Wednesday, August 12, 2009

ಹಂದಿ ಜ್ವರದ ಸುಳಿವು ದಶಕಗಳ ಹಿಂದೆ ಕಸ್ತೂರಿಯಲ್ಲಿ



ಈಗ ಎಲ್ಲಾ ಕಡೆಗಳಲ್ಲೂ ಹಂದಿ ಜ್ವರದ್ದೇ ಸುದ್ದಿ. ಇದು ತನ್ನಷ್ಟಕೆ ತಾನೆ ಮೆಕ್ಷಿಕೊದಲ್ಲಿರುವ ಹಂದಿ ಕಾರ್ಖಾನೆಯಿಂದ ಸುರುವಾಯಿತೊ ಅಲ್ಲ ಲಾಬಕೋರ ಮದ್ದು ಕಂಪೇನಿ   ಕಿತಾಪತಿ   ಇದರ ಹಿಂದೆ ಇದೆಯೋ ಎನ್ನುವ ಸಂಶಯವೂ ಚಲಾವಣೆಯಲ್ಲಿದೆ. ನಾನು ಈ ವಿಚಾರದಲ್ಲಿ ತಜ್ನನಲ್ಲವಾದರೂ ಮದ್ದು ಕಂಪೇನಿಗಳ ಕೊಳಕು ವ್ಯವಹಾರ ಬಗ್ಗೆ ಸ್ವಲ್ಪ ಅರಿತಿದ್ದೇನೆ. ಸುಮಾರು ನಲುವತ್ತು ವರ್ಷ ಹಿಂದೆ ಕಸ್ತೂರಿಯಲ್ಲಿ ಪ್ರಕಟವಾದ ಅಲೋಪತಿ ವೈದ್ಯರಾದ ಡಾ. ಮರಕಿಣಿ ಅವರ ಪುಟ್ಟ   ಕಥೆಯೊಂದು ನೆನಪಾಯಿತು.


ಅಡ್ಯನಡ್ಕದಲ್ಲಿರುವ ಹಳ್ಳಿ ವೈದ್ಯರಿಗೆ ಕೇಸಿಲ್ಲ. ನೊಣ ಹೊಡೆಯುತ್ತಾ ಕೂತಿದ್ದರು. ಕಂಪೌಂಡರ್ ಮಣಿ ಇದ್ದಕ್ಕಿದ್ದಂತೆ ನಾಪತ್ತೆ. ನಾಲ್ಕು ದಿನ ಕಳೆದು ಬಸ್ಸಿನಿಂದಿಳಿಯುವಾಗ ಮಣಿರಾಯನಿಗೆ ಸಕತ್ ಜ್ವರ ಕೆಮ್ಮು ಇತ್ಯಾದಿ. ಡಾಕ್ಟರ್ ಕೊಟ್ಟ ಔಷದಿಯಲ್ಲಿ ಗುಣ. ಅಷ್ಟರಲ್ಲಿ ಊರಿನವರಿಗೆ ಜ್ವರ ಹಬ್ಬಿತು. ನಮ್ಮ ಡಾಕ್ಟ್ರ ಮದ್ದು ರಾಮಬಾಣವೆಂದು ಮಣಿ ಪ್ರಚಾರ ಮಾಡಿದ. ಅಂತೂ ಬೇಕಾದಷ್ಟು ಕೇಸುಗಳು ದವಾಖಾನೆಗೆ. ಗುಟ್ಟಾಗಿ ವಿಚಾರಿಸಲು ಮಣಿಪಾಲ ಆಸ್ಪತ್ರೆಗೆ ವಿದೇಶಿ ವಿಜ್ನಾನಿಗಳು ಬಂದು ಫ್ಲೂ ಬಗೆಗೆ ಸಂಶೋದನೆ ನಡೆಸುತ್ತಿದ್ದರು. ಇದು ಗೊತ್ತಾದ ಮಣಿ ಹೋಗಿ ತಾನು ಬಲಿಪಶುವಾಗಲು ರೆಡಿ ಎಂದು ಹೇಳಿ ಸೀಕು ಚುಚ್ಚಿಸಿಕೊಂಡ. ಜ್ವರ ಜೋರಾದಾಗ ಅಲ್ಲಿಂದ ತಪ್ಪಿಸಿಕೊಂಡು ಓಡಿ ಬಂದು ಊರಲ್ಲಿ ಜ್ವರ ಹಬ್ಬಿಸಿದ.

ಕಳೆದ   ವಾರ   ಗೆಳೆಯ ವ್ಯಂಗ ಚಿತ್ರಕಾರ ಸತೀಶ  ಆಚಾರ್ಯರು ಬಾರತ ಇನ್ನೂ ಹಂದಿ ಜ್ವರಕ್ಕೆ ತಯಾರಾಗಿಲ್ಲ ಎಂದು ಅಭಿಪ್ರಾಯ ಪಟ್ಟಿದ್ದರು.     ಇದ್ದಕ್ಕಿದ್ದಂತೆ ದಾರಾಳ ಹಣ ಖರ್ಚು ಮಾಡುತ್ತಿರುವವನು ಅಲ್ಲಿ ದರೋಡೆ ಮಾಡಿರಬಹುದೆಂಬ ಅನುಮಾನ ಪಡುವಂತೆ ಈ ಸೀಕು ಬಂದ ಸಮಯವನ್ನು ನೋಡುವಾಗ ಕಂಪೇನಿಯ ಕೈವಾಡ ಅಲ್ಲಗಳೆಯುವಂತಿಲ್ಲ.     ಜನ ತರಗಗೆಲೆಯಂತೆ ಉದುರಿದರೆ ಮಾತ್ರ ಸರಕಾರದ ಮೇಲೆ ಒತ್ತಡ ಬಿದ್ದು ಕಾಸು ಪೀಕಿಸಲು ಸಾದ್ಯ. ಈ ವಿಚಾರದಲ್ಲಿ ಮದ್ದಿನ ಕಂಪೇನಿಗಳ ನಿಪುಣತೆ ಪ್ರತ್ನಾತೀತ.

ಈ ಬಗೆಗೆ ಮಂಗಳೂರಿನ ವೈದ್ಯರಾದ ಶ್ರೀನಿವಾಸ ಕಕ್ಕಿಲ್ಲಾಯರು ಮೂರು ತಿಂಗಳು ಮೊದಲು ಅಂದರೆ ಮೆ ಎರಡನೇಯ ವಾರದಲ್ಲಿಯೇ ತಮ್ಮ ಆರೋಗ್ಯ ಸಂಪದ ಬ್ಲೋಗಿನಲ್ಲಿ ಬರೆದಿದ್ದಾರೆ. ಅಲ್ಲಿಂದ ಕದ್ದ ಕೆಲವು ವಾಕ್ಯಗಳು ಇಲ್ಲಿವೆ.


ಈಗ ಅಮೆರಿಕಾ ಮಾರುಕಟ್ಟೆಯಿಂದ ಭಾರತವೂ ಸೇರಿ ಜಗತ್ತಿನ ಮಾರುಕಟ್ಟೆಗೆ ಲಗ್ಗೆ ಇಡಲು ಈ ವ್ಯಾಕ್ಸಿನೇಷನ್ ಕಂಪನಿಗಳು ಸಿದ್ಧತೆ ನಡೆಸುತ್ತಿವೆ. ಈ ಪ್ರಚಾರದ ಪ್ರಕ್ರಿಯೆಯ ಅಂಗವೇ “ಹಂದಿ ಜ್ವರ”. ಜನರಲ್ಲಿ ಭಯವನ್ನು ಉತ್ಪಾದನೆ ಮಾಡಿ ವ್ಯಾಕ್ಸಿನೇಷನ್ ವ್ಯಾಪಾರ ವೃದ್ಧಿಸುವುದೇ ಇದರ ಉದ್ದೇಶ. ಅಮೆರಿಕಾದಂಥ ವಿದ್ಯಾವಂತ ಜನರಿಗೇ ಮೋಸ ಮಾಡಬಹುದಾದರೆ, ಭಾರತದ ಜನರಿಗೆ ಮೋಸ ಮಾಡುವುದು ಸುಲಭವೆಂದು ಹೇಳಬಹುದು. ಅಮೆರಿಕಾ ಅಧ್ಯಕ್ಷ ಓಬಾಮಾರವರೇ ಇದಕ್ಕೆ ಸ್ವರ ಸೇರಿಸಿರಬೇಕಾದರೆ, ನಮ್ಮ ದೇಶದ ರಾಜಕಾರಣಿಗಳಿಗೆ ದಾರಿ ಇನ್ನೂ ಸುಲಭವೆಂದು ಹೇಳಬಹುದು. ಆದ್ದರಿಂದ ವ್ಯಾಕ್ಸಿನೇಷನ್ ತೆಗೆದುಕೊಳ್ಳಲು ಸಿದ್ದರಾಗಿ !!


ಇಂದು ನನಗೆ ಡಾ|   ಕಕ್ಕಿಲ್ಲಾಯರ ಬರಹದ ಸುಳಿವು ಕೊಟ್ಟ ಗೆಳೆಯ ಅಭಯರ ಬ್ಲೋಗಿನಲ್ಲಿರುವ ಟಿಪ್ಪಣಿ ಅರ್ಥಪೂರ್ಣ.

ಅವರ ಲೇಖನಕ್ಕೆ ತಮ್ಮನ್ನು ದಾಟಿಸುವ ಮುನ್ನ ಅದಕ್ಕೇ ಪೂರಕವಾಗಿ ಎರಡು ಮಾತು. ಸಾಮಾಜಿಕ ಅಭಿಪ್ರಾಯವನ್ನು ರೂಪಿಸುವಲ್ಲಿ ನಮ್ಮ ಮಾಧ್ಯಮಗಳದ್ದು ಭಾರೀ ದೊಡ್ಡ ಪಾತ್ರವಿದೆ. ಭಾರತದಲ್ಲಿ ಪ್ರತಿ ಕ್ಷಣ ಎಷ್ಟು ಮಕ್ಕಳು ಸಾಯುತ್ತಿದ್ದಾರೆ ಎಂದು ನಿಮಗೆ ಗೊತ್ತೇ? ಅವುಗಳಿಗೆ ಕಾರಣ ನಿಮಗೆ ಗೊತ್ತೇ? ಆದರೆ ಹಂದಿ ಜ್ವರದಿಂದ ಸತ್ತ ಅಷ್ಟೂ ಮಕ್ಕಳ ಸಂಖ್ಯೆ ನಿಮಗೆ ಗೊತ್ತು. ಏಕೆಂದರೆ, ಅದನ್ನು ಮಾಧ್ಯಮ ನಿಮಗೆ ತಿಳಿಸಿದೆ. ಆ ಮಕ್ಕಳು ಹಂದಿ ಜ್ವರಕ್ಕೆ ಮದ್ದು ಇದ್ದರೂ ಏಕೆ ಸತ್ತರು? ಇದರ ಬಗ್ಗೆ ಯೋಚಿಸಿದ್ದೀರಾ? ಒಮ್ಮೆ ಯೋಚಿಸಿದರೆ ನಿಮಗೆ ಮಾಧ್ಯಮಗಳ ಹಾಗೂ ವೈದ್ಯಕೀಯ ರಂಗದ ಖಳನಾಯಕರ ಕುತಂತ್ರ ನಿಮಗೆ ಥಟ್ಟನೆ ಅರ್ಥವಾಗದೇ ಹೋಗದು. ಎಲ್ಲಾ ಮನಸ್ಸುಗಳನ್ನು ನಿಯಂತ್ರಿಸುವ, ಪರ-ವಿರೋದ ಅಭಿಪ್ರಾಯ ಮೂಡಿಸುವಲ್ಲಿ ಮಹತ್ತರ ಪಾತ್ರವಹಿಸುವ ಒಂದು ಏರ್ಪಾಡಿನ ನಿಯಂತ್ರಣ ಓರ್ವ ವ್ಯಕ್ತಿಯ ಕೈಯಲ್ಲಿ ಇರುವುದು ಎಂಥಾ ಅಪಾಯ ಎಂದು ಒಮ್ಮೆ ಯೋಚಿಸಿ ನೋಡಿ.

ಎರಡು ದಿನ ನಂತರ ಸೇರಿಸಿದ ಪೂರಕ ಮಾಹಿತಿ


ಹಿರಿಯ ವೈಜ್ನಾನಿಕ ಬರಹಗಾರ ಹಾಗೂ ಪ್ರಜಾವಾಣಿಯ ಅಂಕಣಕಾರರಾದ ಶ್ರೀ ನಾಗೇಶ ಹೆಗಡೆ ಗುರುವಾರ ಈ ವಿಚಾರವನ್ನು ಜ್ವರ ಮತ್ತು ಬರದ ನಡುವೆ ಬಯೋತ್ಪಾತದ ಅಬ್ಬರ ಎಂದು ತಲೆಬರಹ ಕೊಟ್ಟು ಸರಳವಾಗಿ ವಿವರಿಸಿದ್ದಾರೆ. ನಾನು ಬರೆದಂತೆ ಇದು ಮದ್ದಿನ ಕಂಪೇನಿಗಳ ಕಿತಾಪತಿ ಆಗಿರುವ ಸಾದ್ಯತೆಯನ್ನು ಅನುಮೋದಿಸಿದ್ದಾರೆ.        ಡಾ ಶ್ರೀನಿವಾಸ ಕಕ್ಕಿಲ್ಲಾಯರಂತೆ ಶ್ರೀ ನಾಗೇಶ ಹೆಗಡೆಯವರೂ ಮೂರು ತಿಂಗಳ ಹಿಂದೆ ಇದರ ಸುಳಿವು ದೊರೆತು ಎಚ್ಚರಿಕೆ ಕೊಟ್ಟಿದ್ದಾರೆ. ಅವರ ಮೆ ತಿಂಗಳ ಬರಹದ ಕೊಂಡಿ ಇಲ್ಲಿದೆ.

                            

No comments: