ಇನ್ನು ಎಲ್ಲ ಸಾರ್ವಜನಿಕ ಶೌಚಾಲಯಗಳನ್ನು ರಾಜೀವ ಗಾಂಧಿ ಶೌಚಾಲಯ ಎಂದು ಕರೆಯಲಾಗುವುದು ಎನ್ನುವ ಸುಗ್ರಿವಾಜ್ನೆ ಸದ್ಯದಲ್ಲಿ ಹೊರಬರುವುದಂತೆ. ಅನಂತರ ಅಂದರೆ ಸದ್ಯದಲ್ಲಿಯೇ ರಾಜೀವ ಗಾಂಧಿ ಸ್ಮಶಾನ, ಇಂದಿರಾ ಗಾಂಧಿ ಕಸಾಯಿಖಾನೆ ಸೊನಿಯಾ ಗಾಂಧಿ ಚರಂಡಿ ರಾಹುಲ ಗಾಂಧಿ ಮೋರಿ ನೆಹರು ಕೊಳಗೇರಿ ಎಲ್ಲವೂ ನಮ್ಮ ಗ್ರಾಮದಲ್ಲಿ ಉದ್ಘಾಟನೆಗೊಳ್ಳಲಿದೆ.
ಭಾರತ ಜೀವಿಸುವುದೇ ಹಳ್ಳಿಯಲ್ಲಿ ಅನ್ನುತ್ತಾರೆ. ಇಂದಿಗೂ ಬಹು ಪಾಲು ಪ್ರಜೆಗಳು ಹಳ್ಳಿಯಲ್ಲಿದ್ದು ಕೃಷಿಯನ್ನು ಆಶ್ರಯಿಸಿಕೊಂಡಿದ್ದಾರೆ. ಅದುದರಿಂದ ಎಲ್ಲ ನೆಹರು ಕುಟುಂಬದ ಸಂಕೇತಗಳು ಪಟ್ಟಣಗಳ ಪಾಲಾಗುವುದು ಶುದ್ದ ತಪ್ಪು. ನ್ಯಾಯವಾದ ಪಾಲು ನಮಗೆ ಹಳ್ಳಿಗರಿಗೂ ಬೇಕು.
ವಿಷಯ ಏನು ಅಂದರೆ ಕುಮಾರಿ ಮಾಯಾವತಿ ಉತ್ತರ ಪ್ರದೇಶ ರಾಜ್ಯದಾದ್ಯಂತ ಅವರ, ಪಕ್ಷದ ಸ್ಥಾಪಕ ಕಾಂಶಿರಾಮರ ಹಾಗೂ ಪಕ್ಷದ ಚಿಹ್ನೆಯಾದ ಅನೆಯ ಬೃಹತ್ ವಿಗ್ರಹಗಳನ್ನು ಸ್ಥಾಪಿಸಲು ಪ್ರಾರಂಬಿಸಿದ್ದರು. ಈಗಾಗಲೇ ಸಾವಿರ ಕೋಟಿ ರೂಪಾಯಿ ಖರ್ಚು ಮಾಡಿಸಿದ ಈ ಯೋಜನೆ ತಡೆಗಟ್ಟಲು ಉಚ್ಚ ನ್ಯಾಯಾಲಯವೂ ಒಪ್ಪಲಿಲ್ಲ. ಅನಂತರ ಇದಕ್ಕೆ ಆಕ್ಷೇಪಿಸಿ ಇಬ್ಬರು ವಕೀಲರು ಚುನಾವಣೆ ಆಯೋಗಕ್ಕೆ ದೂರು ಕೊಟ್ಟು ಆನೆ ಪಕ್ಷಕ್ಕೆ ನೊಟೀಸು ಕೊಡಿಸಿದರು.
ಕಾಂಗ್ರೇಸಿನವರಿಗೆ ಎಲ್ಲಕ್ಕೂ ನೆಹರು ಇಂದಿರಾ ರಾಜೀವ ಹೆಸರಿಡುವ ಸೀಕು. ಈ ಬಗೆಗೆ ನಮ್ಮ ಅರಕಲಗೂಡು ಸೂರ್ಯಪ್ರಕಾಶರು ತಿಂಗಳುಗಳ ಹಿಂದೆ ಚುನಾವಣೆ ಅಯೋಗಕ್ಕೊಂದು ಪಟ್ಟಿ ಸಲ್ಲಿಸಿದ್ದರು. ಅದರಲ್ಲಿ ನೆಹರು ಇಂದಿರಾ ರಾಜೀವ ತ್ರಿವಳಿಗಳ ಹೆಸರಿನಲ್ಲಿರುವ ನಾಲ್ಕು ನೂರ ಐವತ್ತು ಸರಕಾರಿ ಚಟುವಟಿಕೆಗಳ ಪಟ್ಟಿಯಿತ್ತು. ಇದನ್ನೆ ಆದಾರವಾಗಿಟ್ಟುಕೊಂಡು ಆನೆ ಪಕ್ಷದವರು ನಮ್ಮದು ತಪ್ಪಾದರೆ ಅವರದ್ದು ಸರಿಯೇ ಎಂದು ವಾದಿಸಿದರು. ಸಿಕ್ಕ ಅವಕಾಶ ಚೆನ್ನಾಗಿ ಬಳಸಿಕೊಂಡ ಆನೆ ಪಕ್ಷವು ಕಾಂಗ್ರೆಸ್ ಪಕ್ಷ ಹಾಗೂ ಅವರಿಂದ ನೇಮಿಸಲ್ಪಟ್ಟ ಚುನಾವಣಾ ಅಯೋಗಕ್ಕೂ ಮುಜುಗರ ಎನಿಸುವಷ್ಟು ಉಗಿದಿದೆ. ಅವರೇ ಅರೆಸಿದ ಔಷದ ಈಗ ಕಾಂಗ್ರೇಸಿಗೆ ಕಹಿಯಾಗಿದೆ.
ಈಗ ಇಡೀ ದೇಶವೆಲ್ಲ ನೆಹರು ಇಂದಿರಾ ರಾಜೀವಮಯ ಎನ್ನುವ ಪಟ್ಟಿಯನ್ನು ಇಂದಿನ ಕನ್ನಡ ಪ್ರಭದಲ್ಲಿ ಓದಬಹುದು. ಅದಕ್ಕೆ ಪೂರಕ ಲೇಖನವನ್ನು ಟಿ ಜೆ ಎಸ್ ಜೋರ್ಜ್ ಅವರ ನೇರ ಮಾತು ಅಂಕಣದಲ್ಲಿ ಕಾಣುತ್ತೇವೆ. ಮುಂದುವರಿದ ಬಾಗದ ಕೊಂಡಿ ಇಲ್ಲಿದೆ.
ಕ್ಷಮಿಸಿ. ಇದು ಅಹ್ವಾನವಲ್ಲ. ಮುಂದಾಗಿ ಸೂಚನೆ ಅಷ್ಟೇ. ಉದ್ಘಾಟನೆ ದಿನವನ್ನು ದೆಹಲಿಯಿಂದ ಒಪ್ಪಿಗೆ ಬಂದಾಗ ತಿಳಿಸುತ್ತೇವೆ.
Sunday, August 16, 2009
Subscribe to:
Post Comments (Atom)
No comments:
Post a Comment