Wednesday, August 12, 2009

ಪತ್ರಕರ್ತ ಸ್ಕೋಟ್ ಬಾರತದಿಂದ ನಿರ್ಗಮನ

ಚೆನೈಯಲ್ಲಿ ಇದ್ದುಕೊಂಡು ಅಮೇರಿಕದ ಪತ್ರಿಕೆಗಳಿಗೆ ಶೋಧನಾ ಬರಹ ಬರೆಯುತಿದ್ದ ಸ್ಕೋಟ್ ಬಾರತಕ್ಕೆ ವಿದಾಯ ಹೇಳಿದ್ದಾರೆ. ಅಮೇರಿಕದ ಹಲವು ಪತ್ರಿಕೆಗಳಿಗೆ ಬರೆಯುತ್ತಿದ್ದ ಸ್ಕೋಟ್ ಉತ್ತಮ ಸುದ್ದಿ ಶೋದಕ. ಸಲಿಸಾಗಿ ಹಿಂದಿ ಮಾತನಾಡುವ ಇವರಿಗೆ ಎರಡು ದೇಶಗಳಲ್ಲಿ ಜಾಡು ಹಿಡಿದು ಹಿಂಬಾಲಿಸಿ ಪತ್ತೆದಾರಿ ನಡೆಸುವ ನಿಪುಣತೆ ಸಿದ್ದಿಸಿತ್ತು.  

ಅಮೇರಿಕದ ವೈದ್ಯಕೀಯ ಕಾಲೇಜುಗಳಿಗೆ ಬಾರತದಿಂದ ಗೋರಿಗಳ ಅಗೆದು ಅಸ್ಥಿಪಂಜರ ಪೊರೈಕೆ, ಕೊಳೆಗೇರಿಯ ಬಡ ಮಕ್ಕಳನ್ನು ಕದ್ದು ಅನಾಥರೆಂದು ದಾಖಲೆ ತಯಾರು ಮಾಡಿ ವಿದೇಶಿಯರಿಗೆ ದತ್ತು ಸ್ವೀಕಾರಕ್ಕೆ ಮಾರಾಟ, ಸಾಫ್ಟ್ ವೇರ್ ಕಂಪೆನಿಗಳಿಗೆ ಭೂಮಿ ಪೊರೈಕೆ - ರಿಯಲ್ ಎಸ್ಟೇಟ್ ಅವ್ಯವಹಾರ ಸಂಬಂದಿಸಿ ಬೆಂಗಳೂರಿನ ಹೊರವಲಯದಲ್ಲಿ ಮುತ್ತಪ್ಪ ರೈ ಸಂದರ್ಶನ ಇವೆಲ್ಲ ಇವರ ಗಮನಾರ್ಹ ಸಾಧನೆಗಳು.

ಬಿಹಾರದ ಹಳ್ಳಿಗರೊಬ್ಬರ ಅಸ್ಥಿಪಂಜರ ಅಮೇರಿಕ ತಲಪಿದಾಗ ಲಕ್ಷಾಂತರ ರೂಪಾಯಿ ಬಾಳುತ್ತದೆ ಎಂದು ನನಗೆ ತಿಳಿದದ್ದು ಇವರ ಪತ್ತೆದಾರಿ ಕೆಲಸದಿಂದ. ಅಮೇರಿಕದಲ್ಲಿ ಅಸ್ಥಿಪಂಜರಗಳು ಸಿಗುವುದು ದುರ್ಲಭ. ಅದುದರಿಂದ ಹೊರದೇಶಗಳಿಂದ ಮುಖ್ಯವಾಗಿ ಬಾರತದಿಂದ ಅಮದಿಸುವುದು ಅನಿವಾರ್ಯ. ೧೯೮೫ರಲ್ಲಿ ಅಸ್ಥಿ ಪಂಜರ ರಪ್ತು ಮಾದುವುದು ಬಾರತ ಸರಕಾರದಿಂದ ನಿಷೇದಿಸಲ್ಪಟ್ಟರೂ ಕಳೆದ ಇಪ್ಪತ್ತಎರಡು ವರ್ಷಗಳಲ್ಲಿ ವ್ಯವಹಾರ ಅವ್ಯಾಹಿತವಾಗಿ ನಡೆದು ಬರುತ್ತಿದೆ. ಗೋರಿಗಳ ಅಗೆದು ಹೂಳಲ್ಪಟ್ಟ ಹೆಣವನ್ನು ತೆಗೆದು ಮಾಂಸದಿಂದ ಬೇರ್ಪಡಿಸಿ ಅಂದರೆ ಸಂಸ್ಕರಿಸಿ ಅದನ್ನು ಅಮೇರಿಕ ಮತ್ತಿತರ ದೇಶಗಳ ವೈದ್ಯಕೀಯ ವಿದ್ಯಾರ್ಥಿಗಳಿಗಾಗಿ ರಪ್ತು ಮಾಡುವ ಜಾಲ ಸಕ್ರೀಯವಾಗಿದೆ.

ಅನಾಥಾಲಯದಲ್ಲಿದ್ದ ಮಕ್ಕಳ ನೋಡಲು ಚೆನ್ನಾಗಿರಲಿಲ್ಲವೆಂದು ಚೆನ್ನಾಗಿರುವ ಬಡವರ ಮಕ್ಕಳನ್ನು ಕದ್ದು ಸಾಗಾಟದ ಜಾಲ, ಪರದೇಶಿಗಳು ಬಾರತಕ್ಕೆ ಬಂದು ಕಾನೂನಿಗೆ ವಿರೋದವಾಗಿ ಕಿಡ್ನಿ ಖರೀದಿ ಮಾಡುವುದು ಇವೆಲ್ಲರ ಸುಳಿವು ಸಿಕ್ಕಿ ಜಾಡು ಹಿಡಿದು ಹಿಂಬಾಲಿಸಿದ್ದಾರೆ.  ನಮ್ಮಲ್ಲಿ  ಉಳಿದಿದ್ದರೆ  ಇನ್ನೂ ಸಾಧನೆ  ಮಾಡುತ್ತಿದ್ದರೋ  ಏನೊ.  We miss him.

No comments: