Monday, August 10, 2009

ವೃತ್ತಿ ಮೌಲ್ಯಗಳ ಕೊರತೆಯ ಮುಖಗಳು

ವೃತ್ತಿ ಮೌಲ್ಯಗಳ ಕೊರತೆಯಿಂದಲೇ ದೆಹಲಿ ಮೆಟ್ರೊ ಅವಘಡ ಸಂಬವಿಸಿತು ಎಂದು ನಿನ್ನೆಯ ಕನ್ನಡ ಪ್ರಭ ಪತ್ರಿಕೆಯಲ್ಲಿ ಅದರ ಮುಖ್ಯಸ್ಥ ಶ್ರೀಧರನ್ ಹೇಳಿದ್ದಾರೆ.
ಕಳಪೆ ಕೆಲಸಗಳ ಬಗೆಗೆ ಹತ್ತು ವರ್ಷ ಹಿಂದಿನ ಮಾತು ಮತ್ತು ಪ್ರತಿಕ್ರಿಯೆ ನೆನಪಾಯಿತು.
ಇಂಗ್ಲೇಂಡಿನ ರಾಣಿಯ ಸಂಗಾತಿ ಫಿಲಿಪರಿಗೆ ಜನಾಂಗಿಯ ತಾತ್ಸಾರ ಎಂಬ ಸೀಕು. ಸಾರ್ವಜನಿಕವಾಗಿಯೇ ಬಾಯಿ ಚಪಲ ಪ್ರದರ್ಶನ. ಕಳಪೆ ಕೆಲಸ ಕಂಡು ಇದು ಮಾಡಿದ್ದು ಬಾರತೀಯನಿರಬೇಕು ಎನ್ನುವ ಉದ್ಗಾರ. ಅದಕ್ಕೆ ಮಾದ್ಯಮಗಳ ವ್ಯಾಪಕ ಪ್ರಚಾರ.

ಇಂಡಿಯನ್ ಎಕ್ಸ್ ಪ್ರೆಸ್ ಸಂಪಾದಕ ಶೇಖರ ಗುಪ್ತ ಅವರ ಅಂಕಣದಲ್ಲಿ ಸರಿಯಾಗಿ ಹತ್ತು ವರ್ಷ ಹಿಂದೆ ಆಗಸ್ತ್ ೧೯೯೯ರಲ್ಲಿ ಈ ವಿಚಾರ ವಿಮರ್ಷೆ ಮಾಡಿದರು. ಈ ಬರಹ ನನ್ನ ಮನಸ್ಸಿನಲ್ಲಿ ಅಂದಿನಿಂದಲೂ ಅಚ್ಚೊತ್ತಿದಂತಾಗಿದೆ.   ಇದನ್ನು ಇನ್ನೊಂದು ನಿಯತಕಾಲಿಕದ ಅಂಕಣಕಾರ ತರುಣ್ ತೇಜ್ ಪಾಲ್ ಅನುಮೋದಿಸಿದ್ದರು.  

ವೃತ್ತಿ ಮೌಲ್ಯಗಳು ಹಾಗೂ ಕೆಲಸದ ಗುಣಮಟ್ಟ ಕುಸಿಯುತ್ತಲೇ ಇರುವುದು ಬೇಸರದ ವಿಚಾರ. ಬೇಡಿಕೆ ಇರುವ ಕಾರಣ ಸುದಾರಿಸಿಕೊಂಡು ಹೋಗುವ ಅನಿವಾರ್ಯತೆ. ವಿಶ್ವ ಮಟ್ಟದ ಕೆಲಸಗಾರರ ತಯಾರು ಮಾಡುವ ಸಾಮರ್ಥ್ಯ ನಮಗಿದ್ದು ಎಲ್ಲ ಹಂತಗಳಲ್ಲೂ ಎಡವಿದ್ದೇವೆ.


ಚೀನಾದಲ್ಲಿ ಕೆಲಸ ಮಾಡುತ್ತಿರುವ ರಮೇಶ್ ಅವರು ಚೀನಾದ ಕೆಲಸಗಾರರ ವೃತ್ತಿಪರತೆ ಬಗೆಗೆ ತಮ್ಮ ಬ್ಲೋಗಿನಲ್ಲಿ ಹೇಳಿಕೊಂಡಿದ್ದಾರೆ. ಅವರಿಂದ ನಾವು ಕಲಿಯುವುದು ಸಾಕಷ್ಟಿದೆ. ಆದರೆ ಮನಸ್ಸು ಬೇಕು.  

ಕಡಿಮೆ ಉತ್ಪಾದನೆ, ಕಳಪೆ ಗುಣಮಟ್ಟ ಮತ್ತು ಇವುಗಳ ಉತ್ತಮಗೊಳಿಸಲು ಆಸಕ್ತಿ ಇಲ್ಲದಿರುವುದು ಬಾರತೀಯ ಕೆಲಸಗಾರರ ಋಣಾತ್ಮಕ ವಿಚಾರಗಳು. ಉತ್ತಮ ಕೆಲಸಗಾರರು ಹೊರಹೋಗುವ ಕಾರಣ ಹಳ್ಳಿಗಳಲ್ಲಿ ಪರೀಸ್ಥಿತಿ ಹೆಚ್ಚು ಕಠೀಣವಾದರೂ ವಿಚಾರ ಮರೆಯಲ್ಲೇ ಉಳಿಯುತ್ತದೆ.

No comments: