ನಾವು ಬೇರೆ ಊರಿನ ಬಗೆಗೆ ಮಾತನಾಡುವಾಗ ಅಲ್ಲಿನ ಜನರ ಜೀವನ, ಹವಾಮಾನ ಇತ್ಯಾದಿ ವಿಚಾರಿಸುತ್ತೇವೆ. ತುಲನಾತ್ಮಕ ಹೋಲಿಕೆ ವಾಪಾಸ್ ಬಂದಾಗ ನನ್ನಲ್ಲಿ ಹಲವರು ಕೇಳಿದ ಸಾಮಾನ್ಯ ವಿಚಾರ. ಎಲ್ಲವೂ ಬಿನ್ನವಾಗಿರುವ ಕಾರಣ ಹೋಲಿಕೆ ಕಷ್ಟಸಾದ್ಯ. ಇದಕ್ಕೊಂದು ಪರಿಹಾರವಾಗಿ ಹಣಕಾಸು ಪತ್ರಿಕೆಯೊಂದು ಪ್ರತಿವರ್ಷ ಬರ್ಗರ್ ಸೂಚ್ಯಾಂಕ ಪ್ರಕಟಿಸುತ್ತದೆ.
ಮಕ್ಡೊನಾಲ್ಡ್ ಹೋಟೆಲ್ ಹೆಚ್ಚಿನ ದೇಶಗಳಲ್ಲಿ ಮಾರುವುದು ಒಂದೇ ಪ್ರಮುಖ ಮಾಲು. ಹಾಮ್ ಬರ್ಗರ್ ಹೆಸರಿನ ಚಪ್ಪಟೆಯಾದ ದನದಮಾಂಸದ ತುಂಡು ಇಟ್ಟಿರುವ ಕತ್ತರಿಸಿದ ಬನ್. ಜತೆಯಲ್ಲಿ ಚೂರು ಸೊಪ್ಪು ತರಕಾರಿ, ಈರುಳ್ಳಿ ತುಂಡು ಇತ್ಯಾದಿ ಹಾಕಿದ ೫೪೦ ಕಾಲರಿಯ ಪಾಕ. ಆದರೆ ಬೇರೆ ಬೇರೆ ದೇಶಗಳಲ್ಲಿ ದರಪಟ್ಟಿಯಲ್ಲಿ ಮಾತ್ರ ಬಹಳಷ್ಟು ವ್ಯತ್ಯಾಸ. ದನದ ಮಾಂಸಕ್ಕೆ ನಮ್ಮಲ್ಲಿ ನಿರ್ಬಂದ ಇರುವ ಕಾರಣ ಬಾರತ ಈ ಪಟ್ಟಿಯಲ್ಲಿ ಗೋಚರಿಸುವುದಿಲ್ಲ.
ಕೆಲವು ದೇಶದಲ್ಲಿ ದುಬಾರಿ, ಕೆಲವರಲ್ಲಿ ಅಗ್ಗವಾಗಿ ಆ ದೇಶದ ಹಣದ ಮೌಲ್ಯವನ್ನು ಈ ಸೂಚ್ಯಾಂಕ ಬೊಟ್ಟು ಮಾಡಿ ತೋರಿಸುತ್ತದೆ. ಅಲ್ಲಿನವರ ಜೀವನಮಟ್ಟ, ಅಲ್ಲಿಗೆ ಹೋದರೆ ಪ್ರವಾಸಿಗಾಗುವ ಖರ್ಚು ಇತ್ಯಾದಿಗಳ ಸೂಚನೆ ಕೂಡುತ್ತದೆ. ಅಮೇರಿಕದಲ್ಲಿ 3.57 ಡಾಲರಿಗೆ ಸಿಗುವ ಬರ್ಗರ್ ಚೀನಾದಲ್ಲಿ ಬರೇ 1.82 ಡಾಲರಿಗೆ ಲಬಿಸುತ್ತದೆ. ಅದೇ ಬರ್ಗರಿಗೆ ನಾರ್ವೆ ದೇಶದಲ್ಲಾದರೆ 6.1 ಡಾಲರ್ ಸ್ವೇಡನಿನಲ್ಲಿ 4.93 ಡಾಲರ್ ಕೊಡ ಬೇಕು. ನಾರ್ವೆ ಸ್ವೇಡನ್ ದುಬಾರಿ ಎನ್ನುವುದು ಸ್ಪಷ್ಟ ವಿಚಾರ.
