Thursday, August 27, 2009

ಬಹುರಾಷ್ಟ್ರೀಯ ಎಂಡೊಸಲ್ಫಾನ್ ತಯಾರಕರನ್ನು ಸೋಲಿಸಿದ ಹಳೆಯ ಕಾಚ ಚಳುವಳಿ

ಇಂದಿನ ಉದಯವಾಣಿಯಲ್ಲಿ ಡಾ| ಸಿ ನಿತ್ಯಾನಂದ ಪೈ ಅವರು ಎಂಡೊಸಲ್ಫಾನ್ ನಿಷೇದಕ್ಕೆ ಬಾರತದ ಪ್ರತಿರೋಧವೇಕೆ ? ಎನ್ನುವ ವಿವರವಾದ ಬರಹ ಬರೆದಿದ್ದಾರೆ.

ಈ ಕೀಟನಾಶಕದ    ನಿಷೇದಕ್ಕೆ ಅಂತರಾಷ್ಟ್ರೀಯ ಪ್ರಯತ್ನಗಳಾಗುತ್ತಿದ್ದು ಬಾರತದಲ್ಲಿ ಖಾಸಗಿ ವಲಯ ಮಾತ್ರವಲ್ಲ ಸರಕಾರಿ ಕಾರ್ಖಾನೆಯಲ್ಲೂ ತಯಾರಾಗುವ ಎಂಡೊಸಲ್ಫಾನ್ ಅಳಿವಿಗೆ ನಮ್ಮ ಸರಕಾರ ಪ್ರಬಲ ವಿರೋಧ ವ್ಯಕ್ತ ಪಡಿಸುತ್ತದೆ. ಇಲ್ಲಿ ಪ್ರಜೆಗಳ ಆರೋಗ್ಯದ ಬದಲು ಸರಕಾರದ ನಿಲುವಿನಲ್ಲಿ ವ್ಯಾಪಾರಿ ಹಿತಾಸಕ್ತಿಯೇ ಮೇಲುಗೈ ಸಾಧಿಸುತ್ತದೆ. ಬಾರತ  ಸರಕಾರದ  ನಿಲುವಿನ    ಬಗೆಗೆ ನ್ಯುಜೀಲಾಂಡಿನ ಚಳುವಳಿಗಾರ್ತಿ Dr. Meriel Watts ಸ್ಪಷ್ಟವಾಗಿ   ಹೇಳುತ್ತಾರೆ. This is a clear conflict of interest, a manufacturer is using its power to veto international agreements on a chemical."

ಡಾ ನಿತ್ಯಾನಂದ ಪೈ ಅವರು ಕೊನೆಯಲ್ಲಿ ಈ ಲೇಖನ ಅಚ್ಚಿಗೆ ಹೋಗುವ ಮುನ್ನ ತಿಳಿದು ಬಂದಂತೆ ವಿಶ್ವದಲ್ಲಿಯೇ ಅತ್ಯದಿಕ ಪ್ರಮಾಣದ ಎಂಡೊಸಲ್ಫಾನ್  ತಯಾರಿಸುತ್ತಿರುವ ಬಾಯರ್ ಸಂಸ್ಥೆ ೨೦೧೦ ರಿಂದ ಇದರ ಉತ್ಪಾದನೆಯನ್ನು ಸಂಪೂರ್ಣವಾಗಿ ನಿಲ್ಲಿಸಲಿದೆ ಎಂದು ಬರೆದಿದ್ದಾರೆ. ತೀರ್ಮಾನದ ಹಿಂದಿನ ಗುಟ್ಟು ಕುತೂಹಲದಾಯಕವಾಗಿರುವ ಕಾರಣ ನಾನು ಇದನ್ನು ಹಂಚಿಕೊಳ್ಳಲು ತೀರ್ಮಾನಿಸಿದೆ.

ಹತ್ತಿ ಬೆಳೆಯುವಾಗ ವ್ಯಾಪಕವಾಗಿ ಎಂಡೊಸಲ್ಫಾನ್ ಉಪಯೋಗಿಸುತ್ತಾರೆ. ಇದನ್ನು ವಿರೋಧಿಸುವ ಸಂಸ್ಥೆಗಳು ನವೀನ ಪ್ರತಿಭಟನೆ ರೂಪಿಸಿದವು. ಅದರ ಅಂಗವಾಗಿ ೧೬ ದೇಶಗಳಲ್ಲಿ ಹಳೆಯ ಉಪಯೋಗಿಸಿದ ಮಾಮೂಲಿ ಕಾಚ ಹಿಂತಿರುಗಿಸಿದ ಜನರಿಗೆ ಸಾವಯುವ ಹತ್ತಿಯಿಂದ ತಯಾರಿಸಿದ ಕಾಚವನ್ನು ಉಚಿತವಾಗಿ ಹಂಚಲಾಯಿತು. ಹೀಗೆ ರಾಶಿ ಬಿದ್ದ ಹಳೆಯ ಕಾಚಗಳನ್ನು ಜರ್ಮನಿಯಲ್ಲಿರುವ ಪ್ರಪಂಚದ ಅತಿ ದೊಡ್ಡ ಎಂಡೊಸಲ್ಫಾನ್ ತಯಾರಕ ಬಾಯರ್ ಕಂಪೇನಿಗೆ ರವಾನಿಸಲಾಯಿತು. ಇಲ್ಲಿ ಅಣಕವೆಂದರೆ ಭಾರತದಲ್ಲಿ   ಬೆಳೆದ   ಸಾವಯುವ ಹತ್ತಿ ಈ ಆಂದೋಲನದಲ್ಲಿ ಗಮನಾರ್ಹ ಪಾತ್ರ ವಹಿಸಿದೆ. ಬದಲಿ ಕೊಟ್ಟ ಕಾಚಗಳು  ತಯಾರಾದುದು ಬಾರತದಲ್ಲಿ ಬೆಳೆದ ಸಾವಯುವ ಹತ್ತಿಯಿಂದ. ಆದರೆ ಬಾರತ ಸರಕಾರ ಮಾತ್ರ ಈ ಆಂದೋಲನದ ವಿರುದ್ದ ಕೆಲಸ ಮಾಡುತ್ತಿದೆ.

ಹಳೆಯ ಕಾಚಗಳ ಪರ್ವತ ಕಂಡು ಬೆದರಿದ ಬಯಾರ್ ಸಂಸ್ಥೆ ಬರುವ ವರ್ಷ ಈ ಕೀಟನಾಶಕ  ತಯಾರಿಕೆ  ಸಂಪೂರ್ಣ ನಿಲ್ಲಿಸಿಲು ಒಪ್ಪಿಕೊಂಡಿತು.

ನಮ್ಮಲ್ಲಿ  ಇಂತಹ    ಎಂಡೊಸಲ್ಫಾನ್  ನಿಷೇದಕ್ಕೆ ಆಂದೋಲನ  ನಡೆಯುವುದಾದರೆ   ಹಳೆಯ ಚಡ್ಡಿ ಕಾಚ ಕಳುಹಿಸಲು ಯೋಗ್ಯ ವಿಳಾಸ,


ಬಾರತ  ಸರಕಾರದ  ಸರ್ವ ತೀರ್ಮಾನಗಳೂ ಕೈಗೊಳ್ಳುವಂತಹ
ದೆಹಲಿ ಸಿಂಹಾಸನದ ಹಿಂದಿನ ಶಕ್ತಿ -
೧೦ ಜನಪತ್ .

2 comments:

Dr.K.G.Bhat,M.B:B.S said...

ಬರಹ ಚೆನ್ನಾಗಿದೆ.ನಮ್ಮಲ್ಲಿ ಮಾತ್ರ ಇನ್ನೂ ಉಪಯೋಗವಾಗುತ್ತಿದೆ ಈ ಅನಿಷ್ಟ.

Chamaraj Savadi said...

ಅಭಿನಂದನೀಯ ಸಂಗತಿಯನ್ನು ಪ್ರಸ್ತಾಪಿಸಿದ್ದೀರಿ. ಲೇಖನ ಇನ್ನೊಂಚೂರು ವಿವರವಾಗಿ ಮೂಡಿಬರಬಹುದಿತ್ತು ಅನಿಸಿತು. ಎಂಡೋಸಲ್ಫಾನ್‌ನ ಅತಿರೇಕಗಳ ಬಗ್ಗೆ ಪದೆ ಪದೆ ಓದಿದ್ದೇನೆ. ಅವುಗಳ ಒಂದಿಷ್ಟು ತುಣುಕನ್ನೂ ಲೇಖನದಲ್ಲಿ ಸೇರಿಸಿದ್ದರೆ, ಕೊಂಡಿ ನೀಡುವುದಕ್ಕಿಂತ ಹೆಚ್ಚು ಸೊಗಸಾಗುತ್ತಿತ್ತು ಅನಿಸಿತು. ಆದರೂ, ಇಂಥ ಎಲ್ಲ ವಿಷಯಗಳನ್ನೂ ಒಂದೇ ಕಡೆ ಪ್ರಸ್ತಾಪಿಸಿದ್ದಕ್ಕಾಗಿ ಅಭಿನಂದನೆಗಳು.