ಈಗ ಇಪ್ತರ್ ಕೂಟಗಳ season ಪ್ರಾರಂಬವಾಗಿದೆ. ರಾಜಕೀಯದಲ್ಲಿ ತೂಕ ಇರುವವರೆಲ್ಲ ಇಪ್ತರ್ ಕೂಟ ಏರ್ಪಡಿಸುವವರೇ. ಯಾರ ಇಫ್ತರ್ ಪಾರ್ಟಿಯಲ್ಲಿ ಯಾರು ಯಾರು ಪಾಲ್ಗೊಂಡರು ಎನ್ನುವುದು ರಾಜಕೀಯ ಸಮತೋಲನ ದಿಕ್ಸೂಚಿ. ಅದುದರಿಂದ ಮಾದ್ಯಮ ಪ್ರಚಾರದ ಬೆಂಬಲವೂ ಇರುತ್ತದೆ. ಈ ಇಫ್ತರ್ ಕೂಟಗಳ ವಿಶೇಷ ಏನೆಂದರೆ ನಿಜಕ್ಕೂ ಹಸಿದವನಿಗೆ ಅಲ್ಲಿ ಪ್ರವೇಶವಿಲ್ಲ. ಈ ರಾಜಕೀಯ ದೊಂಬರಾಟದ ಪ್ರಯೋಜನ ಅರಿತು ಇದರ ಲೋಕಪ್ರಿಯವಾಗಿ ಅಮೇರಿಕದಲ್ಲಿ ಪುಟ್ಟ ಜಾರ್ಜ್ ಬುಶ್ ಸಹಾ ಇಫ್ತರ್ ಪಾರ್ಟಿ ಏರ್ಪಡಿಸಿದ್ದರು. ಈ ವರ್ಷ ಬರಾಕ್ ಒಬಾಮ ಬುಶ್ ಮೇಲ್ಪಂಕ್ತಿ ಅನುಸರಿಸಿದ್ದಾರೆ.
ದಾರ್ಮಿಕ ನಾಯಕರ ಪ್ರಕಾರ ಉಪವಾಸ ಕೊನೆಗೊಳ್ಳುವುದು ವೈಯುಕ್ತಿಕವಾಗಿ ಸರಳವಾಗಿರಬೇಕು. ಇಲ್ಲಿ ನೂರಾರು ಜನ ಪಾಲ್ಗೊಂಡು ಅಡಂಬರದ ಪ್ರದರ್ಶನ ಜನಜಾತ್ರೆ ನಡೆಯುತ್ತದೆ. ಇದನ್ನು ಹಲವು ಮುಸ್ಲಿಂ ಪಂಡಿತರು ವಿರೋದಿಸುತ್ತಾರೆ. ದೆಹಲಿಯ ಶಾಹಿ ಇಮಾಂ ಹಲವು ವರ್ಷಗಳಿಂದ ಇದನ್ನು ಪ್ರತಿಭಟಿಸುತ್ತಲೇ ಇದ್ದಾರೆ. ಇವರ ಮಾತಿಗೆ ಯೋಗ್ಯ ಬೆಲೆ ದೊರಕುತ್ತಿದ್ದರೆ ಇಂದು ಇತರ ದರ್ಮದ ಜನರು ಮಾತ್ರ ಇಫ್ತರ್ ಪಾರ್ಟಿಯಲ್ಲಿ ಸೇರಲು ಸಾದ್ಯ.
ಇದರ ಮೂಲದ ಬಗೆಗೆ ಎರಡು ವದಂತಿಗಳಿವೆ. ಅವರ ಪಾಲ್ಗೊಳ್ಳುವಿಕೆ ಮೊದಲ ಕೂಟದಲ್ಲೋ ಎರಡನೆಯದರಲ್ಲಿಯೋ ಅಸ್ಪಷ್ಟ. ಅಂತೂ ಸಂಪ್ರದಾಯ ಬೆಳವಣಿಕೆಯಲ್ಲಿ ಇಂದಿರಾ ಗಾಂಧಿ ಪ್ರದಾನ ಪಾತ್ರ ವಹಿಸುತ್ತಾರೆ.
ಇಂದಿರಾ ಗಾಂಧಿ ಒಬ್ಬ ಕೇಂದ್ರ ಸರಕಾರದ ಹಿರಿಯ ಮುಸ್ಲೀಮ್ ಅಧಿಕಾರಿಯನ್ನು ಬೇಟಿ ಮಾಡಲು ಇಚ್ಚಿಸಿದರು. ಸಂದೇಶ ಕಳುಹಿಸಲು ಸಹಾಯಕರಿಗೆ ಹೇಳಿದರು. ಆಗ ಆ ಸಹಾಯಕ ಅದು ಉಪವಾಸ ಕೊನೆಗೊಳ್ಳುವ ಸಮಯವಾದುದರಿಂದ ಅವರು ಬರಲಿಕ್ಕಿಲ್ಲ ಎಂದಾಗ ಅವರಿಗೆ ಇಲ್ಲಿಯೇ ಉಪವಾಸ ಕೊನೆಗೊಳಿಸಲು ವ್ಯವಸ್ಥೆ ಮಾಡಿ ಎಂದು ಹೇಳಿದರು.
ಎರಡನೆಯದು ಅಂದಿನ ಸಚಿವ ಗುಜ್ರಾಲ್ ಶಫಿ ಕುರೇಶಿ ಎನ್ನುವ ರೈಲು ಮಂತ್ರಿಯನ್ನು ಮಾತುಕತೆಗೆ ಅಹ್ವಾನಿಸಿದರು. ಕುರೇಶಿ ಬರೋದಿಲ್ಲ ಎನ್ನುವಾಗ ನಮ್ಮಲ್ಲಿಯೇ ಇಫ್ತರಿಗೆ ವ್ಯವಸ್ತೆ ಮಾಡುತ್ತೇನೆ ಮಾರಾಯ, ಬಾ ಎಂದ ಗುಜ್ರಾಲ್ ಮರುದಿನ ಇದನ್ನು ಇಂದಿರಾ ಕಿವಿಗೆ ಹಾಕಿದರು.
ಎರಡು ವರ್ಷ ಹಿಂದೆ ಡಾಕ್ಟರ್ ಯೆಡಿಯೂರಪ್ಪನ ಸರಕಾರಕ್ಕೆ ಬೆಂಬಲ ಹಿಂತೆಗೆದು ಕೊಂಡ ನಿದ್ದೇವೆ ಗೌಡ ಬೆಂಗಳೂರಿನಲ್ಲಿ ಇಫ್ತರ್ ಕೂಟ ಏರ್ಪಡಿಸಿದ್ದರು. ಗುಟ್ಟಾಗಿ ಎರಡೂ ಪಕ್ಷಗಳ ಸಂಪರ್ಕದಲ್ಲಿದ್ದು ಮುಂದಿನ ಹೆಜ್ಜೆ ಚಿಂತನೆಯಲ್ಲಿದ್ದರು. ಕೇಂದ್ರ ಸರಕಾರ ವಿಧಾನ ಸಭೆಯನ್ನು ವಿಸರ್ಜಿಸಿದ ಸುದ್ದಿ ಸಂಚಾರವಾಣಿಯಲ್ಲಿ ಕೇಳಿ ಕಳಾಹೀನರಾಗಿ ನೇರವಾಗಿ ಕಾರಿನಲ್ಲಿ ಬಂದು ಕುಳಿತು ನಡೆಯಪ್ಪ ಎಂದು ಸಾರಥಿಗೆ ಆದೇಶಿಸಿದರು.
ಬಾಗಿನ: ದುರ್ಬಳಕೆ ನಿಲ್ಲಲಿ ಎಂದು ಪ್ರಜಾವಾಣಿ ಓದುಗರೊಬ್ಬರು ನಿನ್ನೆ ಹೇಳಿದಂತೆ ಇಫ್ತರ್ ಸಂಪ್ರದಾಯ ಮುಸ್ಲೀಮರಿಗೆ ಸಿಮಿತವಾಗಲಿ ಎಂದು ಸಂಪ್ರದಾಯವಾದಿ ಮುಸ್ಲೀಮರು ಹೇಳುತ್ತಾರೆ. ಆದರೆ ಸದಾ ಸ್ವಾರ್ಥ ಸಾದನೆ ಚಿಂತಿಸುವ ರಾಜಕಾರಣಿಗಳು ಸುಮ್ಮನಿರುವುದು ಹೇಗೆ ?
Tuesday, September 08, 2009
Subscribe to:
Post Comments (Atom)
No comments:
Post a Comment