ನಮ್ಮ ಸಂಬಂದಿಕರು ಹೋಗಿದ್ದರು ಅಮೇರಿಕಕ್ಕೆ, ಮಗಳ ಹೆರಿಗೆಗೆ. ವಾಪಾಸು ಬರುವಾಗ ಅಜ್ಜನ ತಲೆತುಂಬಾ ಕೂದಲು. ವಾಪಾಸ್ ಹೋದ ನಂತರ ಬಾರತದಲ್ಲಿಯೇ ಕಟಾವ್ ಮಾಡಿಸಿ ಎಂದು ಮಗಳು ಅಳಿಯ ಹೇಳಿದರೂಂತ ಕಾಣುತ್ತದೆ. ಇದು ನೆನಪಾಗಲು ಕಾರಣ ಮೊನ್ನೆ ಹೋಲಿಕೆಯ ಬಗೆಗೆ ಹುಡುಕಾಟದಲ್ಲಿ ಒಂದು ಉತ್ತಮ ಉದಾಹರಣೆ ಸಿಕ್ಕಿತು. ಅದನ್ನೇ ಇಲ್ಲಿ ಅಂಟಿಸುತ್ತಿದ್ದೇನೆ. ಅಮೇರಿಕದಲ್ಲಿ ಕ್ಷೌರಿಕನ ಶುಲ್ಕ ದುಬಾರಿ ಎಂದು ಅಲ್ಲಿನವರೇ ಹೇಳಿಕೊಳ್ಳುತ್ತಿದ್ದಾರೆ.
After all, haircuts can't be exported, and this is almost a direct measure of purely labor costs. In the USA, I pay ~$18 for a haircut, inclusive of tips and taxes. In India, on a vacation, I paid Rs.33.75 for a haircut, which is $0.68. Using this exchange, labor is 26.6666 times cheaper in India.
ಸೈಕಲ್ ಪ್ರವಾಸದಲ್ಲಿರುವಾಗ ನಾನೊಮ್ಮೆ ಅಮೇರಿಕದಲ್ಲಿ ಕತ್ತರಿಗೆ ತಲೆಯೊಡ್ಡಿದ್ದೆ. ಅಲ್ಲಿನ ಹಳ್ಳಿಗಳಲ್ಲಿರುವ ಹೆಂಗಸರು ಮನೆಯಲ್ಲಿರುವ ಗಂಡ ಹಾಗೂ ಮಕ್ಕಳ ತಲೆಗೂದಲು ಕತ್ತರಿಸುವುದು ಸಾಮಾನ್ಯ. ಗಂಡ ಎರಿಕ್ ನ ತಲೆಗೂದಲು ನಾನು ಕತ್ತರಿಸೋದು, ಬೇಕಾದರೆ ನಿನ್ನ ತಲೆಗೂದಲು ಕತ್ತರಿಸುತ್ತೇನೆ ಎಂದು ಅತಿಥ್ಯ ಕೊಟ್ಟ ಎರಿಕ್- ಆನ್ ಅವರಲ್ಲಿ ಆತ್ಮೀಯರಾದ ಮನೆಯೊಡತಿ ಆನ್ ಹೇಳಿದಾಗ ನಾನು ಮರುಮಾತಿಲ್ಲದೆ ಒಪ್ಪಿದೆ. ಅಂದು ನನಗೆ ಹತ್ತು ಡಾಲರ್ ಉಳಿಯಿತು. ಮೂರು ತಿಂಗಳ ಬೆಳೆದಿದ್ದ ತಲೆಗೂದಲು ಕಟಾವ್ ಅಯ್ತು.
Saturday, September 05, 2009
Subscribe to:
Post Comments (Atom)
1 comment:
Good one.People in India usually convert the income of their near ones who live in western countries to Indian rupees and boast, without realizing they spend in the respective currencies too.
Post a Comment