ಅದೆಲ್ಲ ಮುಗಿದು ಇಂದು ಪ್ರತಿಯೊಬ್ಬರಿಗೂ ನಲುವತ್ತು ಸಾವಿರ ರೂಪಾಯಿ ಮಿಕ್ಕಿ ಸಾಲದ ಹೊರೆ ಇರುತ್ತದೆ.

ನಮ್ಮ ಶಾಲಾ ಪುಸ್ತಕಗಳಲ್ಲಿ ಮಾತ್ರ ನೆಹರು ಮತ್ತು ಗಾಂಧಿ ಶ್ರಮಪಟ್ಟು ಸ್ವಾತಂತ್ರ ಗಳಿಸಿಕೊಟ್ಟರು ಎನ್ನುತ್ತಾ ಈ ವಿಚಾರವನ್ನು ಸಂಪೂರ್ಣ ನಿರ್ಲಕ್ಷಿಸಿದರು. ಸ್ವಾತಂತ್ರ ದೊರಕಲು ಹಲವು ಕಾರಣಗಳಲ್ಲಿ ಹೋರಾಟವೂ ಒಂದು. ಬಾರತ ಇಟ್ಟುಕೊಳ್ಳುವುದು ಲಾಸ್ ಎಂದು ಬ್ರಿಟೀಷರು ತೊಲಗಿದ್ದು ಎನ್ನುವ ವಿಚಾರವನ್ನು ಆರು ವರ್ಷ ಹಿಂದೆ ಪ್ರಸಿದ್ದ ಅರ್ಥಶಾಸ್ತ್ರಿ ಹಾಗೂ ಅಂಕಣಕಾರ ಸ್ವಾಮಿನಾಥನ್ ಅಯ್ಯರ್ ಅವರ ಅಂಕಣ ಬರಹದಲ್ಲಿ ಚೆನ್ನಾಗಿ ವಿವರಿಸಿದ್ದಾರೆ.  

No comments: