ಪಾಕಿಸ್ಥಾನ ಜಾತ್ಯಾತೀತ ರಾಷ್ಟ್ರವಾಗಬೇಕೆಂದು ಬಯಸಿದ ಜಿನ್ನಾ ರಾಷ್ಟ್ರ ಗೀತೆ ಬರೆಸಲು ಉರ್ದು ಅರಿತ ಹಿಂದು ಕವಿಯ ಹುಡುಕಾಟದಲ್ಲಿದ್ದರು. ಆಗ ಅವರಿಗೆ ದೊರಕಿದ ವ್ಯಕ್ತಿ ಜಗನಾಥ ಅಜಾದ್. ಜಿನ್ನಾ ಅವರಿಂದಲೇ ಅದೇಶ ದೊರೆತ ಅಜಾದ್ ಅವರಿಗೆ ಇಲ್ಲವೆನ್ನಲಾಗಲಿಲ್ಲ. ೧೯೪೭ರ ಆಗಸ್ತ್ ೯ ರಂದು ಸಂದೇಶ ಸಿಕ್ಕ ನಂತರ ಗೀತೆ ರಚಿಸಲು ದೊರೆತ ಸಮಯವಕಾಶ ಕೇವಲ ಐದು ದಿನಗಳು ಮಾತ್ರ.
ಜಗನಾಥ ಅಜಾದ್ ರಚಿಸಿದ ಗೀತೆ ಜಿನ್ನಾ ಅವರಿಗೆ ಒಪ್ಪಿಗೆಯಾಯಿತು. Aey sarzameen-i-pak Zarrey terey hein aaj sitaron sey tabnak Roshan heh kehkashan sey kahin aaj teri khak. ( Oh land of Pakistan, each particle of yours is being illuminated by stars. Even your dust has been brightened like a rainbow ) ಎನ್ನುವ ವಾಕ್ಯಗಳಿರುವ ರಾಷ್ಟ್ರ ಗೀತೆ ಅಂದಿನ ರಾಜದಾನಿ ಕರಾಚಿಯಲ್ಲಿದ್ದ ಪಾಕಿಸ್ಥಾನ ರೇಡಿಯೊದಲ್ಲಿ ಪ್ರಥಮ ಬಾರಿಗೆ ಬಿತ್ತರಿಸಲಾಯಿತು. ಒಂದೂವರೆ ವರ್ಷ ಇದು ಪಾಕಿಸ್ಥಾನದ ರಾಷ್ಟ್ರಗೀತೆಯಾಗಿತ್ತು. ಜಿನ್ನಾರ ಮರಣದ ನಂತರ ಎಲ್ಲವೂ ಇಸ್ಲಾಂಮಯವಾಗಿ ಹಫೀಜ್ ಜಲಂದರಿ ಬರೆದ ಗೀತೆ ರಾಷ್ಟ್ರ ಗೀತೆಯಾಯಿತು.
ಮೇಜರ್ ಜಸ್ವಂತ್ ಸಿಂಗ್ ಅವರನ್ನು ಕಮಲ ಪಕ್ಷ ಹೊರದಬ್ಬುವಾಗ (ಅಲ್ಲಲ್ಲ, ದೂರವಾಣಿಯಲ್ಲಿ ತಲಾಖ್-ಸಿದ್ದು) ಜಿನ್ನಾ ಅವರ ಜಾತ್ಯಾತಿತವಾದದ ಚಿಂತನೆ ಪ್ರಸ್ತುತವೆನಿಸುತ್ತದೆ. ಜಾತ್ಯಾತಿತವಾದ ಸಂದೇಶವಿರುವ ಅವರ ಪ್ರಥಮ ಬಾಷಣ ಸಾಕಷ್ಟು ಪ್ರಚಾರ ಕಂಡ ಕಾರಣ ಇಲ್ಲಿ ಉಲ್ಲೇಖಿಸುವುದಿಲ್ಲ. ಹಿಂದುಗಳಿಗೆ ಒಳಿತಾಗುವುದು ಜಿನ್ನಾ ಅವರ ಚಿಂತನೆ ಖಂಡಿಸುವುದರಲ್ಲಿ ಅಲ್ಲ.
Monday, August 24, 2009
Subscribe to:
Post Comments (Atom)
No comments:
Post a Comment