ನನ್ನ ಒಂದು ಕಣ್ಣು ಹೋದರೇನಾಯಿತು, ಅವನ ಎರಡೂ ಕಣ್ಣು ಹೋಗಿದೆ ಎನ್ನುವಂತೆ ಇಲ್ಲೂ ನಾವು ಬಹಳ ಸಂಬ್ರಮ ಪಡಬಹುದಾದ ವಿಚಾರ ಒಂದಿದೆ. ಪಾಕಿಸ್ತಾನದವರನ್ನು ಎಲ್ಲರನ್ನೂ ಪೂರ್ತಿ ಬತ್ತಲೆ ಮಾಡುತ್ತಾರಂತೆ. ಭಾರತ ಆ ಪಟ್ಟಿಯಲ್ಲಿಲ್ಲ.
ಬರಹಗಾರ ಕಾಲ್ವಿನ್ ಟ್ರಿಲ್ಲಿನ್ ಮೂರು ವರ್ಷ ಹಿಂದೆಯೇ ಇದರ ಸಾದ್ಯತೆಯನ್ನು ಟಿವಿ ಎದುರುಗಡೆ ಹೇಳಿ ಬಿಟ್ಟಿದ್ದರು. ಮೊನ್ನೆ ಸಿಕ್ಕಿಬಿದ್ದ ನೈಜೀರಿಯದ ಭಯೋತ್ಪಾದಕ ಚಡ್ಡಿಯೊಳಗೆ ಹುದುಗಿಸಿದ್ದ ಬಾಂಬು ಡಮಾರ್ ಎಂದಿದ್ದರೆ ಸ್ವರ್ಗದಲ್ಲಿ ಅಶ್ವಾಸನೆ ಪ್ರಕಾರ ಸಿಗುವ ಎಪ್ಪತ್ತೆರಡು ಸುಂದರ ಕನ್ಯೆಯರ ಜತೆ ಸಿಕ್ಕರೂ ಏನೂ ಪ್ರಯೋಜನವಾಗುತ್ತಿರಲಿಲ್ಲ ಎಂದು ಟ್ರಿಲ್ಲಿನ್ ಅಭಿಪ್ರಾಯ ಪಟ್ಟಿದ್ದಾರೆ. ಅವರ ಪತ್ರಿಕಾ ಅಂಕಣದ ಕೊಂಡಿ ಇಲ್ಲಿದೆ.
ಹತ್ತು ವರ್ಷ ಹಿಂದೆ ಮುಂಬಯಿ ವಿಮಾನ ನಿಲ್ದಾಣದಲ್ಲಿ ವಲಸೆ ಅಧಿಕಾರಿಯ ಮುಂದೆ ನಿಂತಿದ್ದೆ. ಅವನೊಬ್ಬ ಇಂಗ್ಲೀಷ್ ಅರಿಯದ ಮುಂಬಯಿ ಪೊಲೀಸ್ ಇಲಾಖೆಯ ಕನಿಷ್ಟ ಬಿಲ್ಲೆ. ಸಾಲಿನಲ್ಲಿ ಎಲ್ಲರನ್ನೂ ಸತಾಯಿಸುತ್ತಿದ್ದ ಕಾರಣ ಬುದ್ದಿವಂತರು ಸಾಲು ಬದಲಾಯಿಸಿದರು. ಅಲ್ಲಿ ಪಂಚೆ ಉಟ್ಟವ ನಾನೊಬ್ಬನೇ ಆದ ಕಾರಣ ಸುಲಭವಾಗಿ ಗುರುತಿಸುವಂತಿದ್ದೆ. ನನ್ನನ್ನು ಹೋಗಲು ಬಿಡುವುದಿಲ್ಲ ಎಂದ ಸರಿ. ಪರವಾಗಿಲ್ಲ ಎಂದು ನಿರ್ಲಿಪ್ತವಾಗಿ ಹೇಳಿದೆ. ಏನೂ ಪ್ರಯೋಜನವಿಲ್ಲ ಅನಿಸಿ ಪಾಸ್ ಪೊರ್ಟಿನಲ್ಲಿ ಮುದ್ರೆ ಒತ್ತಿದ. ಇಂತಹ ಜನಗಳನ್ನೂ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಿಯಮಿಸುವ ನಮ್ಮ ಸರಕಾರದ ಬಗ್ಗೆ ಜುಗುಪ್ಸೆ ಮೂಡುತ್ತದೆ.
No comments:
Post a Comment