Tuesday, December 18, 2012

ನಮಗೆ ಬಂದೂಕು ಸಂಸ್ಕೃತಿ ಬೇಕಾ ?


ಮೊನ್ನೆ  ಅಮೇರಿಕದ  ಶಾಲೆಯೊಂದರೆ  ಇಪ್ಪತ್ತು ಮಕ್ಕಳ ಮತ್ತು  ಆರು   ಟೀಚರುಗಳ  ಕಗ್ಗೊಲೆ ಪ್ರಕರಣ  ಓದುವಾಗ  ನೆನಪಾಯಿತು -  ಒಂದು  ಹಳೆಯ   ಸಂಬಾಷಣೆ.  ಅಮೇರಿಕದ   ಆತ್ಮೀಯ  ಗೆಳೆಯ    ಎರಿಕ್  ಕೇಳಿದ “ ಭಾರತಿಯರು ಅಮೇರಿಕನರ    ಬಗೆಗೆ  ಯಾವ ಅಬಿಪ್ರಾಯ  ಹೊಂದಿದ್ದಾರೆ ? “  ಈ  ಮಹರಾಯನಿಗೆ   ನನ್ನ  ಕೆಣಕುವ  ಹವ್ಯಾಸ.    ನಾನು  ನಗುತ್ತಾ ಉತ್ತರಿಸಿದೆ. “ ಎಲ್ಲರೂ  ಕೋವಿ    ಇಟ್ಟುಕೊಂಡಿರುತ್ತಾರೆ. ಕೆಲವರು  ಎರಡನ್ನು.”  ಆಗ  ಕೈಗಳನ್ನು   ಮೇಲೆತ್ತಿ  ಹೇಳಿದ  ಎರಿಕ್ ನೋಡಯ್ಯಾ  ನನ್ನಲ್ಲಿಲ್ಲ.  ಹಾಗಾದರೆ  ಎಲ್ಲ  ಅಮೇರಿಕದವರೂ  ಕೋವಿ ಇಟ್ಕೊಂಡಿರ್ತಾರೆ  ಅನ್ನುವುದು  ತಪ್ಪು  ಆಲೋಚನೆನಾ  ? 




ಅಲ್ಲ   ನಮಗೆ  ಆ  ಭಾವನೆ  ಬರುವುದು  ಸಹಜ.    ಯಾಕೆಂದರೆ   ಪ್ರತಿ ವರ್ಷ  ಅಮೇರಿಕದಲ್ಲಿ   ಮೂವತ್ತು  ಸಾವಿರಕ್ಕೂ  ಹೆಚ್ಚು ಜನ   ಗುಂಡು ಬಡಿದು  ಸಾಯುತ್ತಾರೆ.  ಅದರಲ್ಲಿ  ಬಹುಪಾಲು  ಸತ್ತವರಿಗೂ  ಗುಂಡಿಕ್ಕಿದವರಿಗೂ  ಪರಿಚಯನೇ  ಇರೋದಿಲ್ಲ.     ಮೊನ್ನೆ  ಅಮೇರಿಕ್ದಲ್ಲಿ   ಶಾಲಾ  ದಾಳಿಯ ದಿನವೇ   ದೇಶದ  ಇನ್ನೊಂದು ಬಾಗದಲ್ಲಿ  ಒಬ್ಬ      ಎಲ್ಲರನ್ನೂ  ಉಡಾಯಿಸ್ ಬಿಡ್ತೇನೆ  ಅಂತ   ಬೆದರಿಸಿದ್ದ.   ಈ    ಅರೆ ಹುಚ್ಚನನ್ನು  ಪೋಲಿಸರು ವಶಕ್ಕೆ  ತೆಗೆದುಕೊಂಡಾಗ     ೪೭  ಕೋವಿಗಳೂ  ಅಪಾರ  ಮದ್ದುಗುಂಡುಗಳೂ  ಅವನ ಮನೆಯಲ್ಲಿದ್ದವು.   ಅವನ  ಮನೆಯಲ್ಲಿ  ಸುಮಾರು  ನಮ್ಮ  ಹಣದಲ್ಲಿ ಹೇಳೊದಾದ್ರೆ  ಐವತ್ತೈದು ಲಕ್ಷ  ರೂಪಾಯಿ  ಮೌಲ್ಯದ   ಸ್ಪೋಟಕ    ಮಾಲು    ಅವನಲ್ಲಿತ್ತು. 

ಆ  ದೇಶದಲ್ಲಿ  ಕೋವಿ ಪರವಾದ  ಲಾಬಿ  ರಾಜಕೀಯವಾಗಿ   ಬಹಳ  ಶಕ್ತಿವಂತವಾಗಿದ್ದು  ಹೆಚ್ಚಿನ   ಬೆಂಬಲವಿದ್ದುದು   ಮೊನ್ನೆ  ಸೋತ  ಆನೆ  ಪಕ್ಷದವರದು.    ಏನಾದರೂ   ಗಲಾಟೆ ನಡೆದಾಗ  ಸಂಬಂದಿಸಿದವರ  ಟಿವಿ  ಚರ್ಚೆಗೆ  ಅಹ್ವಾನಿಸುವ  ಸಂಪ್ರದಾಯ  ನಮ್ಮಲ್ಲಿರುವಂತೆ  ಅಲ್ಲೂ  ಇದೆ.   ಹಾಗೆ  ಮೂವತ್ತ ಒಂದು   ಕೋವಿವಾದಿ    ರಾಜಕಾರಣಿಗಳಿಗೆ  ಅಹ್ವಾನ  ಹೋದರೂ  ಯಾರೂ  ಸ್ವೀಕರಿಸಲಿಲ್ಲ.   ಎಲ್ಲರೂ  ಮಾದ್ಯಮದಿಂದ  ಅಡಗಿದ್ದಾರೆ.   ಅಲ್ಲಿನ   ಪತ್ರಿಕೆಯೊಂದರಲ್ಲಿ   ಸುದ್ದಿ  ಮತ್ತು   ಕ್ರಿಸ್ ಮಸ್  ಪ್ರಯುಕ್ತ   ರೀಯಾಯತಿ     ಕೋವಿ  ಮಾರಾಟದ ಜಾಹಿರಾತು  ಸಲೀಸಾಗಿ ಅಕ್ಕಪಕ್ಕದಲ್ಲಿ ಹಾಕಿರುವುದನ್ನು  ನೋಡಬಹುದು.     ಒಬಾಮ  ಪಕ್ಷದ  ಹೆಚ್ಚಿನವರು    ಬೆಂಬಲಿಸುವ  ಕೋವಿ ವಿರೋದಿ  ಕಾನೂನು ಅಲ್ಲಿ  ಬೇಗದಲ್ಲಿ   ಜಾರಿಗೆ ಬರಲೆಂದು  ಆಶೀಸೋಣ.   ತಡವಾದರೆ  ಪುನಹ  ’ ಕೋವಿವಾದಿಗಳು  ’   ಒಗ್ಗಟ್ಟಾಗಿ   ಅವರದೇ    ಕೈ ಮೇಲಾಗುತ್ತದೆ.





ನಮ್ಮನೆಯಲ್ಲೂ   ಒಂದು ಕೋವಿ ಇತ್ತು.     ನನ್ನ  ಅಜ್ಜ   ಅಂದರೆ  ಅಪ್ಪನ  ಚಿಕ್ಕಪ್ಪ ೧೯೨೮ರಲ್ಲಿ  ಮದ್ರಾಸಿನಲ್ಲಿ ನಡೆದ  ಕಾಂಗ್ರೇಸ್  ಅಧಿವೇಶನಕ್ಕೆ  ಹೋಗಿದ್ದರು.  ಹೋದ  ನೆನಪಿಗೆ   ಎನಾದರೂ  ತರಬೇಕಲ್ಲ.    ಹಾಗೆ    ಬರುವಾಗ ತಂದದ್ದು ಒಂದು ಒಂಟಿ ನಳಿಗೆ  ಕೋವಿ.  ಮಕ್ಕಳಿಲ್ಲದೆ  ಅವರು  ತೀರಿಕೊಂಡಾಗ  ಅಜ್ಜಿ  ಅದನ್ನು ನನ್ನಪ್ಪನ  ವಶಕ್ಕೊಪ್ಪಿಸಿದರು.  ಪರಿಣಾಮವಾಗಿ     ನನ್ನಪ್ಪನೂ  ಕೋವಿ ಲೈಸೆನ್ಸ್ ದಾರರಾದರು.  

ನನ್ನ ಹುಚ್ಚಾಟ  ತಿರುಗಾಟವೆಲ್ಲ  ಮುಗಿದು ಮನೆಯಲ್ಲಿ ಕೃಷಿ ಸಹಾಯಕ್ಕೆ  ತೊಡಗಿಸಿಕೊಂಡಿದ್ದೆ.  ಆ ಸಮಯ  ಕೋವಿ ಪರವಾನಿಗೆ  ನವೀಕರಣ  ಸಮಯವಾಯಿತು.  ನನ್ನಲ್ಲಿ ಅಪ್ಪ  ಹೇಳಿದರು – ನನಗೆ ವಯಸ್ಸಾಯಿತು.   ಕೋವಿ ಲೈಸೆನ್ಸ್  ಇನ್ನು    ನಿನ್ನ ಹೆಸರಿಗೆ ಮಾಡುತ್ತೇನೆ.  ಅಗ  ನಾನು,   " ಅದರಲ್ಲಿ ನನಗೆ ನಂಬಿಕೆ ಇಲ್ಲ"ವೆಂದು  ಉತ್ತರಿಸಿದೆ.  ಅದಕ್ಕೆ  ಅವರು  -   ಪರವಾನಿಗೆ  ನವೀಕರಣ ಆಗದೆ ಮನೆಯಲ್ಲಿ ಇಟ್ಟುಕೊಳ್ಳುವಂತಿಲ್ಲ.  ಹಾಗಾಗಿ ಅದನ್ನು  ಪೋಲಿಸ್  ಠಾಣೆಯಲ್ಲಿ  ಇಡುತ್ತೇನೆ.  ಅದು ಸರಕಾರಕ್ಕಾಗಲಿ.  [ ಅಕಸ್ಮಾತ  ಬೇಕೆನಿಸಿದರೆ   ಲೈಸೆನ್ಸ್  ಮಾಡಿಸಿದ  ನಂತರ  ತರಬಹುದು.]     ನಾನು ಸಂತೋಷದಿಂದ  ಒಪ್ಪಿ  ಅಪ್ಪನನ್ನು   ವಿಟ್ಲದ    ಪೋಲಿಸ್ ಠಾಣೆಗೆ ಕರೆದುಕೊಂಡು   ಹೋದೆ.   “ನಣ  ಇಂದು  ನಿಕ್ ಳೆಗ್  “   ಅಂತ   ಹೇಳಿ  ಅವರು  ಅದನ್ನು  ಅಲ್ಲಿ  ಒಪ್ಪಿಸಿಬಂದರು.  ಇದು ಇಪ್ಪತ್ತು  ಇಪ್ಪತ್ತ  ನಾಲ್ಕು   ವರ್ಷ  ಹಿಂದಿನ  ಮಾತು. 

ಪುಣ್ಯಕ್ಕೆ  ಇದರ  ಮೇಲೆ  ಕಣ್ಣಿಟ್ಟಿದ್ದ  ಖರೀದಿಸುವ  ಆಸಕ್ತಿ ಇದ್ದ  ಯಾರಿಗೂ  ಇದರ  ಸುಳಿವು ಸಿಗಲಿಲ್ಲ.  ಅಕಸ್ಮಾತ್  ಗೊತ್ತಾದರೆ  ನಾವು  ತುಂಬಾ   ಒತ್ತಡಕ್ಕೆ  ಒಳಗಾಗುತ್ತಿದ್ದೆವು.  ಖಾಸಗಿ  ಸಂಗ್ರಹದಿಂದ  ಒಂದು  ಕೋವಿ  ಸರಕಾರಕ್ಕೆ  ಹೋದದ್ದು  ನನಗೆ ಸಂತಸದ  ವಿಚಾರವೇ.   

ಗೆಳೆಯ  ನಾರಾಯಣ  ಮೂರ್ತಿ  ಹೇಳಿದ ಒಂದು  ಕಥೆ   ನೆನಪಾಗುತ್ತದೆ.  ಹಿಂದೆ  ಕೋವಿ  ಇಟ್ಕೊಳ್ಳುವುದು  ನಿರ್ಬಂದ   ಇದ್ದ  ಮಹಾಯುದ್ದದ  ಸಮಯ.   ಹಾಗೆ  ಒಮ್ಮೆ ಪರವಾನಿಗೆ  ಇಲ್ಲದ  ಕೋವಿ  ಇರುವ ಗುಮಾನಿಯಲ್ಲಿ ಪೋಲಿಸರು ದಾಳಿ  ಒಂದು ಮನೆಗೆ  ಮಾಡಿದರು. ಇಡೀ ಮನೆ   ಜಾಲಾಡಿದರೂ   ಕೋವಿ ಸಿಗಲಿಲ್ಲ. ಮನೆಯಲ್ಲಿರುವ  ಪುಟ್ಟ  ಹುಡುಗನ ಪೋಲಿಸ  ಇನ್ ಸ್ಪೆಕ್ಟರ್   ಪುಸಲಾಯಿಸಿದರು.  ತಾವು  ಹುಡುಕುತ್ತಿರುವ  ಸಾಮಾನಿನ  ಆಕಾರ  ಹೇಳಿದರು.   ಹುಡುಗ  ಚುರುಕಾದ  “ ಟಪೋ  ಅನ್ನೋದಾ  ನೀವು ಹುಡುಕಿತ್ತಿರುವುದು.  ಅದು ನನಗೆ ಗೊತ್ತು “ ಎಂದು   ಮಾಡಿನ  ಮರೆಯಲ್ಲಿ ಅಡಗಿಸಿಟ್ಟಿದ್ದ  ಕೋವಿ  ತೋರಿಸಿದ.  ಆ ಹುಡುಗ  ಮುಂದೆ  ಊರ ಶಾಲೆ  ಮಾಸ್ತರ್ ಆದ  ನಂತರ  ಪುಂಡ ಹುಡುಗರ  ಬಾಯಲ್ಲಿ “  ಟಪೊ “ ಮಾಸ್ತರರಾದ.   

ದೆಹಲಿಯ  ಹೊರವಲಯದ  ಗಜಿಯಾಬಾದಿನಲ್ಲಿ   ಐದು ಸಾವಿರ ಕೋವಿ ಪೋಲಿಸರಲ್ಲಿ  ಇದ್ದರೆ  ಇಪ್ಪತ್ತು ಸಾವಿರ ಕೋವಿ ಲೈಸೆನ್ಸುದಾರರಲ್ಲಿಯೇ ಇದೆ   ಎನ್ನುತ್ತದೆ  ಇಂಗ್ಲೇಂಡಿನ ಪತ್ರಿಕೆಯ  ವರದಿ.    ಲೆಕ್ಕಕ್ಕೆ  ಸಿಗಗಿದುರುವುದು  ಎಷ್ಟೋ,  ಯಾರಿಗೂ  ಗೊತ್ತಿಲ್ಲ.. ನನ್ನಕ್ಕನ  ಮಗ  ಬಿಹಾರದ  ಕಾಲೇಜಿನ  ವಿದ್ಯಾರ್ಥಿಯಾಗಿರುವಾಗ  ಹೇಳುತ್ತಿದ್ದ.  "ಮಾವ,  ಅಲ್ಲೆಲ್ಲ  ’ ಕಟ್ಟಾ ’  ಊರಲ್ಲಿ ತಯಾರದ  ಪಿಸ್ಟೂಲ್  ಹೊಂದುವುದು  ಮಾಮೂಲಿ.   ಕೆಲವೊಮ್ಮೆ  ಹುಡುಗರು  ಶಾಲೆಗೂ  ತರುತ್ತಾರೆ. "

ಪೊಂಟಿ  ಚಡ್ಡಾ ಎನ್ನುವಾತ  ಉತ್ತರ  ಪ್ರದೇಶದ   ಮದ್ಯದ  ದೊರೆ.   ಅವನಿಗೆ ಹಲವು  ಕೋವಿಗಳ  ಪರವಾನಿಗೆ  ಇತ್ತು.     ಸಹೋದರನೊಂದಿಗೆ   ಪಾಲಿನ  ವಿಚಾರ  ಜಗಳ.  ಏನಾದರೂ  ಒಪ್ಪಂದಕ್ಕೆ  ಬರೋಣ  ಅಂತ  ಸೇರಿದರು,  ಇಬ್ಬರ  ಜತೆಯೂ   ದೊಡ್ಡ    ಬೆಂಗಾವಲು ಪಡೆ,    ಹಲವು  ಕೋವಿ ಹಿಡಕೊಂಡ  ರಕ್ಷಕರು.   ಮಾತುಕಥೆ  ಮದ್ಯೆ  ಯಾರೋ ಹಿತೈಶಿಗಳು [?]    ಮೊದಲ ಗುಂಡು ಹಾರಿಸಿ  ಗುಂಡು ಕಾಳಗ ಸುರುಮಾಡಿದರು.   ಗುಂಡಿನ  ಸದ್ದು ನಿಲ್ಲೊವಾಗ  ಪೊಂಟಿ  ಮತ್ತವನ  ಸಹೋದರ  ಇಬ್ಬರೂ  ಹೆಣವಾಗಿ ಮಲಗಿದ್ದರು. 





ನಮ್ಮಲ್ಲಿ  ಕೊಡವರಂತೆ    ಹಲವು ಜನಾಂಗಕ್ಕೆ   ಕೋವಿ ಎಂದರೆ  ಹೆಮ್ಮೆಯ ವಿಚಾರ.  ಅವರ ಕೈಯಿಂದ  ಕೋವಿ ಕಸಿದುಕೊಳ್ಳುವುದು ಕಷ್ಟ ಸಾದ್ಯ.     ಅತಿ  ಹೆಚ್ಚು  ನಾಗರಿಕರ  ಕೈಯಲಿ ಕೋವಿ  ಇರುವ  ಪಟ್ಟಿಯಲ್ಲಿ    ನಮ್ಮ  ದೇಶ  ಎರಡನೆ  ಸ್ಥಾನದಲ್ಲಿದೆಯಂತೆ   ಅಲ್ಲ  ಆಕ್ರಮ  ಕೋವಿಗಳ  ಸೇರಿಸಿದರೆ  ಮೊದಲನೆಯದೋ  ?    ನನ್ನ  ಗ್ರಾಮದಲ್ಲಿಯೇ  ಒಬ್ಬ   (ಕು)ಖ್ಯಾತ   ಅಕ್ರಮ  ಕೋವಿ  ತಯಾರಕನಿದ್ದಾನೆ.  ಅವನು ಹಲವು ಬಾರಿ  ಪೋಲಿಸರು ಹಿಡಿದರೂ   ವ್ಯಾಪಾರ ಲಾಬ  ಅವನನ್ನು  ಸಂಪೂರ್ಣ  ತ್ಯಜಿಸಲು ಬಿಡುವುದಿಲ್ಲ.  

ಸಂಪೂರ್ಣ ಕೋವಿ  ನಿವಾರಣೆ  ಸಾದ್ಯವಿಲ್ಲದ ವಿಚಾರ  ಬಿಡಿ.   ಆದರೂ  ನನ್ನದೊಂದು ಪ್ರಶ್ನೆ -  ನಮಗೆ ಬಂದೂಕು  ಸಂಸ್ಕೃತಿ  ಬೇಕಾ  ?   ನಾವು  ಮನೆಯಲ್ಲಿ  ಕೋವಿ ಇಟ್ಟುಕೊಳ್ಳಬೇಕಾ  ?  

Sunday, December 16, 2012

ಲಕ್ಷ ಜನರಿಗೆ ವಿದ್ಯುತ್ ಕೊಡುವ ಅಜ್ಜಿ ಕಥೆ


ಸೌರ  ವಿದ್ಯುತ್ ಅಥವ   ಪರಿಸರಪೂರಕ  ವಿದ್ಯುತ್  ಉತ್ಪಾದನೆ   ಎಲ್ಲ  ಕನಸಿನ  ಮಾತು, ಅಸಂಬದ್ದ  ಆಲೋಚನೆ   ಅದೆಲ್ಲ  ಆಗುವುದಿಲ್ಲ  ಹೋಗುವುದಿಲ್ಲ  ಎನ್ನುವ  ತರ್ಕ  ನಮ್ಮ  ಸಮಾಜದ   ಹೆಚ್ಚಿನ  ಪಾಲು  ಜನರದ್ದು.   ಆದರೆ  ಇವೆಲ್ಲ  ನಿಜವಾಗಿಸಿದ  ಕಂಪೇನಿ  ಜರ್ಮನಿಯಲ್ಲಿದೆ.   ಇದರ   ಮುಖ್ಯಸ್ಥೆ   ರಾಜದಾನಿಯಲ್ಲಿ ನೆಲೆಸಿಲ್ಲ , ದುಬಾರಿ ಕಾರಿನಲ್ಲಿ  ಓಡಾಡುವುದಿಲ್ಲ ,  ಎಮ್ ಬಿ ಎ  ಕಲಿತಿಲ್ಲ.      ಪ್ರಾಥಮಿಕ  ಶಾಲಾ  ಶಿಕ್ಷಕಿ  ಅಂದರೆ   ಗೊತ್ತಲ್ಲಾ  -     ಪುಟ್ಟ  ಮಕ್ಕಳಿಗೆ   ಅ  ಆ  ಇ ಈ …. ಕಲಿಸೋದು    ಅವರ  ಶೈಕ್ಷಣಿಕ  ಅರ್ಹತೆ.  ಮಕ್ಕಳ ಬವಿಷ್ಯದ  ಬಗೆಗಿನ  ಕಾಳಜಿ  ಐದು ಮಕ್ಕಳ   ಬೆಳೆಸುವುದರಲ್ಲೇ  ನಿರತಳಾಗಿದ್ದ  ಈ  ಮಹಿಳೆಯನ್ನು ಮನೆಯಿಂದ  ಹೊರಗೆಳೆಯಿತು. :rainbow 

ಚೆರ್ನೋಬಿಲ್  ಅಣುವಿದ್ಯುತ್ ಕೇಂದ್ರದಲ್ಲಿ  ಅಪಘಾತವಾಗದಿದ್ದರೆ   ಉರ್ಸುಲಾ    ಸ್ಲಾಡೆಕ್  ಈಗ  ಮೊಮ್ಮಕ್ಕಳ  ನೋಡಿಕೊಳ್ಳುತ್ತಾ  ಇದ್ದರು.  ಅಪಘಾತವಾದುದು  ಎರಡು ಸಾವಿರ  ಕಿಮಿ ದೂರವಾದರೂ  ವಿಕಿರಣ  ಇವರ  ಪರಿಸರದಲ್ಲೆಲ್ಲ  ಹರಡಿ ಬಿದ್ದಿತ್ತು.    ನನ್ನ  ಮಕ್ಕಳು  ಸೊಪ್ಪುತರಕಾರಿ  ತಿನ್ನಬಹುದೋ / ನಮ್ಮ  ಹಾಲು  ಕುಡಿಯಬಹುದೋ  ಇತ್ಯಾದಿ  ಯೋಚನಗೆ  ಕೂರುವಂತಾಯಿತು.   ಸರಕಾರ  ಹಾಲಿನ  ಹುಡಿ  ಉಪಯೋಗಕ್ಕೆ  ಸೂಚನೆಕೊಟ್ಟಿತ್ತು.   ಮನೆಯಲ್ಲಿ    ಐದು  ಮಕ್ಕಳಿದ್ದು    ಮುಂದೆ   ಅವರು  ಜೀವಿಸಲಿರುವ  ಪ್ರಪಂಚದ ಬಗೆಗೆ ಚಿಂತಿಸದೆ  ಇರಲು ಸಾದ್ಯವಾಗಲಿಲ್ಲ.   ಮೊದಲು   ಪ್ರಾಥಮಿಕ  ಶಾಲೆ  ಶಿಕ್ಷಕಿಯಾಗಿದ್ದ   ಸ್ಲಾಡೆಕ್,  ವೈದ್ಯರಾದ    ಅವಳ  ಗಂಡ  ಮತ್ತು   ಅದೇ ರೀತಿಯಲ್ಲಿ ಚಿಂತಿಸುವ   ಜನ  ಸೇರಿ   ಅಣುವಿದ್ಯುತ್  ವಿರೋದಿಸುವ  ಪೋಷಕರ  ತಂಡವನ್ನು  ಕಟ್ಟಿದರು.   



ಆ  ಕಾಲದಲ್ಲಿ  ಜರ್ಮನಿಯ  ವಿದ್ಯುತ್  ಬೇಡಿಕೆ  ಅಣು ವಿದ್ಯುತ್ ಹಾಗೂ  ಕಲ್ಲಿದ್ದಲ್ಲು  ಕೆಂದ್ರಗಳಿಂದ  ಪೊರೈಸಲಾಗುತಿತ್ತು.  ಪರ್ಯಾಯಗಳನ್ನು ಇವರು ಚಿಂತಿಸಲಾರಂಬಿಸಿದರು.   ನೆನಪಿರಲಿ.  ಇವರಿದ್ದುದ್ದು  ಪುಟ್ಟ  ಹಳ್ಳಿ -  ಒಟ್ಟು  ಜನಸಂಖ್ಯೆ  ಬರೇ   ಎರಡು ಸಾವಿರದ  ಮುನ್ನೂರು.  ತಮ್ಮ  ಊರಲ್ಲಿ ಹಲವು   ಸಣ್ಣ  ಪುಟ್ಟ   ಜಲವಿದ್ಯುತ್  ಕೆಂದ್ರಗಳು ನಿಷ್ಕ್ರೀಯವಾಗಿರುವುದರ  ಕಂಡರು.  ಊರ  ವಿದ್ಯುತ್   ಸರಬರಾಯಿ ಕಂಪೇನಿಗೆ   ಅದನ್ನು  ಪುನಶ್ಚೇತನದ ಬಗ್ಗೆ  ವಿನಂತಿಸಿದರೆ “  ನೀನು ಸುಮ್ನೆ  ಕೂತ್ಕೊಳ್ಳಮ್ಮ,  ವಿದ್ಯುತ್  ಬಗೆಗೆ   ನಿನಗೇನು ಗೊತ್ತು “ ಎಂಬ ಹೀಯಾಳಿಕೆ  ಕೇಳಿದರು. :(

ಆದರೆ ಇವರು ಸುಮ್ಮನೆ ಕೂರಲಿಲ್ಲ.   ಇಂದು ಹಿಂತಿರುಗಿ ನೋಡಿದರೆ    ಇವರು  ನಡೆದು ಬಂದ  ದಾರಿ  ಸುಗಮವಾಗಿತ್ತು  ಅನ್ನುವಂತಿಲ್ಲ.     ಸಾಕಷ್ಟು  ಕಲ್ಲು ಮುಳ್ಳಿನ   ಹೊಸ ದಾರಿ.  ವಿಘ್ನಗಳ  ಲೆಕ್ಕಿಸದೆ  ಮುನ್ನಡೆದರು.  ತಮ್ಮ  ತಂಡವ  ಮುನ್ನಡೆಸಿದರು.  ಎರಡು  ಬಾರಿ  ಪ್ರಜಾನಿರ್ಧಾರ  ನಡೆಯಿತು.  ಕೊನೆಗೂ  ಈ ಗುಂಪಿಗೆ  ಜಯವಾಯಿತು.     ಊರ  ವಿದ್ಯುತ್  ಕಂಪೇನಿ  ಕರಾರು ಮುಗಿದು   ಪುನರ್ನಕರಣ   ಸಮಯದಲ್ಲಿ    ತಮ್ಮ  ತಂಡದಿಂದ   ಕರಾರು  ಪಡಕೊಳ್ಳಲು ಅರ್ಜಿ  ಹಾಕಿದರು,   ದಕ್ಕಿಸಿಕೊಂಡರು. 



ತಮ್ಮ    ಊರಲ್ಲಿ   ಪರಿಸರಪೂರಕ ವಿದ್ಯುತ್    ಸರಬರಾಜು  ಎಂದಾಗ  ದೂರದ   ಊರಿನವರೂ  ಅವರಿಗೆ ಹೇಳಿದರು – ನಮ್ಗೂ  ನೀವೇ  ವಿದ್ಯುತ್ ಕೊಡಿ.  ಜರ್ಮನಿಯ  ಕಾನೂನಿನ ಪ್ರಕಾರ  ನಾವು ಸರಬರಾಜು ಕಂಪೇನಿ ಆಯ್ದುಕೊಳ್ಳಬಹುದು.  ಹಾಗೆ ಅದು  ಪುಟ್ಟ  ಹಳ್ಳಿಯ ಗಡಿ  ದಾಟಿ  ದೇಶವ್ಯಾಪ್ತಿ ಉದ್ಯಮವಾಗಿ ಬೆಲೆಯಿತು.   ದೂರದೂರಿನ  ಸೌರ  ಮತ್ತು ಇನ್ನಿತರ  ರಿನ್ಯೂವೆಬಲ್  ಶಕ್ತಿ  ತಯಾರಕರೂ  ಇವರಿಗೆ  ಮಾರಲು  ಒಪ್ಪಿದರು.   ಹಾಗೆ  ಇಂದು  ಒಂದೂ  ಕಾಲು   ಲಕ್ಷಕ್ಕೂ  ಮಿಕ್ಕಿ  ಇವರ  ಕಂಪೇನಿಯ  ಸಂತೃಪ್ತ  ಗ್ರಾಹಕರು. :)   ಹರಿಯುವ  ನೀರು,  ಬೀಸುವ  ಗಾಳಿ,  ಮನೆ  ಬಿಸಿ ಮಾಡುವ  ಇಂಜಿನು  ಹಾಗೂ  ಬೆಳಗುವ  ಸೂರ್ಯ  -    ಇವಷ್ಟೇ  ಕಂಪೇನಿ ಶಕ್ತಿ ಮೂಲಗಳು.   ಉಳಿದ     ಅಣು  ವಿದ್ಯುತ್   ಉಷ್ಣ ವಿದ್ಯುತ್   ಕಂಪೇನಿಗಳ  ಜತೆಯಲ್ಲಿ  ಮಾರುಕಟ್ಟೆಯಲ್ಲಿ   ಯಶಸ್ವಿಯಾಗಿ    ಸ್ಪರ್ಧಿಸುತ್ತಿದ್ದಾರೆ. 

ದಯಮಾಡಿ  ಈ  ಮೇಲಿನ      ವಾಕ್ಯಗಳನ್ನು  ನಮ್ಮಲ್ಲಿರುವ  ತಜ್ಞರು   ಓದಬಾರದಾಗಿ  ಕೋರಿಕೊಳ್ಳುತ್ತೇನೆ.  ಯಾಕೆಂದರೆ  ಅವರ  ತಲೆ  ಹಾಳಾಗುವುದು  ಬೇಡ. :@ 

ಮೊದಲು  ಚಳಿಗಾಲದಲ್ಲಿ ಮನೆಬಿಸಿ  ಮಾಡಲು  ಒಲೆ ಉರಿಸುತ್ತಾ  ಇದ್ದರು.    ಈಗ  ಪುಟ್ಟ  ಇಂಜಿನು ಬಳಸುತ್ತಾರೆ.  ಅದರಲ್ಲಿ  ತಯಾರಾದ  ವಿದ್ಯುತ್   ಅನ್ನು   ವಿದ್ಯುತ್ ಜಾಲಕ್ಕೆ  ಸೇರಿಸಿದರೆ,  ಹೊಗೆಯ  ನಿರುಪಯುಕ್ತವೆಂದು   ಪರಿಗಣಿಸುವ  ಶಾಖವಿದೆಯಲ್ಲ  ಅದು ಮನೆಯನ್ನು ಬಿಸಿ  ಮಾಡುತ್ತದೆ.    ಈ  ಬಗೆಗೆ  ನಾನು ತಿಂಗಳ  ಹಿಂದೆ   ಈ  ವಿಚಾರ     ಬರೆದಿದ್ದೆ. 


ಸಾದ್ಯವಾದಷ್ಟು  ಉಳಿಸಿ  
ಅಂದರೆ   ಅನಿವಾರ್ಯ  ಅನಿಸುವಷ್ಟೇ  ಬಳಸಿ.
ಸ್ಥಳೀಯವಾಗಿ ಉತ್ಪಾದಿಸಿ. 
ಉಳಿದುದನ್ನು ಜಾಲಕ್ಕೆ ರವಾನಿಸಿ.

ಎನ್ನುವ  ಘೋಷಣೆ  ಇವರ   ಕಂಪೇನಿಯದು.  ಏಳು ಜನ ಮೊಮ್ಮಕ್ಕಳು  ಅಜ್ಜಿಯ   ಸಮಯ  ಬೇಡುವುದಾದರೂ   ಇವರು  ಇನ್ನೂ  ಸಾಗಬೇಕಾದ   ಮುಂದಿನ  ದಾರಿ  ಬಗೆಗೆ   ಉತ್ಸಾಹಕವಾಗಿಯೇ  ಇದ್ದಾರೆ.  ಮುಂದಿನ ಎರಡು ವರ್ಷದಲ್ಲಿ ಹತ್ತು  ಲಕ್ಷ  ಗ್ರಾಹಕರ  ಗುರಿ  ಅಜ್ಜಮ್ಮ  ಅವರದ್ದು.  ಅವರಿಗೆ  ಜೈ   ಅನ್ನೋಣ. :tup 


ಕಾನೂನು  ಮಾಡುವ    ಮಟ್ಟಿಗೆ  ನಾವು  ಹಿಂದುಳಿದಿಲ್ಲ.    ನಮ್ಮಲ್ಲೂ  ಇದೆ -  ಕಾಂಪ್ಕೊ   ವಿದ್ಯುತ್  ಗಿರಿಗಿಟಿ  ಇರುವುದು  ಗದಗದಲ್ಲಿ . ಅಲ್ಲಿ ತಯಾರಾಗುವ ವಿದ್ಯುತ್  ಬಳಕೆಯಾಗುವುದು  ಪುತ್ತೂರಿನ   ಕಾರ್ಖಾನೆಯಲ್ಲಿ.   ಇದಕ್ಕೆ    ಸಾಗಾಣಿಕೆ  ವೆಚ್ಚ  ಮೆಸ್ಕೋಂ  ಪಡಕೊಳ್ಳುತ್ತದೆ.   ಆದರೆ  ಇದು ಜನಸಾಮನ್ಯರಿಗೆ ತಲಪುವ  ಮಟ್ಟದಲ್ಲಿಲ್ಲ.  ದೊಡ್ಡ  ಕಂಪೇನಿಗಳಿಂದ  ನಮ್ಮನ್ನು  ಆಳುವವರಿಗೆ    ಚೆಕ್  ಈಸ್ಕೊಳ್ಳೋದು  ಸುಲಭ.   ಬೇಕಾದರೆ  ಯೆಡ್ಡಿನ  ಕೇಳಿ.  :)       ಸಾಮಾನ್ಯ   ಜನರಿಗೆ ಬಾಯಿಉಪಚಾರ  ಸಾಕು.  


ಅಲ್ಲಿ     ಎಲ್ಲ    ವಿದ್ಯುತ್  ಬಳಕೆದಾರರು  ಕೊಡುವ  ಒಂದು  ಅಧಿಕ  ತೇರಿಗೆಯನ್ನು  ಈ  ಪರಿಸರ ಸ್ನೇಹಿ ಉತ್ಪಾದಕರಿಗೆ  ಹಂಚಲಾಗುತ್ತದೆ.   ಈ  ಲೆಕ್ಕಾಚಾರ  ಪಾರದರ್ಶಕವಾಗಿದ್ದು  ರಾಜಕಾರಣಿಗಳು  ಮೂಗು  ತೂರಿಸುವಂತಿಲ್ಲ,   ಕುತಂತ್ರ  ನಡೆಸುವಂತಿಲ್ಲ.        ಅವರಿಗೆ  ಸಾದ್ಯವಾಗೋದು  ನಮಗೇಕೆ    ಅಸಾದ್ಯ  ? ಯಾಕೆಂದರೆ,  ಮುಜುಗರ  ಆಗುತ್ತದೆ  ಹೇಳಲು  -   ಲಗಾಡಿ  ತೆಗೆಯಲು    ಅವರ   ಮದ್ಯೆ   ಎಲ್ಲವನ್ನೂ   ಮುಕ್ಕುವ. :@   ಅಲ್ಲಲ್ಲ -  ಸಮಾಜಕ್ಕೆ      ಅನುಗ್ರಹಿಸುವ   ಜನಪರ  ಹೋರಾಟಗಾರ   ಯೆಡ್ಡಿ  ಕರಂಟ್ ಲಾಜೆ   ಜೋಡಿ   ಇಲ್ಲ. ;)

ವಿಡಿಯೊ  ಬಲಬಾಗ  ಮುಚ್ಚಿರುವ    ಕಾರಣ      ಮೇಲಿನ  ವಿಡಿಯೊ ಯುಟ್ಯೂಬ್ ನಲ್ಲಿಯೇ  ನೋಡಲು  ಕೊಂಡಿ  

Friday, November 23, 2012

ಅಪರೂಪದ ಪರಿಸರವಾದಿ ಕಲಾವಿದೆ ಕೆನಡಾ ದೇಶದ ಪ್ರಾಂಕೆ ಜೇಮ್ಸ್


ಇತ್ತೀಚಿನ  ದಿನಗಳಲ್ಲಿ ನನ್ನ ಮೇಲೆ ಬಹಳ  ಪ್ರಬಾವ  ಬಿದ್ದಿರುವ   ವ್ಯಕ್ತಿಯೊಬ್ಬರು    ಎಂದರೆ    ಕಲಾವಿದೆ ಹಾಗೂ  ಪರಿಸರ ಹೋರಾಟಗಾರ್ತಿ  ಕೆನಡಾ ದೇಶದ ಫ್ರಾಂಕೆ  ಜೇಮ್ಸ್.    ಅವರ ಚಿತ್ರ  ಪ್ರಬಂದಗಳು  ಪರಿಸರಾಂದೋಲನಗಳು   ಅಧ್ಬುತ ಎನ್ನಬೇಕು.     ಸುಮಾರು  ಎರಡು ವರ್ಷಗಳಿಂದ  ಇವರ  ಚಟುವಟಿಕೆ  ಮೇಲೆ  ಗಮನವಿಟ್ಟಿರುವ  ನಾನು ಈಗ  ಅನಿಸಿಕೆ  ಹಂಚಿಕೊಳ್ಳುತ್ತ್ತಿದ್ದೇನೆ. 


ಕಾರು ಹೊಂದಿದ  ಕುಟುಂಬದಿಂದ  ಬದಲಾವಣೆಯಾಗುವಾಗ   ಏನೆಲ್ಲ  ಎದುರಿಸಬೇಕು  ಅನ್ನುವುದನ್ನು ಅವರ ಮಾತುಗಳಲ್ಲಿಯೇ  ಕೇಳಬೇಕು,  ಅಲ್ಲ   ಚಿತ್ರಕಥೆ  ಓದಬೇಕು.  ದೊಡ್ಡ  ಹಡಗಿನಂತಹ  ಕಾರು  ಅವರಲ್ಲಿತ್ತು. ಡೆವಿಡ್  ಸುಜುಕಿ  ಎಂಬ  ಪರಿಸರವಾದಿಯ  ಬಾಷಣ  ಕೇಳಿ ಮಾರಿಯೇ   ಬಿಟ್ಟರು .  ಹತ್ತಿರದಲ್ಲಿ  ದಿನಸಿ ಅಂಗಡಿ ಇತ್ತು. ನಡೆಯುವ  ಆಸಕ್ತಿ ಇತ್ತು.  ಒಬ್ಬೊಬ್ಬ  ಸಂಬಂದಿಕರ  ಪ್ರತಿಕ್ರಿಯೆಯೂ  ಬಿನ್ನವಾಗಿತ್ತು.  ಕಾರು ಇಲ್ಲವಾದ  ನಂತರ  ಮನೆ ಎದುರು ಕಾರು – ದಾರಿ  ಬೇಕಾ ?  ಬೇಡ.    ಆದರೆ  ಪಟ್ಟಣದ  ಕಾನೂನು ಪ್ರಕಾರ ಒಂದು ನಿವೇಶನದಲ್ಲಿ    ಒಂದು ಮರ ನೆಡಲು  ಮಾತ್ರ ಅವಕಾಶ. :(    ಹಲವು ಸಮಸ್ಯೆಗಳ  ಎದುರಿಸಿ   ಕೊನೆಗೂ   ಅಲ್ಲಿ ಹೂಗಿಡಗಳನ್ನು    ನೆಟ್ಟರು. ಕಾಂಕ್ರೀಟು  ಅಗೆದು ಹಾಕಿ  ನೀರು ಇಂಗುವಂತೆ  ಮಾಡಿದರು.   ಅವರ, ಅಂದರೆ   ಆ ದೇಶದವರ   ಕಾರು ಸಹಿತ ಜೀವನ  ನಮಗೆ  ಆಕರ್ಷಕವಾಗಿ ಕಂಡರೆ   ಕಾರು ರಹಿತ  ಜೀವನವೂ  ಮಾರ್ಗದರ್ಶಕ ಏಕಾಗಬಾರದು ? :tup


ಯಾವ  ವಿಚಾರವನ್ನೇ  ಆಗಲಿ  ತಮ್ಮ  ಕಲೆಯ  ಮೂಲಕ   ಪ್ರಚಾರಾಂದೋಲನ    ನಡೆಸುವ   ಫ್ರಾಂಕೆ  ಕೆನಡಾ ದೇಶಕ್ಕೆ  ಅಪಾರ  ತಲೆನೋವು ತರಿಸುವ  ವ್ಯಕ್ತಿಯಾಗಿ  ಹೊರಹೊಮ್ಮಿದ್ದಾರೆ.    ಹೌದಾ  ಪ್ರದಾನ ಮಂತ್ರಿಗಳೇ, ಮಲೀನತೆ  ತೇರಿಗೆ  ನಿಜಕ್ಕೂ  ದೇಶಕ್ಕೆ  ಹಾನಿಮಾಡುವುದೇ   ಎಂದು ಮುಗ್ದವಾಗಿ  ಪ್ರಶ್ನಿಸುತ್ತಾರೆ.  ನೀವು ಮಾತಾಡುತ್ತಿರುವ  ವಿಚಾರ  ಪರಿಣಾಮ   ನಿಮಗೆ ಚೆನ್ನಾಗಿ  ಗೊತ್ತಾ  ?     ಮುಂದೆ  ಹಿಮ ಕರಡಿ ಕಾಣೋದು  ಎರಡು ಡಾಲರ್ ನಾಣ್ಯದಲ್ಲಿ  ಮಾತ್ರವಾದರೆ   ನಮ್ಮ  ನಿಮ್ಮ  ಮಕ್ಕಳು  ಮೊಮ್ಮಕ್ಕಳು  ಏನು ಹೇಳಬಹುದು.  ಎಂದೂ  ಕೇಳುತ್ತಾರೆ.    ಈ  ಹಾರ್ಪರ್  ಮಹರಾಯ   ಬೆಂಗಳೂರಿಗೆ   ಬಂದಾಗ  ಇದನ್ನು  ಹಂಚಿಕೊಳ್ಳುವ  ಆಲೋಚನೆ ಬಂದರೂ  ತಕ್ಷಣ  ಇವೆಲ್ಲ   ಬರೆಯಲು  ಸಾದ್ಯವಾಗಲಿಲ್ಲ. :(     


ಅವರಿಗೆ  ಒಮ್ಮೆ  ಒಂದು ಒಬ್ಬ  ಅಪರಿಚಿತ  ವ್ಯಕ್ತಿಯಿಂದ ಒಂದು  ಇ ಪತ್ರ  ಬಂತು. “ ನಮಗಿಬ್ಬರಿಗೆ  ಒಂದು ಸಸ್ಯಹಾರಿ    ಊಟ ಕೊಡುವುದಾದರೆ  ನಾನು ನೀವುಸೂಚಿಸಿದ   ಸೇವಾ ಸಂಸ್ಥೆಗೆ  ಇನ್ನೂರು ಡಾಲರ್ ದಾನ  ಮಾಡುತ್ತೇನೆ “.   ಇನ್ನೂರು  ಡಾಲರಿನ  ಮೌಲ್ಯವೇಷ್ಟು ?  ಹುಡುಕಿದರು…..   ಇನ್ನೂರು  ಡಾಲರ್  ಎಂದರೆ  ಊರ  ಸೇವಾ   ಸಂಸ್ಥೆಯೊಂದು    ಎಪ್ಪತ್ತೇಳು  ಜನರಿಗೆ  ಕ್ರಿಸ್ಟ್ ಮಸ್ ಊಟ  ಕೊಡುವುದು  ಎಂದು  ಅರಿವಾದ  ನಂತರ  ಆ  ಅಪರಿಚಿತನಿಗೆ   ಒಪ್ಪಿಗೆ  ಹೋಯಿತು……..


ಯುರೋಪಿನಲ್ಲಿ   ಅವರ    ಚಿತ್ರ ಪ್ರದರ್ಶನ   ಏರ್ಪಾಡಾಗಿತ್ತು.   ಸರಕಾರ  ಅದಕ್ಕೆ  ಅಡ್ಡಗಾಲು ಹಾಕಿತು. ಫ್ರಾಂಕೆ ಸುಮ್ಮನಿರಲಿಲ್ಲ.   ಮಾಹಿತಿ ಹಕ್ಕಿನಲ್ಲಿ  ಕಾರಣಕರ್ತರನ್ನು  ಗುರುತಿಸಿದರು.  ಆಗ  ಅವರಿಗೆ ಅರಿವಾಯಿತು - ಅವರು  ಕೆನಡಾ  ಸರಕಾರದ   ಕಪ್ಪು ಪಟ್ಟಿಯಲ್ಲಿದ್ದಾರೆ. :o   ಅದನ್ನು  ಅವರು ಎದುರಿಸಿದ   ಹಾಗೂ   ಊರ ಮದ್ಯದಲ್ಲಿ ಪ್ರದರ್ಶನ  ಏರ್ಪಡಿಸಿ    ಕೇಂದ್ರ ಸರಕಾರಕ್ಕೆ ಮುಜುಗರ ಉಂಟುಮಾಡಿದ ಪ್ರಸಂಗ  ಅವರ  ಚಿತ್ರ ಕಥೆಯಲ್ಲೇ  ಓದಿದರೆ ಚೆನ್ನ.    ತುಂಬಾ  ಚೆನ್ನಾಗಿದೆ. ;)  

ಭೂಮಿ ಬಿಸಿಏರುವಿಕೆಯ  ವಿಚಾರವೂ  ಒಂದು ನೋಡಲೇ  ಬೇಕಾದ  ಚಿತ್ರ ಪ್ರಬಂದ.    ಎಲ್ಲರೂ  ಹಾಲೆರೆಯುವಾಗ  ನಾನೊಬ್ಬ  ನೀರೆದರೆ........  ಅನ್ನುವ  ಬುದ್ದಿವಂತರ  ನಾಡು  ನಮ್ಮದು.  ಕೆಲವು  ಜನ  ಪ್ರಾಮಾಣಿಕ  ಆಸಕ್ತಿ   ಉಳಿಸಿಕೊಂಡವರೂ  ಇದ್ದಾರೆ.    ಆದರೂ     ಅಯ್ಯೋ. ನಾನು ಒಬ್ಬ ಏನು ಮಾಡಲು ಸಾದ್ಯ  ಎಂದು  ಸಾಮಾನ್ಯವಾಗಿ   ಸುಮ್ಮನಾಗುತ್ತೇವೆ. ಅದರ ವಿಚಾರದ  ಪ್ರಬಂದವೂ ಬಹಳ  ಚೆನ್ನಾಗಿದೆ.    ಎರಡೂ  ವಾಕ್ಯಗಳಲ್ಲಿ  ಸಂಬಂದಪಟ್ಟ      ಕೊಂಡಿ ಅಳವಡಿಸಿದ್ದೇನೆ.   ಹಲವು  ವಿಡಿಯೊ ಪ್ರಬಂದಗಳು ನೋಡಲು  ಚೆನ್ನಾಗಿವೆ.ಉದಾಹರಣೆ,  ಕಾಡಿನ  ಬಗೆಗೆ ಯಾರು  ಕಾಳಜಿ ವಹಿಸುತ್ತಾರೆ ?    ಪ್ರದಾನಿ  ಹಾರ್ಪರ್ ಏನನ್ನು ಅಂಜುತ್ತಾನೆ    ಇತ್ಯಾದಿ.     


ನನ್ನ  ಬ್ಲೊಗ್  ತೆರೆದಾಗೆಲ್ಲ    ಅವರನ್ನು  ನೆನಪಿಸಿಕೊಳ್ಳುತ್ತೇನೆ.  ಯಾಕೆಂದರೆ  ಪಕ್ಕಲ್ಲಿರುವ  co2 widget   ಪ್ರಾಂಕೆ   ಅವರ  ವಿನ್ಯಾಸ.   ಬಾರತದ ಬ್ಲೋಗುಗಳ  / ಜಾಲತಾಣಗಳ  ಹುಡುಕಿದರೆ   ಇದನ್ನು ಈ  ಹಳ್ಳಿಯಿಂದ ದಲ್ಲಿ ಮಾತ್ರ ಕಾಣಬಹುದಾಗಿದೆಯಂತೆ.   ನಾನು ಒಂದೂವರೆ  ವರ್ಷ  ಹಿಂದೆ ಕುದಿಯುತ್ತಿರುವ  ಪಾತ್ರೆಯಲ್ಲಿ  ಕಪ್ಪೆಗಳು  ನಾವು  ಎಂಬ  ತಲೆಬರಹದಡಿಯಲ್ಲಿ   ಈ  widget  ಹಾಕಿದ್ದೆ.       ಇಡೀ  ಬಾರತ ದೇಶದಲ್ಲಿ ಬಳಸುವವ  ಮಾತ್ರ   ನಾನೊಬ್ಬನೇ  ಅನ್ನುವಾಗ  ಹೆಮ್ಮೆಯಲ್ಲ  ಬಹಳ   ಬೇಸರವಾಗುತ್ತದೆ. :@     ಪಟ್ಟಿ  ಹುಡುಕಿದರೆ   ಇನ್ನೊಂದು ಬಳಕೆದಾರ  ಕಾಣಬಹುದಾದರೂ  ಅ    ಕೊಂಡಿ  ಕೆಲಸ ಮಾಡುವುದಿಲ್ಲ.   ಇದನ್ನು ಹೆಚ್ಚು ಜನ ಅವರ   ಬ್ಲೋಗುಗಳಲ್ಲಿ, ಜಾಲತಾಣದಲ್ಲಿ    ಬಳಸಲಿ ಮತ್ತು  ಈ  ವಿಚಾರಕ್ಕೆ   ಹೆಚ್ಚು   ಪ್ರಚಾರ   ಸಿಗಲೆಂದು     ಹಾರೈಸುತ್ತೇನೆ. :tup  ನಮ್ಮವರು  ಮೂಕಪುಟದಲ್ಲೂ  ಇಮೈಲಿನಲ್ಲೂ   ಸಿಕ್ಕಸಿಕ್ಕ  ಅಸಂಬದ್ದ  ಜೋಕುಗಳ   ಮಾಹಿತಿಗಳ  ಶೇರ್  ಮಾಡ್ತಾರೆ, ಆದರೆ  ಇಂತಹ  ಸಕಾರಾತ್ಮಕ   ದಾರಿಯಲ್ಲಿ ಹೆಜ್ಜೆ ಹಾಕುವುದು  ಭಾರಿ   ನಿಧಾನ. :(  

Tuesday, November 20, 2012

ಪ್ರೊ! ಸಾಹೇಬರ ಅಮುಲ್ ಮಾದರಿ ಸೌರ ವಿದ್ಯುತ್ ಜಾಲದ ಸುತ್ತಮುತ್ತ


 ಒಬ್ಬರು     ಪ್ರೊಫೆಸರ್ ಸಾಹೇಬರು  ಅಮುಲ್  ಮಾದರಿಯಲ್ಲಿ ಹಳ್ಳಿಗಳಲ್ಲಿ  ಸೌರ ವಿದ್ಯುತ್  ಸಾದ್ಯತೆಗಳ ವಿಚಾರ    ಹಿಂದು ಬಿಸಿ-ನೆಸ್ ಲೈನ್   ಪತ್ರಿಕೆಯಲ್ಲಿ   ಬರೆದುದು  ಸಂತಸದ  ಸಂಗತಿ.   ಆದರೆ  ಪಟ್ಟಣದಲ್ಲಿ ಕೂತ    ಅವರಿಗೆ  ಇದೊಂದು   ಕೆಲಸಕ್ಕೆ  ಬಾರದ  ಆಲೋಚನೆ  ಎಂದು ಅರಿವಾಗಿರಲಿಕ್ಕಿಲ್ಲ.   ನನ್ನ  ಅಬಿಪ್ರಾಯದಲ್ಲಿ ಇದೊಂದು   ಬೇಲೆ  ಇಜ್ಜಂದಿನ  ಆಚಾರಿ………  :O  ಕಾರಣ,    ಇದು  ಹಾಲಿನ  ಸೊಸೈಟಿಯಲ್ಲಿ ಹಾಲು  ಹುಯಿದಷ್ಟು  ಸರಳವಲ್ಲ.   ಪ್ರೊಫೆಸರ್  ಸಾಹೇಬರ  ತರ್ಕ  ಎರಡನೆ  ಪಾರದಲ್ಲಿಯೇ   ಕವಚಿಬಿದ್ದಿದೆ.  ಮೊದಲನೆಯ ಮಾತು -   ಇನ್ನೂ  ವಿದ್ಯುತ್    ಜಾಲ  ತಲಪದ  ಮನೆಗಳು  ಎಂದ  ಅವರು  ಹೆಚ್ಚಿನ ವಿದ್ಯುತ್  ಜಾಲಕ್ಕೆ  ಹರಿಸಬಹುದು  ಎಂದೂ  ಹೇಳುತ್ತಾರೆ.   ಆದರೆ ಜಾಲಕ್ಕೆ ಹರಿಸಲು  ಅಡ್ಡ  ಬರುವ  ತಾಂತ್ರಿಕ  ಸಮಸ್ಯೆ ಅವರ ಗಮನಕ್ಕೆ    ಬಂದಂತಿಲ್ಲ. 

ಇನ್ನೊಂದು  ಅಸಂಬದ್ದ ಆಲೋಚನೆ  ಕೇರಳಾ  ಸರಕಾರದ್ದು. ಅದು  ಹತ್ತು ಸಾವಿರ  ಸೌರ ವಿದ್ಯುತ್ ಘಟಕಗಳ  ಸ್ಥಾಪಿಸಲು ತಯಾರಾಗಿದೆ.   ಅವರಿಗೆ  ೧೫೦೦೦  ಜಾಲ-ಸಂಪರ್ಕ  ಘಟಕಗಳ  ಸ್ಥಾಪಿಸುವ  ಆಸಕ್ತಿಯೇನೊ  ಇತ್ತು.  ಆದರೆ  ಕೇಂದ್ರ  ಸರಕಾರ  ಸಬ್ಸಿಡಿ  ಕೊಡೋದು  ಜಾಲ ಸಂಪರ್ಕ ರಹಿತ  ಘಟಕಗಳಿಗೆ  ಮಾತ್ರ. :(    ಪತ್ರಿಕೆಯಲ್ಲಿ   ಒಂದರ ಕೆಳಗೆ ಇನ್ನೊಮ್ಮೆ -   ಎರಡು ಬಾರಿ  ಲೇಖನ ಪ್ರಕಟವಾದುದು    ನೋಡಿ, ದಯಮಾಡಿ ನಗಬೇಡಿ.  ಟೊಯಿಲೆಟ್  ಪೇಪರ್  ಪತ್ರ್ರಿಕೆಯಲ್ಲಿ   ಇಂತಹ   ಅಭಾಸಗಳು ಮಾಮೂಲಿ. :D    ವಿಷಯಕ್ಕೆ ಬರೋಣವಾಗಲಿ.   ಒಂದು ಲಕ್ಷ  ಇಪ್ಪತ್ತು ಸಾವಿರ  ರಾಜ್ಯ  ಕೇಂದ್ರ  ಸರಕಾರದ  ಸಬ್ಸಿಡಿ.  ಉಳಿದ ಒಂದು ಲಕ್ಷ   ಬಳಕೆದಾರ ಹಾಕಿದರಾಯಿತು.  ಈಗಾಗಲೇ  ನಾಲ್ಕು ಸಾವಿರ  ಅರ್ಜಿ  ಬಂದಿದೆ. 


ನೀರು ಹರಿಯುವ  ಕಾಲುವೆ  ಮೇಲೆ  ಸೌರ ಫಲಕಗಳ  ಸ್ಥಾಪಿಸಿರುವ   ಗುಜರಾತಿನ   ಹಲವು  ಸೌರ  ವಿದ್ಯುತ್   ಯೋಜನೆಗಳು   ಹೆಚ್ಚು ಅರ್ಥಪೂರ್ಣ.   ಹೊಸ  ಯೋಜನೆಯೊಂದರ ಪ್ರಕಾರ   ಕಟ್ಟಡದ ಯಜಮಾನ  ಚಾವಣಿಯನ್ನು  ಬಾಡಿಗೆಗೆ  ಅಥವಾ  ಪಾಲುಗಾರಿಕೆ ನೆಲೆಯಲ್ಲಿ   ಯೋಜನಾಕರ್ತರಿಗೆ  ಕೊಡುತ್ತಾನೆ.  ಅದರಲ್ಲಿ ತಯಾರಾದ  ವಿದ್ಯುತ್   ಪೂರ್ತಿ  ಜಾಲಕ್ಕೆ  ಹರಿಯುವ  ಬಗೆಗೆ  ರಾಜ್ಯ   ಸರಕಾರ  ಒಪ್ಪಂದ ಮಾಡಿಕೊಳ್ಳುತ್ತದೆ.  ಎಲ್ಲವೂ  ರಾಜಕೀಯಮಯವಾದ  ನಮ್ಮ ದೇಶದಲ್ಲಿ    ನರೆಂದ್ರ ಮೋಡಿ  ಸಾಧನೆ  ವಿರೋಧ  ಕಾಂಗ್ರೆಸ್  ಪಕ್ಷಕ್ಕೆ  ಸಮದಾನ  ಇಲ್ಲ.  ಮೋಡಿ  ಕೊಡಲೊಪ್ಪುವ  ವಿದ್ಯುತ್  ತಿರಸ್ಕಾರ  - ಕತ್ತಲಲ್ಲಿ ಕೂರಲೂ  ತಯಾರು. ;)  





ಗೆಳೆಯ  ದಿನಕರ್  ಹೇಳುವ  ಪ್ರಕಾರ  ಈಗ  ನೂರಾರು   ಫಲಕಗಳು ಬೆಳ್ತಂಗಡಿ ತಾಲೂಕಿನಲ್ಲಿಯೇ  ಮೂಲೆಗೆ ಬಿದ್ದಿದೆ.  ಬಾಟರಿ  ಆಯುಷ್ಯ  ಮುಗೀತು. ಒಮ್ಮೆಲೆ  ಅಷ್ಟು  ಹಣ   ಹಾಕುವುದು ಕಷ್ಟ /  ಅಷ್ಟು ಪ್ರಯೋಜನ  ಇಲ್ಲ. ವಿದ್ಯುತ್  ಅಗ್ಗ. ಇತ್ಯಾದಿ ಆಲೋಚನೆಗಳು  ಈ  ಫಲಕಗಳ  ಮೂಲೆಗುಂಪಾಗಿಸಿವೆ.  :(  ಮೇಲ್ಕಂಡ   ಯೋಜನೆಯ  ಫಲಕದ ಗತಿಯೂ  ಅದೇ  ಆಗುತ್ತದೆ.  ಮೂರು  ವರ್ಷದಲ್ಲಿ ತಯಾರಾಗೊ  ವಿದ್ಯುತ್   ಸುಮಾರು  ಅದರ ಅಂದರೆ  ಫಲಕದ ತಯಾರಿಕೆಗೆ ಖರ್ಚಾಗಿರುತ್ತದೆ.  ಅದೂ  ಪೂರ್ಣ  ಉಪಯೋಗ  ಪಡಕೊಂಡರೆ  ಮಾತ್ರ. :@   ಸಾಮಾನ್ಯವಾಗಿ ಹೇಳುವುದಾದರೆ  ಐದು ಆರು ವರ್ಷ  ಕೆಲಸ ಮಾಡಲೇ  ಬೇಕು.




ಇವರು ಹೇಳೊದು  ಒಂದು  ವಿಚಾರ  ನಾನು   ಒಪ್ಪುವುದಿಲ್ಲ. ಮನೆ ಮೇಲೆ  ಇಟ್ಟರಾಯಿತು. ಅದರ ಪಾಡಿಗೆ  ಅದು ಕೆಲಸ ಮಾಡುತ್ತಲೇ  ಇರುತ್ತದೆ.    ಕಾರಣ    ಸೂರ್ಯದೇವನ  ಹಿಂಬಾಲಿಸುವ   ಫಲಕಗಳು ಶೇಕಡ ೪೦ ರಷ್ಟು ಹೆಚ್ಚು  ಶಕ್ತಿ  ಹಿಡಿದು ಕೊಡು ತ್ತದೆ.   ನಮ್ಮಲ್ಲಿ  ಸಂಬಳ  ಅಗ್ಗವಾದುದರಿಂದ  ನಾವು ಈ ವಿಚಾರ  ಮುಂದುವರಿದ ದೇಶಗಳ  ಅನುಸರಿಸಬೇಕಾಗಿಲ್ಲ.  

ಸೌರ  ಪಲಕಗಳೆಂದರೆ  ಅದರಲ್ಲಿ  ಹಲವು  ಪುಟ್ಟ  ಸರ್ಕೀಟುಗಳ  ಸಾಲಾಗಿ ಜೋಡಿಸಿರುತ್ತಾರೆ.       ಸೌರ  ಪಲಕಗಳಿಗೆ  ನೆರಳು ಬೀಳಲೇ   ಬಾರದು.  ಬಿದ್ದರೆ  ಎರಡು ರೀತಿಯ ಹಾನಿ ಯುಂಟಾಗುತ್ತದೆ.   ತಾತ್ಕಾಲಿಕ  ಹಾನಿ ಎಂದರೆ     ೩೬ ತುಂಡುಗಳಲ್ಲಿ  ಒಂದು ತುಂಡಿಗೆ  ಎಲೆ ಬಿದ್ದು  ನೆರಳಾದರೂ   ಆ  ಇಡೀ  ಫಲಕದ  ಒಟ್ಟು  ವಿದ್ಯುತ್ ಉತ್ಪಾದನೆ  ಅರ್ಧಕ್ಕರ್ಧ    ಕುಸಿಯುತ್ತದೆ. :(      ಎರಡನೆಯದಾಗಿ     ಫಲಕದ  ಒಳಗಿನ  ವೈರಿಂಗ್  ಅಂದರೆ  ಪುಟ್ಟ  ತುಂಡುಗಳ   ಜೋಡಿಸಿದ ಜಾಗ  ಬಿಸಿಯಾಗಿ   ಶಾಶ್ವತ  ಹಾನಿ ಉಂಟು ಮಾಡುತ್ತದೆ. :@      ಹಾಗಾಗಿ  ಹೆಚ್ಚು  ಫಲಕಗಳಿದ್ದರೆ    ಚಡ್ಡಿ ಹಾಕಿದ  ತುಕ್ರನನ್ನು  ಫಲಕಗಳ   ಸೂರ್ಯದೇವನ ಹಿಂಬಾಲಿಸಿ  ದಿನಕ್ಕೆ ನಾಲ್ಕು  ಬಾರಿ  ತಿರುಗಿಸಲು ನೇಮಿಸುವುದು  ಉತ್ತಮ.  ತುಕ್ರನಿಗೆ  ಬೇಕಾದರೆ   chief  operation officer   ಅಂಗಿಗೆ  ಸಿಕ್ಕಿಸುವ    ನಾಮಫಲಕ ಕೊಡೋಣ.

ಇಂತಹ  ದೊಡ್ಡ   ಘಟಕಗಳೆಂದರೆ   ಸಾಮಾನ್ಯವಾಗಿ ಏನು ಮಾಡ್ತಾರೆ  ಎಂದರೆ  ಫಲಕದ ಅಡಿಯಲ್ಲೊಂದು ಪುಟ್ಟ  ಮೊಟರ್ ಹಾಕಿ ಬಿಡ್ತಾರೆ.  ಅದಕ್ಕಾಗಿ  ಪ್ರತ್ಯೆಕ  ವೈರಿಂಗ್……..   ಎಸಿ ರೂಮಿನಲ್ಲಿ  ಸೂಟ್  ಹಾಕಿದವನೊಬ್ಬ   ನಿಯಂತ್ರಿಸುತ್ತಾನೆ.  ಫಲಕದ  ಮೊಟರು ಹಾಗೂ  ಸೂಟಿನವನ  ಎಸಿ ಎರಡೂ  ಸುಮಾರು    ವಿದ್ಯುತ್  ತಿಂದುಹಾಕುತ್ತದೆ.   ತುಕ್ರ ಚೋಮರಿಗೆ  ಸಿಕ್ಕರೂ   ಸಿಗೋದು  ಗೇಟು ಕಾಯುವ  ಕೆಲಸ ಮಾತ್ರ. :(  


ಕಾನೂನು ಪ್ರಕಾರ  ವಿತರಣಾ  ಜಾಲಗಳು   ಇಂತಹ  ವಿದ್ಯುತ್  ಒಂದಂಶ  ತೆಗೆದುಕೊಳ್ಳಬೇಕು.  ನಮ್ಮಲ್ಲಿ     ಗುಣಮಟ್ಟದ  ವಿದ್ಯುತ್  ಅಥವಾ  ದರ್ಮಾರ್ಥ  ವಿದ್ಯುತ್  ಇವುಗಳ  ಆಯ್ಕೆ  ಜನಸಾಮಾನ್ಯರಿಗಿಲ್ಲ.   ಪ್ರೊಫೆಸ್ಸರ್  ಸಾಹೇಬರು  ಹೇಳುವಂತೆ  ಮನೆಗೆ ಸಂಪರ್ಕ  ಕೊಟ್ಟ  ಸರಿಗೆಯಲ್ಲಿ  ವಾಪಾಸು ಕಳುಹಿಸಲೂ  ಬಹುದು.   ಹಾಲು  ಡೈರಿಯವರು ಕಾಲು ಲೀಟರ್  ಸಹಾ ಕೊಂಡಂತೆ   ಯಶಸ್ವಿ  ಉದಾಹರಣೆಗಳೂ  ನಮ್ಮ ಮುಂದಿವೆ. 



ಜರ್ಮನಿಯಲ್ಲಿ  ಇಂದು ಸುಮಾರು ಶೇಕಡ  ಮೂವತ್ತರಷ್ಟು,    ಸೌರ ವಿದ್ಯುತ್, ಗಾಳಿ ಯಂತ್ರ,  ಹರಿಯುವ ನೀರಿನ  ಟರ್ಬೈನ್ ಇತ್ಯಾದಿಗಳಿಂದ  ತಯಾರಾಗುತ್ತದೆ.   ಅದಕ್ಕೆ  ಸ್ವಲ್ಪ ಹೆಚ್ಚು ಬೆಲೆಗೆ  ವಿತರಣಾ  ಜಾಲ ಖರೀದಿಸುತ್ತದೆ.  ಆ ಪ್ರಿಮಿಯಂ  ಹಣವನ್ನು ಬಳಕೆದಾರರ  ಮೇಲೆ  ಹಂಚಿ ಹಾಕುವ  ಪಾರದರ್ಶಕ  ವ್ಯವಸ್ಥೆ ಇರುತ್ತದೆ. ರಾಜಕಾರಣಿಗಳಿಗೆ  ಅಧಿಕಾರಿಗಳಿಗೆ ಮೂಗು ತೂರಿಸುವ   ಹಾಗೂ  ಕುರ್ಚಿಗೆ ಅನುಸಾರವಾಗಿ  ದೋಚುವ  ಸಾದ್ಯತೆ  ಇಲ್ಲವೆ   ಇಲ್ಲ.  ಆದರೆ  ಯೆಡ್ಡಿ  ಅಂಥವರು  ರಾಜಕಾರಣದಲ್ಲಿರುವಾಗ  ದರ್ಮಾರ್ಥ ವಿದ್ಯುತ್  ಸರಿ ಎನ್ನುವಾಗ   ನಮ್ಮ  ದೇಶದ ಶಕ್ತಿ ಜಾಲ  ಉದ್ದಾರವಾಗೋಲ್ಲ.


ಕೊ ಜೆನೆರೆಶನ್  ಬಾರಿ  ಹೊಸ ವಿಚಾರವೇನೂ  ಅಲ್ಲ.  ನಮ್ಮ  ಸಕ್ಕರೆ ಕಾರ್ಖಾನೆಗಳಲ್ಲಿ   ಕಬ್ಬಿನ ಸಿಪ್ಪೆ   ಬಳಸಿ ಕಬ್ಬಿನ ಹಾಲು  ಕುದಿಸುತ್ತಾರೆ.  ಉಳಿಕೆ  ಉಷ್ಣದಲ್ಲಿ  ವಿದ್ಯುತ್ ತಯಾರಾಗುತ್ತದೆ.   ಅದೇ  ರೀತಿ  ಉಕ್ಕಿನ  ತಯಾರಿಕೆಯಲ್ಲೂ  ವಿದ್ಯುತ್  ಲಭಿಸುತ್ತದೆ.   ಇವರೆಲ್ಲ    ತಮ್ಮ ಬಳಕೆಗೆ  ಆಗಿ ಮಿಕ್ಕಿದ್ದನ್ನು  ಜಾಲಕ್ಕೆ  ಹರಿಸುತ್ತಾರೆ.   ಹೆಚ್ಚಾಗಿ ಹೊರ ರಾಜ್ಯಗಳಲ್ಲಿ  ಮಾರಾಟ  ಮಾಡುತ್ತಾರೆ.  ಕಾರಣ,   ನಮ್ಮ   ರಾಜ್ಯದ   ವಿದ್ಯುತ್ ಮಂತ್ರಿ (ಣಿ)    ಬಾವಿ ತೋಡಲು  ಹೊರಡುವುದು  ಬೆಂಕಿ ಬಿದ್ದಾಗಲೇ. :O





ಸಣ್ಣ  ಮಟ್ಟಿನಲ್ಲಿ   ಶಾಖ     ಮತ್ತು ವಿದ್ಯುತ್    ಜತೆಯಾಗಿ  ಪಡಕೊಳ್ಳುವುದು ಇತ್ತೀಚಿನ  ಪರಿಕಲ್ಪನೆ.  ಸಾಮಾನ್ಯವಾಗಿ ನಮ್ಮ  ವಾಹನಗಳಲ್ಲಿ   ಅಥವಾ  ಯಾವುದೆ  ಅಂತರ್ದಹನ  ಇಂಜಿನನಲ್ಲಿ   ಇಂದನದ  ಶೇಕಡ  ೨೦  ಚಾಲನೆಗೆ ಉಪಯೋಗವಾದರೆ ಉಳಿದ  ಬಾಗ   ಶಾಖವಾಗಿ ನಷ್ಟವಾಗುತ್ತದೆ.  ಇದನ್ನು  ಬಳಸಿಕೊಂಡ  ಈ  ತತ್ವ  ಇಂದನದ  ಶೇಕಡಾ  ಎಂಬತ್ತರಿಂದ  ತೊಂಬತ್ತರಷ್ಟು   ಶಕ್ತಿ ಬಳಸಿಕೊಳ್ಳುತ್ತವೆ.    ಜರ್ಮನಿಯಲ್ಲಿ   ಅವರು  ಇದಕ್ಕೆ   ಹೆಚ್ಚಾಗಿ  ಬಳಸುವುದು  ನೈಸರ್ಗಿಕ  ಅನಿಲ.  ಈಗ   ಹೊಂಡ  ಕಂಪೇನಿ  ಇದಕ್ಕೆ  ಸೂಕ್ತವಾದ   ಪುಟ್ಟ  ಯಂತ್ರಗಳ  ತಯಾರಿಸುತ್ತದೆ.  

ನಮ್ಮಲ್ಲಿ ರಾತ್ರಿ  ಚಳಿಗೆ  ಕಟ್ಟಿಗೆ  ಉರಿಸುತ್ತೇವೆಲ್ಲಾ  !   ಅದನ್ನು   ಆಮ್ಲಜನಕ   ನಿಯಂತ್ರಿತ    ವಾತಾವರಣದಲ್ಲಿ ಹೊತ್ತಿಸಿದರೆ  ಪ್ರೊಡ್ಯುಸರ್  ಅನಿಲವಾಗುತ್ತದೆ.   ನಮ್ಮಲ್ಲಿಯೂ   ಹಾಸನ, ಚಿಕ್ಕಮಗಳೂರು   ಮಡಿಕೇರಿಯಂತಹ ಚಳಿ ಪ್ರದೇಶಗಳಲ್ಲಿ  ಖಂಡಿತ  ಸಾದ್ಯ.    ಆಗ  ಇಂದನದ ಹೆಚ್ಚಿನ  ಬಾಗ  ಕಸಕಡ್ಡಿ ಪೊರೈಸುತ್ತದೆ.   ಮೂರು  ಕಿಲೊ ಸೌದೆ  ಒಂದು ಲಿಟರ್  ಡಿಸಲ್  ಉಳಿತಾಯ  ಸಾದ್ಯ.   ಹಾಗೆ  ದಾರಾಳ    ಬಯೋಗಾಸ್  ಇದ್ದಲ್ಲಿ  ಅದೂ  ಉಪಯೋಗಿಸಬಹುದು.   ಮೂರು  ಕಡೆಗಳಲ್ಲಿ  ಲಭಿಸುವ  ಶಾಖ  ಉಪಯೋಗಿಸಿ    ರೂಮು  ಬಿಸಿಮಾಡಬಹುದು  /  ನೀರು  ಬಿಸಿಮಾಡಬಹುದು.       


ನಮ್ಮ  ಜಾಲಗಳು  ದ್ವಿಮುಖ  ವಿದ್ಯುತ್   ಹರಿವಿಗೆ  ಅನುಗುಣವಾಗಿಲ್ಲ.   ಆದರೆ     ಸಣ್ಣ  ಮಟ್ಟಿನ ವಿದ್ಯುತ್ ಒಳಹರಿವು    ತಾಂತ್ರಿಕ  ಸಮಸ್ಯೆಗಳ  ಉಂಟು ಮಾಡದು.  ಅದು ಅದೇ  ಆಸುಪಾಸಿನಲ್ಲಿ ಖರ್ಚಾಗಿ ಹೋಗುತ್ತದೆ.  ಪರಿವರ್ತಕ  ವರೆಗೆ  ಮುಟ್ಟುವುದೇ  ಇಲ್ಲ.   ಕಾರಣ  ಅದು  ಅತ್ಯಂತ ಹೆಚ್ಚು  ವಿದ್ಯುತ್  ಬಳಸುವ ಸಮಯ.

ನೀರು  ಬಿಸಿ  ಮಾಡಲು   ಸೌರ ಫಲಕಗಳಿಗೆ ಸರಕಾರ  ಸಹಾಯದನ ಕೊಡುತ್ತವೆ.  ಕಾರಣ  -  ನೀರು  ಬಿಸಿ ಮಾಡುವುದು ಹೆಚ್ಚಾಗಿ ಬೆಳಗಿನ  ಜಾವ.  ಆಗ  ಎಲ್ಲ  ಮನೆಯಲ್ಲೂ  ಹೀಟಿಂಗ್  ಕಾಯಿಲುಗಳು  ಒನ್ ಆದಾಗ   ಜಾಲಕ್ಕೆ  ವಿಪರೀತ  ಒತ್ತಡ ಬೀಳುತ್ತದೆ.    ಅದನ್ನು ತಪ್ಪಿಸುವ  ದೂರಾಲೋಚನೆ   ಇದರ ಹಿಂದಿದೆ.    ಸಬ್ಸಿಡಿ  ಕೊಡೋದು  ಬಿಸಿ   ನೀರ  ವ್ಯವಸ್ಥೆಯಂತೆ   ವಿದ್ಯುತ್     ವ್ಯವಸ್ಥೆ   ಸ್ಥಾಪಿಸಲು  ಆಗಬಾರದು.   ಆದು  ಈಗ    ಹಲವಾರು  ಗುಡ್ಡಗಳಲ್ಲಿ   ಕೆಲಸಕ್ಕೆ ಬಾರದ ಗಿರಿಗಿಟಿ  ಸ್ಥಾಪಿಸಿದಂತಾಗುತ್ತದೆ.   ನಾವು  ಜಾಲಕ್ಕೆ ಕೊಡುವ  ವಿದ್ಯುತ್ತಿಗೆ  ನ್ಯಾಯ  ಬೆಲೆ ದೊರಕಬೇಕು. 

Peaking generators  ಅಂದರೆ  ವಿದ್ಯುತ್  ಉಪಯೋಗ  ವಿಪರೀತವಾದಾಗ  ನಡೆಯುವ   ಉತ್ಪಾದನಾ  ಕೆಂದ್ರಗಳು ಸಾಮಾನ್ಯವಾಗಿ   ಗ್ಯಾಸಿನಿಂದ ನಡೆಯುತ್ತವೆ.   ಅತಿ ಅಗತ್ಯವೆನಿಸಿದಾಗ  ಅದನ್ನು  ನಡೆಸುತ್ತಾರೆ.  ಹಗಲಿನಲ್ಲಿ ಹಳ್ಳಿಗಳಲ್ಲಿ ಫಾನ್  ಪಟ್ಟಣಗಳಲ್ಲಿ  ಎಸಿ  ಗರಿಷ್ಟ  ಉಪಯೋಗದ ಸಮಯ  ಸೌರ ಫಲಕಗಳ  ಉತ್ಪಾದನೆಯೂ   ಹೆಚ್ಚಿನ ಪ್ರಮಾಣದಲ್ಲಿರುತ್ತದೆ.   ಅದುದರಿಂದ  ಅವು ಸ್ವಾಭಾವಿಕವಾಗಿ  peak load ನಿರ್ವಹಿಸಲು  ಸಲೀಸು ಮಾಡಿಕೊಡುತ್ತದೆ.  ಅದುದರಿಂದ  ಅದಕ್ಕೆ  ಉತ್ತಮ  ದರ  ಕೊಡೋದು  ಬುದ್ದಿವಂತಿಕೆಯೇ  ಆಗುತ್ತದೆ. :)
      
ಈಗ  ಎರಡು ವರ್ಷಗಳಲ್ಲಿ  microinvertors ಎಂಬ ಹೊಸ ಉತ್ಪನ್ನ   ಅಮೇರಿಕದ   ಮಾರುಕಟ್ಟೆಗೆ ಬಂದಿದೆ  ಎನ್ನುವುದೂ  ಈ ಬರಹಕ್ಕೆ  ಒಂದು ಕಾರಣ.  ಪ್ರತಿ  ಫಲಕಕ್ಕೆ  ಸಿಕ್ಕಿಸುವಂತಹ  ಪುಟ್ಟ  ಪರಿವರ್ತಕ.  ಅದನ್ನು ನಂತರ  ನೇರ ನಮ್ಮ ಮನೆ  ವಿದ್ಯುತ್  ಪ್ಲಗ್ಗಿಗೂ  ಸಿಕ್ಕಿಸಬಹುದು  ಎನ್ನುವಷ್ಟು  ಸರಳ.     ಆದರೆ  ಅದು  110 V, 60 HZ.   ನಮ್ಮಲ್ಲಿ  ಜಾಲ  ಇರೋದು  220 V 50 Hz.  ಅದುದರಿಂದ ನಮ್ಮಲ್ಲಿ ಹಾಗೆಯೇ ಉಪಯೋಗಿಸುವಂತಿಲ್ಲ.  ಎರಡು ಮೂರು    ವರ್ಷದಿಂದ  ಅವರಿಗೆ ಪತ್ರ ಬರೆಯುತ್ತಲೇ ಇದ್ದೇನೆ, ನಮಗಾಗುವ  ಸಾಮಾನು  ತಯಾರಾಗುವಾಗ  ಹೇಳಿ.     ಅದರ ಹಿಂದಿರುವ  ಒಬ್ಬರು  ರಘು  ಬೇಲೂರು   ನಮ್ಮವರು   ನಾನಿವರೊಂದಿಗೆ  ಪತ್ರವ್ಯವಹಾರ ನಡೆಸಿಲ್ಲವಾದರೂ  ಅವರಿಗೆ   ಊರ ನೆನಪಿದ್ದರೆ ?  ತನ್ನ  ಕೊಡುಗೆ  ಇರಲೆಂದು  ಅನಿಸಿದರೆ  ?   ಏನೊ  ಒಂದು ಆಸೆ. 

ಈಗ  ರಾತ್ರಿನಾ ?   ಹಾಗಾದರೆ  ಮುಂದಿನ ಕೊಂಡಿಗಳ    ಕ್ಲಿಕ್ಕಿಸಿ.   ಅಮೇರಿಕದ     ಕಲಿಫೊರ್ನಿಯದಲ್ಲಿ ಒಬ್ಬರ ಮನೆಯಲ್ಲಿ ಅಳವಡಿಸಿದ  ಫಲಕಗಳಲ್ಲಿ  ವಿದ್ಯುತ್  ಎಷ್ಟು  ತಯಾರಾಗುತ್ತದೆ  ವಿವರವಾಗಿ   ನೋಡ ಬಹುದು.  ಕೊಂಡಿ   ಒಂದು  ಮತ್ತು  ಕೊಂಡಿ    ಎರಡು.   ಅವರು  ಫಲಕಗಳ  ಹಾಕಿದ  ಕಥೆ  ಇಲ್ಲಿದೆ. 



Tuesday, November 13, 2012

ಕೃಷಿ ಯಂತ್ರೊಪಕರಣ ಮಟ್ಟಿಗೆ ನಮ್ಮಲ್ಲಿ ಇನ್ನೂ ಗುಲಾಮಗಿರಿ


ಪುತ್ತೂರಿಗೆ   ಯಂತ್ರ  ಮೇಳ  ನೋಡಲು ಬಂದ  ದೇವಕಿ  -  ಅಶೋಕವರ್ಧನರು  ವಾಪಾಸಾಗುವಾಗ  ನನ್ನಲ್ಲಿಗೆ    ಬಂದರು.  ಮೇಳದ  ಬಗ್ಗೆ    ಅವರಿಗೆ  ನಿರಾಶೆಯಾಗಿತ್ತು.  ಹಾಗೊಂದು ಪತ್ರವನ್ನೂ  ಆಮೇಲೆ  ನನಗೆ    ಬರೆದರು.  ಅದನ್ನೇ   ವಿಸ್ತರಿಸಿ   ಕೃಷಿಕರಿಗೊಲಿಯದ ಯಂತ್ರ ಮೇಳ  ಎಂದೇ  ಹೆಸರಿಸಿ    ಅವರ  ಬ್ಲೋಗಿಗೆ ಏರಿಸಿದರು.  ಹಲವಾರು ವರ್ಷಗಳಿಂದ  ಇದರ  ಅರಿವು  ಇದ್ದ   ನನಗೆ  ಆಶ್ಚರ್ಯವೇನೂ  ಆಗಲಿಲ್ಲ.     ಅವರಿಗೆ ಉತ್ತರ  ಬರೆಯಲು ಕೂತವನಿಗೆ  ಹಲವು ವಿಚಾರಗಳು  ಮನಸ್ಸಿಗೆ   ಬಂದವು.  ಹಾಗೆ    ಪೇಸ್ ಬುಕ್ನಲ್ಲಿ ಕಂಡ   ಕೊಂಕೋಡಿಯವರ  ಅಂತರಾಷ್ಟ್ರೀಯ   ಯಂತ್ರ    ಮೇಳದ ಪ್ರಸ್ತಾಪವೂ  ನನ್ನ  ಕೆಣಕಿತು.   :@  ಯಾಕೆಂದರೆ  - 

ಪರದೇಶದಲ್ಲಿ   ಹಿರಿಯ    ಸಾವಯುವ  ಕೃಷಿಕರಿಂದ  ಉಗಿಸಿಕೊಂಡ  ಅನುಭವ    ನನಗಿದೆ. :f  ಯಾಕೆಂದರೆ  ಅವರ  ನಂಬಿಕೆಯಲ್ಲಿ  ಸಾವಯುವ   ಬೇಸಾಯ   ಕಲಿಯಲು  ಅಮೇರಿಕದಿಂದ  ಬಾರತಕ್ಕೆ  ಬರಬೇಕು  ಹೊರತು  ನಮ್ಮಲ್ಲಿಂದ  ಅಮೇರಿಕಕ್ಕೆ  ಹೋಗುವುದು   ಅಲ್ಲವೇ  ಅಲ್ಲ  ಎಂದು  ಉಗಿದಿದ್ದರು     ಪೌಲ್  ಕೀನೆ.  ಪೌಲ್  ಕೀನೆ  ಬಾರತದಲ್ಲಿ  ಕೆಲಕಾಲ  ಕಳೆದಿದ್ದರು ಮತ್ತು  ನಾನು ಬೇಟಿ ಮಾಡೋವಾಗ  ಪೆನ್ಸಿಲ್ವಾನಿಯ  ರಾಜ್ಯದಲ್ಲಿ  ವಾಲ್ನಟ್  ಎಕ್ರೆಸ್  ಅನ್ನುವ  ಪ್ರಖ್ಯಾತ  ಸಾವಯುವ   ಕೃಷಿ ಕ್ಷೇತ್ರದ  ಯಜಮಾನರಾಗಿದ್ದರು.  ಹಾಗೆ  ಅಂತರಾಷ್ಟ್ರೀಯ  ಯಂತ್ರ  ಮೇಳ  ಅನ್ನುವಾಗ  ಸ್ವಾಬಾವಿಕವಾಗಿ  ಮೈಯೆಲ್ಲ  ಉರಿಯಿತು.  ಕೆಳಗೆ   ಕಾಪಿ ಮಾಡಿರುವ    ಪ್ರತಿಕ್ರಿಯೆ  ಬರೆಸಿತು.     -

ಯಂತ್ರಗಳ ಮಟ್ಟಿಗೆ ನಾವಿನ್ನೂ ಗುಲಾಮಗಿರಿ ಅನುಬವಿಸುತ್ತಿದ್ದೇವೆ. ಅದುದರಿಂದ ಅಂತರಾಷ್ಟ್ರೀಯ ಮಟ್ಟದ ಯಂತ್ರ ಮೇಳ ನಮಗೆ ಬೇಕಾದುದಲ್ಲ.  ನಿಜಕ್ಕೂ   ಅಗತ್ಯವಾದ ಯಂತ್ರಗಳ ವಿ ಟೆಕ್ ವಿಶ್ವನಾಥ್ ಆಂತಹ   ಉತ್ಸಾಹಿಗಳು   ತರುತ್ತಾರೆ.  ಅವರಿಗೆ   ಸಹಾಯ ಕೊಟ್ಟರೆ ಸಾಕು.

ಆದರೆ ಪ್ರಮುಖ ವಿಚಾರ ಒಂದಿದೆ - ಅಡಿಕೆ ತೆಂಗು ಬೆಳೆಯದ ದೇಶಕ್ಕೆ ಹೋಗಿ ನಮಗೆ ಬೇಕಾದ ಯಂತ್ರ ಹುಡುಕಿದರೆ ಮನೆಯಲ್ಲಿ ಕಳಕೊಂಡ ಮುತ್ತನ್ನು ಬೆಳಕಿರುವಲ್ಲಿ ಹುಡುಕಿದ ಅಜ್ಜಿಯ ಕಥೆಯೇ ಆಗುತ್ತದೆ. ಅಮೇರಿಕದಂತಹ ದೇಶಗಳಲ್ಲಿ ಈ ಯಂತ್ರ ಮೇಳಗಳು   ಮಾತ್ರವಲ್ಲ    ಸಾಮಾನ್ಯ ರೈತರು ಪಾಲ್ಗೊಳ್ಳುವ   ರೈತ ಸಂತೆಗಳೂ  ಆಗುತ್ತವೆ.  . ಅಂತಹ ರೈತ ಸಂತೆಗಳು   ನಮ್ಮಲ್ಲೂ   ಆಗಬೇಕು, ಹೊರತು  ಬೃಹತ್  ಮೇಳಗಳಲ್ಲ.    ಅದರಲ್ಲಿ   ತಳಮಟ್ಟದ  ಮಾಹಿತಿ  ಇರುವ   ತುಕ್ರ ಚೋಮರೂ ಪಾಲ್ಗೊಳ್ಳುವಂತಾಗಬೇಕು. ಆಗ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ.     

ಹಿಂದೆ ನಾವು ಕೆಲಸ ಮಾಡಿಸುತ್ತಿದ್ದೆವು ಆದರೆ ಸಲಕರಣೆ ಕೊಳ್ಳುವ ತೀರ್ಮಾನ ನಮ್ಮದಾಗಿತ್ತು. ಸ್ವಾಬಾವಿಕವಾಗಿ ಕೊಟ್ಟು ಪಿಕ್ಕಾಸಿನಿಂದ ಮುಂದೆ ಹೋಗಲಿಲ್ಲ. ಮುಂದೊಂದು ಉದಾಹರಣೆ ಕೊಡುತ್ತೇನೆ.

ಎಲ್ಲ  ಕೆಲಸಗಳಲ್ಲೂ ಯಂತ್ರ ಮನುಷ್ಯನನ್ನು ಸೋಲಿಸಬಹುದು ಎನ್ನುವ ಬಲವಾದ ವಾದ ನಮ್ಮಲ್ಲ್ಲಿದೆ. ದಯವಿಟ್ಟು  ಕೆಳಗಿರುವ ವಿಡಿಯೊ    ನೋಡಿ - ಇಂತಹ ಬೀಸುಗತ್ತಿ ಯುರೋಪಿನ ಹೊಲದಲ್ಲಿ ಉಪಯೋಗಿಸಿ ನೋಡಿದ್ದೇನೆ. ಒಂದೇ ದಿನದಲ್ಲಿ ಬೀಸುವಿಕೆ ಅಬ್ಯಾಸವಾಗದಿದ್ದರೂ ಉಪಯುಕ್ತ ಅನ್ನಿಸಿತ್ತು.   ಒಂದು ಬೀಸುಗತ್ತಿ ನಾನು ಹಿಡಿದುಕೊಂಡಿರುವುದರ    ಪೋಟೊ ನನ್ನ ಸೈಕಲು ಯಾತ್ರೆ ಆಲ್ಬಂನಲ್ಲಿತ್ತು.     ಆಲ್ಬಂ  ನೋಡಿದವರು    ಯಾರೂ  ಅದನ್ನು    ಗಮನಿಸಲೇ ಇಲ್ಲ.   ಅದರಲ್ಲಿ ಅಶ್ಚರ್ಯವೂ  ಇಲ್ಲವೆನ್ನಿ.  



ಈಗ ನಮ್ಮಲ್ಲಿ ಪೆಟ್ರೊಲ್ ಚಾಲಿತ ಯಂತ್ರ ಬಂದಿದೆ. ಬೀಸುಗತ್ತಿ ಬಂದಿಲ್ಲ. ಎಲ್ಲ ವಿಚಾರಗಳೂ ಅಷ್ಟೇ. ಯೋಚಿಸಿ ನೋಡಿ - ಮಾರಾಟದಲ್ಲಿ ಲಾಬ ಇರುವುದು, ದುಬಾರಿ ಸವೆಯುವ ಬಾಗಗಳ ಬಿಡಿಬಾಗಗಳ ಲೆಕ್ಕದಲ್ಲಿ ಹಣ ಬರೋದು ಹಾಗೂ ಸಬ್ಸಿಡಿ ದೊರಕುವುದು ಪೆಟ್ರೊಲ್ ಚಾಲಿತ ಮಾದರಿಗೆ ಮಾತ್ರ. ನಾವೀಗ  ನಮ್ಮ  ಅಗತ್ಯ ಉಪಕರಣಗಳ   ಹುಡುಕಬೇಕಾದ್ದು ಅಮೇರಿಕ ಇಸ್ರೇಲ್ ಚೀನಾದಲ್ಲಲ್ಲ, ನಮ್ಮ ಹಿತ್ತಲಿನಲ್ಲಿ   -     ಎಂದು ಬರೆದಿದ್ದೆ. 

ಈಗ  ಕಳೆ ಕೀಳುವ  ಯಂತ್ರದವರು  ಗಂಟೆಗೆ   ೧೭೦ ರೂಪಾಯಿ ಬಾಡಿಗೆ ಪಡಕೊಳ್ಳುತ್ತಾರೆ.  ಈ  ಬೀಸುಗತ್ತಿಯಲ್ಲಿ ಖಂಡಿತಾ  ನೂರು ರಾಪಾಯಿಗೆ ಅಷ್ಟೇ  ಕೆಲಸ ಮಾಡಿಸಬಹುದು  ಎನ್ನುವ  ದೈರ್ಯ  ನನಗುಂಟು.  ಆದರೆ  ಕಮ್ಮಾರನ ಜತೆ ಕೂತು    ಇದರ ವಿನ್ಯಾಸ    ಹಾಗೂ  ಕೆಲಸವರಿಗೆ  ತರಬೇತಿ  ನನ್ನ  ಇಂದಿನ  ಆರೋಗ್ಯದಲ್ಲಿ  ಅಸಾದ್ಯ. :(  ಆದರೆ  ಕತ್ತಿ  ಬೀಸಲು  ನಮ್ಮ  ಹಳ್ಳಿಗಳಲ್ಲಿ     ಜನವೇ  ಇಲ್ಲದಿರುವ  ಕಾರಣ  ಗುತ್ತಿಗೆದಾರರನ್ನು  ಹಿಡಿಯಬೇಕಾದ್ದು  ಅನಿವಾರ್ಯ. :) 


ಮೇಳದಲ್ಲಿ ಕಂಡ  ಧಾನ್ಯ ಪುಡಿಮಾಡುವ ಯಂತ್ರದ  ಚಿತ್ರ  ರಮೇಶ್  ದೇಲಂಪಾಡಿ   ಮುಖಪುಟದಲ್ಲಿ   ಹಾಕಿದ್ದು.    ಇದರಲ್ಲಿ   ದ್ರವರೂಪದ  ಸಾರಜನಕವನ್ನು  ಪರೋಕ್ಷ ತಂಪುಕಾರಕವಾಗಿ ಇಲ್ಲಿ ಉಪಯೋಗಿಸಲಾಗುತ್ತದೆ.   ಹೀಗಾಗಿ ಧಾನ್ಯ ಪುಡಿಯಾಗುವಾಗ ಬಿಸಿಯಾಗುವುದು ತಪ್ಪುತ್ತದೆ.ಆದರೆ ಮನೆ ಮನೆಯ ಬಳಕೆಗೆ ಅಲ್ಲ.ಸಣ್ಣ ಕೈಗಾರಿಕೆಗಳಿಗೆ ಸೂಕ್ತ. ಅಂತ   ವರದಿ ಓದಿದೆ.  ಬೀಸುವ ಬದಲು ಗುದ್ದುವ ತಂತ್ರದಲ್ಲಿ ದಾನ್ಯ ಬಿಸಿಯಾಗುವುದರ ತಡೆಗಟ್ಟುವುದು ಹೆಚ್ಚು ಸರಳ. ಆದರೆ ಏನಾದರೂ ಗಿಮಿಕ್    ಇಲ್ಲವಾದರೆ ಯಂತ್ರ ಕುತೂಹಲ ಮೂಡಿಸುವುದಾದರೂ ಹೇಗೆ. ;)  

ಅಲ್ಲದೆ  ಸರಳ  ಕುಟ್ಟುವ  ಯಂತ್ರದಲ್ಲಿ  ಬತ್ತ ಕುಟ್ಟಿ  ಅಕ್ಕಿ ಮಾಡಲೂ  ಬಹುದು.  ಅವಲಕ್ಕಿ  ಮಾಡಬಹುದು.    ನಮ್ಮಲ್ಲಿ ಏನೂ  ಸಾದನೆ  ಇಲ್ಲ  ಎಂದು ನಾನು   ಅನ್ನುವುದಿಲ್ಲ.   ಪ್ರಯತ್ನ   ಸಾಲದು ಎನ್ನುವೆ.  ಸೇಮಿಗೆ  ಯಂತ್ರಕ್ಕೆ  ಗೇರು   ಹಾಗೂ   ಹಿಟ್ಟು  ತುಂಬುವ  ಕೊಳವೆ    ಉದ್ದ ಮಾಡಿ  ಮೊಟರ್  ಅಳವಡಿಸಿ   ಈಗ  ದೊಡ್ಡ  ಮಟ್ಟದಲ್ಲಿ  ತಯಾರು ಮಾಡಿ   ಕಾರ್ಯಕ್ರಮಗಳಿಗೆ   ಪೊರೈಸುವ   ಗುತ್ತಿಗೆಯವರಿದ್ದಾರೆ. 



ಹೊಂಡ  ಮಾಡಲು  ಹೊಂಡ ಇಂಜೀನು  ಬಹಳ  ಅಗತ್ಯವೇನಲ್ಲ.   ಯುರೋಪು  ಅಮೇರಿಕದ  ಕೃಷಿ  ಕ್ಷೇತ್ರಗಳಲ್ಲಿ  ಮೇಲ್ಕಾಣುವಂತಹ    ಕೈಯಲ್ಲಿ  ತಿರುಗಿಸಬಹುದಾದ   ಸಲಕರಣೆ ನೋಡಿದ್ದೇನೆ.    ಅದರ  ಒಂದು    ಮುಖ್ಯ  ಉಪಯೋಗ  ಬೇಲಿ ಕಂಬ  ಊರಲು  ಸರಿಯಾಗುವ  ಹೊಂಡ.    ತಯಾರಕರ    ಹೇಳಿಕೆ ಪ್ರಕಾರ  ಆರು ಇಂಚು ಅಗಲ ಎರಡು ಅಡಿ ಆಳದ   ಹೊಂಡ  ಮಾಡಬಹುದು.  ನನ್ನಲ್ಲಿದ್ದ   ನಾನೇ  ತೆಗೆದ    ಚಿತ್ರ  ಸದ್ಯಕ್ಕೆ  ನನ್ನ  ಕೈ ಎಟಕಿನಲ್ಲಿ ಇಲ್ಲದಿರುವುದರಿಂದ    ಮೇಲಿನ  ಚಿತ್ರ  ಜಾಲತಾಣ  ಒಂದರಿಂದ    ಎಗರಿಸಿದ್ದು.  ಹಾಗಾಗಿ ಸಂಪರ್ಕ ಕೊಂಡಿ ಹಾಕುತ್ತಿಲ್ಲ. :(  ಕ್ರಯ   ಸುಮಾರು  ೨೦ ಇಂಗ್ಲೇಂಡಿನ  ಪೌಂಡ್  ಕ್ರಯ  ಅಂದರೆ  ಸಾವಿರದ  ಆರು ನೂರು ರೂಪಾಯಿ.  

ಅಂದು    ಗಟ್ಟಿ ಮಣ್ಣಿಗೆ  ಹೇಗಾಗುವುದೋ   ಸಂಶಯ ಇತ್ತು.    ಮೆದು  ಮಣ್ಣಿನಲ್ಲಿ  ಆರಾಮವಾಗಿ  ಶ್ಯಾವಿಗೆ ಯಂತ್ರ  ತಿರುಗಿಸಿದಂತೆ  ತಿರುಗಿಸಿ   ನಾಲ್ಕು  ಐದು ಇಂಚು  ಅಗಲದ  ಗುಂಡಿ  ಸುಲಬವಾಗಿ   ಮಾಡಬಹುದು  ಅನ್ನಿಸಿತ್ತು.    ಯಂತ್ರವೇ   ಆಗಬೇಕೆನ್ನುವವರಿಗೆ   ಇದೇ  ಉಪಕರಣ  ಸರಳ   ಯಂತ್ರವನ್ನಾಗಿಯೂ   ಮಾಡಬಹುದು.   ಆ  ತಿರುಗಣಿ  ಬ್ಲೇಡು  ಹಾಗೂ  ನಮ್ಮ  ಸೇವಿಗೆ  ಯಂತ್ರದ  ರಚನೆಯ  ಹಿಡಿ.  ಇದನ್ನು   ಚಕ್ರ ಇರೋ  ಗಾಡಿ ಮೇಲೆ  ಅಳವಡಿಸಿದರೆ  ಆಯಿತು.  ಗುಂಡಿ  ತೋಡುವಲ್ಲಿ    ಒಬ್ಬ  ಒತ್ತಿ ಹಿಡಿತಾನೆ.   ಇನ್ನೊಬ್ಬ  ತಿರುಗಿಸ್ತಾನೆ.  ಲಿವರೇಜಿಗೆ ಬೇಕಾದರೆ  ಉದ್ದ  ಪೈಪು  ಉಪಯೋಗಿಸಿದರಾಯಿತು.   ನಮ್ಮಲ್ಲಿ ಮಳೆಗಾಲ  ಪ್ರಾರಂಬವಾದಾಗ   ಗುಂಡಿ  ತೋಡಲು   ಜನ  ಸಿಕ್ಕದೆ  ನನ್ನ   ಕಾಡು ಬೆಳೆಸುವ ಹುಚ್ಚು  ಕನಸಿನಲ್ಲೇ  ಉಳಿದಿದೆ.  ಬೆರ್ಮುಡಾ  ಹಾಕಿ ಮಾಡಬಹುದಾದ ಕೆಲಸವಾದರೆ     ಸಂಬಳ  ಕಡಿಮೆಯಾದರೂ  ನಮ್ಮ ಹಳ್ಳಿಹುಡುಗರು  ಖಂಡಿತಾ    ಒಪ್ಪಿಕೊಳ್ಳುತ್ತಾರೆ.

ಕನ್ನಡ  ಪ್ರಭ ಅಂಕಣದಲ್ಲಿ  ಅಡಿಕೆ ಪತ್ರಿಕೆಯ   ನಾ.  ಕಾರಂತರು  ಬರೆದ  ವಾಕ್ಯಗಳು  ಗಮನ  ಸೆಳೆದವು.  -    ಎಲ್ಲರೂ  ಸಬ್ಸಿಡಿ  ಉಂಟಾ  ಕೇಳುವವರೇ.  ಯಂತ್ರದ  ನಿಜ ಬೆಲೆ  ಹೇಳಿದರೆ  ಸಬ್ಸಿಡಿ ಬೇಕೇ ಬೇಕು  ಎನ್ನುತ್ತಾರೆ  ವಿಟೆಕ್  ವಿಶ್ವನಾಥ್.  ಸಬ್ಸಿಡಿ ಮತ್ತು ಮೀಸಲಾತಿ ತೊಲಗದೆ  ಬಾರತ  ಉದ್ದಾರವಾಗದು  ಎನ್ನುತ್ತಾರೆ  ಕೃಷಿಕ  ಡಾ ತಿರುಮಲೇಶ್ವರಯ್ಯ  ಗಬ್ಲಡ್ಕ. 

ನನ್ನ   ಆತ್ಮೀಯ  ಗೆಳೆಯರೊಬ್ಬರು  ಅಮೇರಿಕದ  ಪೆನ್ಸಿಲ್ವಾನಿಯದಲ್ಲಿ   ಕುದುರೆಗಳ  ಸಹಾಯದಿಂದ  ಕೃಷಿ  ಮಾಡುತ್ತಾರೆ.    ನೂರು ವರ್ಷ  ಹಳೆಯ  ಕೆಲವು  ಯಂತ್ರೋಪಕರಣಗಳನ್ನೂ    ಬಳಸುತ್ತಾರೆ.   ಬೀಡು ಕಬ್ಬಿಣದಿಂದ  ಮಾಡಿದ ಅವು  ತುಕ್ಕು  ಹಿಡುಯುವುದೇ  ಇಲ್ಲ.  ಅವರಿಗೆ   ಅಂದರೆ  ಎರಿಕ್  ಮತ್ತು  ಅನ್  ಇಬ್ಬರಿಗೂ    ಕೃಷಿ  ಹಿನ್ನೆಲೆ  ಇರಲಿಲ್ಲ.  ಪ್ರಾರಂಬದಲ್ಲೊಂದು   ಟ್ರಾಕ್ಟರ್  ಕೊಂಡಿದ್ದರು.    [ನಮ್ಮಲ್ಲೂ   ಅಧುನಿಕ    ಕೃಷಿಗೆ  ಹೊರಡುವವ   ಮೊದಲು   ಕತ್ತಿ  ಬದಲಿಗೆ   ಟ್ರಾಕ್ಟರ್ ಕೊಂಡರೆ  ಸಾಫ್ಟ್ ವೇರ್  ಲಕ್ಷಾದೀಶ  ಪ್ರಥಮ  ಸಂಬಳದಲ್ಲಿ ಕಾರು ಕೊಳ್ಳುತ್ತಾನೆ]     ನಂತರ  ಅದಕ್ಕೆ  ಕೆಲಸವೇ  ಇಲ್ಲವೆಂದು  :( ಎರಿಕ್ - ಅನ್  ಅರಿತು   ಮಾರಿಬಿಟ್ಟರು.   ನಾವು   ದೊಡ್ಡ ಯಂತ್ರಗಳ  ಮೊದಲು  ಅಲ್ಲಿ   ಬಳಕೆಯಲ್ಲಿದ್ದ     ಇಂತಹ  ಮಾದರಿಗಳ  ಹುಡುಕಬೇಕಾದ್ದು  ಹೊರತು  ಅತ್ಯಾದುನಿಕ  ದುಬಾರಿ  ಆಲೋಚನೆಗಳನ್ನಲ್ಲ



ಹಿಂದೆ  ಗೊಬ್ಬರದ  ರಾಶಿಯಲ್ಲಿ ಹಂದಿಗಳು  ಎಂದು  ಇವರ  ಒಂದು  ಪ್ರಯೋಗದ  ಬಗೆಗೆ  ಬರೆದಿದ್ದೆ. ಅಲ್ಲೂ  ಗೊಬ್ಬರ  ಮೊಗಚಿಹಾಕಲು   ಟ್ರಾಕ್ಟರ್  ಚಾಲಿತ  ದುಬಾರಿ  ಯಂತ್ರಗಳೂ   ಲಭ್ಯ.  ಆದರೆ  ಹಂದಿಗಳು  ಬಹು ಚೆನ್ನಾಗಿ   ಆ  ಕೆಲಸ ಮಾಡುತ್ತದೆ.  ನಾವು ಹುಡುಕಬೇಕಾದ್ದು ಇಂತಹ  ಮಾದರಿಗಳನ್ನು. 


ನನ್ನ  ನೋಡಿಕೊಳ್ಳುತ್ತಿರುವ  ಗಿರಿಯಪ್ಪನ  ಹತ್ತಿರವೊಂದು ಮಾರ್ಪಾಡಿಸಿದ  ಪಿಕ್ಕಾಸು ಉಂಟು. ಕುಂಟು  ಹಾಗೂ   ಅಗಲಬಾಯಿಯಾದ  ಕಾರಣ   ನೆಲದಲ್ಲಿರುವ  ಕುತ್ತಿ ಇತ್ಯಾದಿ ತೆಗೆಯಲು  ತುಂಬಾ   ಸಹಾಯಕ.    ಊರ  ಕಮ್ಮಾರರಲ್ಲಿಯೇ  ಮಾಡಿಸಿದ್ದು.  ಅದಕ್ಕೆ  ಪುರುಸೊತ್ತೆ  ಇರುವುದಿಲ್ಲ. ಸುತ್ತುಮುತ್ತಲಿನವರೆಲ್ಲ   ಕೊಂಡು ಹೋಗುತ್ತಿರುತ್ತಾರೆ.   ನಮಗೆ  ಬೇಕಾದ್ದು  ಇಂತಹ  ತಳಮಟ್ಟದ  ಪ್ರಯತ್ನಗಳು.   ಯಂತ್ರ ಮೇಳದಲ್ಲಿ    ಹೆಚ್ಚು ಗಮನಸೆಳೆಯಬೇಕಾಗಿದ್ದ    ಸಮೀರರ  ಹಾಗೂ  ಉಪಾದ್ಯರ  ಉಪಕರಣಗಳ  ಬಗೆಗೆ  ಜನರ ಕುತೂಹಲ  ಎಷ್ಟಿತ್ತು  ಎಂದು  ಅಶೋಕವರ್ಧನರು  ಚೆನ್ನಾಗಿ ವಿವರಿಸಿದ್ದಾರೆ.  http://www.athreebook.com/2012/11/blog-post_12.html#more


ಅಶೋಕವರ್ಧನರು ಬರೆಯುತ್ತಾರೆ -ದಾರಿ ತಪ್ಪಿದ ಶಿಕ್ಷಣ ಮತ್ತು ಮೌಲ್ಯರಹಿತ ಸಾಮಾಜಿಕ ಭದ್ರತೆಗಳುರೂಢಿಸಿಹೋಗಿ ಇಂದು ನಾವು ಯಾವುದೇ ವೃತ್ತಿರಂಗಕ್ಕೆ ಹೋದರೂಪ್ರಾಥಮಿಕ ಹಂತದಿಂದ ಕಲಿಯಬೇಕಾಗಿದೆಈ ಕಾರಣಕ್ಕೆ ಕೃಷಿಹಿನ್ನೆಲೆಯಿಂದಲೇ ಬಂದವರೂ ಇಂದು ಕೃಷಿಯಲ್ಲಿ ಮುಂದುವರಿಯುವುದಾದರೆಅಸಾಮಾನ್ಯ ಕೊರತೆಗಳುಆತಂಕಗಳು ಕಾಡುತ್ತವೆಅವನ್ನು ಗ್ರಹಿಸಿ,ಚರ್ಚಿಸಿರೂಪಿಸಿರೂಢಿಸಿಕೊಡುವಂಥ ಯಂತ್ರ ಪರಿಣತರು ಮೇಳಕ್ಕೆಬರಬೇಕಿತ್ತು.  ಆದರೆ  ಇಂತಹ  ಸ್ಪೂರ್ತಿ ಕೊಟ್ಟು  ಮುನ್ನಡೆಸುವ   ಪರಿಣಿತರು  ನಮ್ಮಲ್ಲಿದ್ದರೋ  ಅನ್ನುವ  ಸಂಶಯ  ನನಗೆ.   ಯಾಕೆಂದರೆ   ಅಧುನಿಕ  ಶಿಕ್ಷಣ ಪಡೆದವರೆಲ್ಲ   ಮಾದರಿಗೆ    ಅಮೇರಿಕದ  ಕಡೆ ಮುಖಮಾಡಿರುತ್ತಾರೆ.

ಪ್ರೋಜೆಕ್ಟ್  ವರ್ಕ್  ಸಮಯದಲ್ಲಿ  ನನ್ನಲ್ಲಿಗೆ  ಹಲವು ವಿದ್ಯಾರ್ಥಿಗಳು ಸಮಾಲೋಚನೆಗೆ  ಬಂದದ್ದುಂಟು.   ಆ  ಚರ್ಚೆಗಳಲ್ಲಿ  ಅವರ  ಮತ್ತು ಅವರ  ಮಾರ್ಗದರ್ಶಿಗಳ  ಚಿಂತನೆ ಅರ್ಥವಾಗುತ್ತದೆ.      ಮಾಸ್ ಪ್ರೊಡಕ್ಟನ್, ವಿಸಿಟಿಂಗ್ ಕಾರ್ಡ್   ನುಡಿಮುತ್ತು ಉದುರಿಸುವ    ಪ್ರೊಫೆಸರುಗಳು  ಮಾರ್ಗದರ್ಶಕರು,  ನಿರ್ಣಾಯಕರು. :(   ಸ್ವಾಭಾವಿಕವಾಗಿ    ಹೆಚ್ಚಿನ  ಪ್ರೊಜೆಕ್ಟ್ ವರ್ಕ್ ನಿಷ್ಪ್ರಯೋಜಕ.   ವಿದ್ಯಾರ್ಥಿಗಳ    ಸಾಮಾನ್ಯ   ವಾದ ಸರಣಿ  -  ನಾವು ಮೆಕಾನಿಕಲ್  ವಿಬಾಗದವರು.  ಹಾಗೆ  ಒಂದು ಪೆಟ್ರೊಲ್  ಇಂಜಿನ್ ಜೋಡಿಸಿದ  ಯಂತ್ರದ  ಮಾರ್ಪಾಡಿಗೆ  ಆಸಕ್ತಿ ಹೊಂದಿದ್ದೇವೆ   ಎನ್ನುವ  ಪೂರ್ವಾಗ್ರಹ  ತುಂಬಿದ  ಮನಸ್ಸಿನಲ್ಲಿಯೇ  ಬಂದಿರುತ್ತಾರೆ.    ನೈಜ  ಸಾಧನೆ  ಬಗೆಗೆ  ಅವರಿಗೆ  ಆಸಕ್ತಿ  ಇರುವುದೇ  ಇಲ್ಲ.


ಅಧುನಿಕ   ಕೃಷಿ ವಿಜ್ಞಾನ   ಅಂದರೆ   ಕೃಷಿ  ಒಳಸುರಿ  ಮಾರುಕಟ್ಟೆ    ಮಣ್ಣಿನ  ಫಲವತ್ತತೆ  ನಿರಾಕರಿಸುತ್ತದೆ.   ಹೌದು. ಒಳಸುರಿ  ಮಾರುಕಟ್ಟೆಯನ್ನೇ   ಕೃಷಿ  ವಿಜ್ಞಾನ   ಎಂದು  ನಂಬತೊಡಗಿದ್ದೇವೆ.      ಮಣ್ಣಿರುವುದು  ಬರೇ  ಗಿಡಗಳ  ಹಿಡಿದಿಡಲು.   ಅವಶ್ಯ    ಒಳಸುರಿ  ಬುದ್ದಿವಂತ    ರೈತ   ಬಳಸುತ್ತಾನೆ.  ವಿಜ್ಞಾನಿ  ಎಂದರೆ  ಇಲ್ಲಿ     ಕಂಪೇನಿಗಳ  ಮುಖವಾಡ  ಮತ್ತು   ಬುದ್ದಿವಂತ  ರೈತ  ಅವುಗಳ  ಪ್ರಚಾರಕ್ಕೆ  ಸಿಕ್ಕಿ ಬಿದ್ದ  ಬಕ್ರಾ.   ಸಾವಯುವ  ಕೃಷಿ ಮಣ್ಣಿನ  ಸಮತೋಲನಕ್ಕೆ ಹೆಚ್ಚು  ಒತ್ತು ಕೊಡುತ್ತದೆ.    ಹಾಗೆ  ಇಂದು  ಕೃಷಿ  ಮಾಡಲು ಯಂತ್ರಗಳು  ಬೇಕೆ ಬೇಕು ಎಂದು ನಂಬಿದ್ದೇವೆ   ಅಥವಾ  ನಮ್ಮನ್ನು  ನಂಬಿಸಿದ್ದಾರೆ  ಅನ್ನಬಹುದು. :)


ದೇಹದ  ನೈಸರ್ಗಿಕ    ಚಲನೆಗೆ  ಅನುಗುಣವಾಗಿ  ಕೆಲಸ ಮಾಡುವಂತೆ    ಉಪಕರಣ  ರಚನೆಯಾಗಬೇಕು.  ಪರದೇಶಗಳಲ್ಲಿ  ಉಪಯೋಗಿಸುವ ಕೊಟ್ಟು  ಓಡಿಬಂದು ಹಾರುವಂತೆ  ಮಣ್ಣು ಎತ್ತಿ ಎಸೆಯುವ  ರೀತಿ  ರೂಪಿಸಿದ್ದಾರೆ.  ನಮ್ಮಲ್ಲಿ  ಕಾಂಕ್ರೀಟ್  ಕೆಲಸಗಳಿಗೆ   ಅಂತಹದನ್ನು ಉಪಯೋಗಿಸುತ್ತಾರೆ.    ಮಣ್ಣಿನ  ಕೆಲಸಕ್ಕೆ     ನಮ್ಮಲ್ಲಿ  ಪೂರ್ತಿ ಶಕ್ತಿ  ಹಾಕಿಯೇ  ಎಳೆಯಬೇಕು.  ಇದನ್ನು  ಬದಲಾವಣೆ ಸಾದ್ಯವೋ ?  ಜನ  ಒಪ್ಪುತ್ತಾರೋ  ಚಿಂತನೆಯೋಗ್ಯ  ಅನಿಸುತ್ತದ.


ಈಗ   ಪೇಟೆಯ  ಹೆಂಗಸರರಿಗೆ  ಕಸ ಗುಡಿಸಲು ಬಗ್ಗ ಬೇಕಾಗಿಲ್ಲ,  ನೆಲ ಒರಸಲು ಕೂರಬೇಕಾಗಿಲ್ಲ.    ಮಾಲುಗಳಲ್ಲೂ     ….   :) ಆದರೆ  ಹಳ್ಳಿಯವರಿಗೆ  ಬಗ್ಗಿ ಮಾಡುವ  ಕೆಲಸಗಳಿಗೆ  ಪರಿಹಾರಗಳಿನ್ನೂ  ತಲಪಲಿಲ್ಲ. :(   ಇಲ್ಲೂ  ನಮಗೆ   ಈಗ  ಅತಿ ಅಗತ್ಯವೆನಿಸುವುದು   ಪೆಟ್ರೊಲ್  ಯಂತ್ರಗಳಲ್ಲ.  ಸರಳ    ಉಪಕರಣಗಳು.   ಇವೆಲ್ಲ  ನಮ್ಮವರೇ  ಕೂತು ಚಿಂತಿಸಬೇಕಾದ್ದು  ಹೊರತು  ಹೊರಗಿನ  ಆಲೋಚನೆ ಪ್ರಯೋಜನವಿಲ್ಲ.   

ವೈಯುಕ್ತಿಕ  ಕಾರಣಗಳಿಂದಾಗಿ   ಕೃಷಿಯಿಂದ  ನಿವೃತ್ತನಾದ   ನಾನು ಯಂತ್ರ ಮೇಳಕ್ಕೆ  ಹೋಗಲಿಲ್ಲ. 
ಕೆಲವು ವಿಚಾರಗಳಲ್ಲಿ    ಗೊಂದಲಗಳಿದ್ದೂ  ಬರಹಕ್ಕಿಳಿಸಿದ್ದೇನೆ.    ಕೆಲವೆಡೆ   ಶಬ್ದ ಪ್ರಯೋಗಗಳೂ  ತಪ್ಪಿರಬಹುದು.  ಯಂತ್ರಗಳೇ  ಬೇಡ  ಎಂದು ನಾನು ಹೇಳುವುದಲ್ಲ, ಅವುಗಳ   ಬಗೆಗೆ  ಇರುವ   ಅತಿರೇಕದ ಭ್ರಮೆಯಿಂದ ಹೊರ ಬಂದು  ಚಿಂತಿಸುವ.   ಸಾರ್ವಜನಿಕೆ  ಸಾರಿಗೆ  ಬೇಕು.  ದಿನಕ್ಕೆ  ಇಪ್ಪತ್ತೆರಡು ಗಂಟೆ  ತುಕ್ಕು ಹಿಡಿಯುತ್ತಾ  ಕೂತಿರುವ  ವೈಯುಕ್ತಿಕ  ಕಾರು ಉಪಯೋಗ  ಕಡಿಮೆಯಾಗಬೇಕು   ಎನ್ನುವ  ಚಿಂತನೆ  ನನ್ನದು.  ಅದೇ  ರೀತಿ  ನಮ್ಮ  ಕೈಗೆಟಕುವ  ಸರಳ  ಉಪಕರಣಗಳು   ಹೆಚ್ಚೆಚ್ಚು     ಬರಲಿ  ಅನ್ನುವ  ಅಭಿಲಾಷೆ.  

Monday, November 12, 2012

ಒಬಾಮ ಗೆದ್ದ ಎಂದರೆ ಪ್ರಪಂಚ ಒಂದು ಕಂಟಕದಿಂದ ಪಾರಾಯಿತು


ಒಬಾಮ  ಗೆದ್ದ  ಎಂದಾಕ್ಷಣ  ನನಗೆ  ಭಾರಿ ಸಂತಸವೇನೂ  ಆಗಲಿಲ್ಲ.    ಆದರೆ    ತಮ್ಮ  ವ್ಯಾಪಾರಕ್ಕೆ  ತೊಂದರೆ  ಎಂದು   ನಮ್ಮ  ಸಾಫ್ಟ್ ವೇರ್  ಧನಿಗಳಿಗೆ  ಆದಂತೆ  ಬೇಸರವೂ  ಆಗಲಿಲ್ಲ.     ಈ ಗೆಲುವಿನಿಂದಾಗಿ ನಾವಿರುವ  ಈ    ಪ್ರಪಂಚ  ಒಂದು ಕಂಟಕದಿಂದ  ಪಾರಾದದ್ದು    ಮಾತ್ರ  ಖಂಡಿತ  ಎನ್ನಬಹುದು.  ಪ್ರಪಂಚ  ಚಪ್ಪಟೆಯಾಗಿದೆ  ಎನ್ನುವ     ಹಲವು   ಒಬಾಮ  ವಿರೋದಿ    ಪಕ್ಷದ  ಬೈಬಲ್  ಪಂಡಿತ    ದುಷ್ಟರು  ಮಣ್ಣುಮುಕ್ಕಿದ್ದೂ  ಸಂತಸದ  ವಿಚಾರ    

ಈ  ಸಲ   ಚುನಾವಣೆಯಲ್ಲಿ    ನಿರ್ಣಾಯಕ  ತಿರುವು  ಕೊಟ್ಟದ್ದು   ಸಾಂಡಿ ಚಂಡಮಾರುತ.  ಅಷ್ಟರ ವರೆಗೆ  ಎರಡೂ ಪಕ್ಷದವರೂ  ಭೂಮಿ  ಬಿಸಿಯಾಗುತ್ತಿರುವ  ವಿಚಾರ  ಪ್ರಚಾರದಿಂದ  ಹೊರಗಿಟ್ಟಿದ್ದರು.  ಒಬಾಮ  ಉತ್ತರ ದ್ರುವದ  ಹಿಮಕವಚ ಕರಗಿ  ಸಮುದ್ರ ಮೇಲೇರುವುದನ್ನು    ತಡೆಗಟ್ಟುವುದಾಗಿ  ಹೇಳಿದ್ದ  ಮಾತು  ರೊಮ್ನಿ ಲೆವಡಿ ಮಾಡಿದ್ದ.  ಕೊನೆಗೆ  ಚಂಡಮಾರುತ  ಅಪ್ಪಳಿಸುತ್ತದೆ  ಎನ್ನುವಾಗ  ಎರಡೂ  ಅಭ್ಯರ್ಥಿಗಳು   ಪೂರ್ವ ಕರಾವಳಿಯ    ಪ್ರಚಾರ  ತಿರುಗಾಟವನ್ನು     ರದ್ದುಪಡಿಸಿದರು.    ಆದರೆ  ಚಂಡಮಾರುತ  ಅಪ್ಪಳಿಸಿದಾಗ -  ಒಬಾಮ ಚುರುಕಾದ.   ಪರಿಹಾರ  ಒದಗಿಸಿದ.  ಸಮುದ್ರದ  ಅಬ್ಬರದ  ದಿನ  ಅಪ್ಪಳಿಸಿದ   ಚಂಡಮಾರುತ   ಅಪಾರ  ಹಾನಿ  ಉಂಟುಮಾಡಿತು.   ನ್ಯುಯೊರ್ಕ್  ಪಟ್ಟಣದ  ನಿವಾಸಿಗಳು ಶಿಲಾಯುಗಕ್ಕೆ ತಳ್ಳಲ್ಪಟ್ಟ  ಕಥೆ  ನಾಗೇಶ  ಹೆಗ್ಡೆಯವರ  ಪ್ರಜಾವಾಣಿ ಅಂಕಣ  ಚೆನ್ನಾಗಿ ಚಿತ್ರಿಸುತ್ತದೆ. 

ಆ  ಆನೆ ಪಕ್ಷದ  ಹಲವು  ಪುಡಾರಿಗಳು  ಮಹಿಳೆಯರ ಹಕ್ಕಿನ  ವಿರುದ್ದ  ಯುದ್ದವನ್ನೇ  ಸಾರಿದ್ದರು.  ಅತ್ಯಾಚಾರಕ್ಕೆ  ಒಳಗಾಗಿ ಜನಿಸಿದ  ಮಗು ಸಹಾ ದೇವರ ಕೊಡುಗೆ /  ಅತ್ಯಾಚಾರವೇ  ಮಹಿಳೆಯ ವಿರುದ್ದ  ಹಿಂಸೆ. ಪುನಹ  ಗರ್ಬಪಾತ  ಎನ್ನುವ  ಹಿಂಸೆಗೆ ಮಹಿಳೆಯ   ಒಳಪಡಿಸುವುದು  ತಪ್ಪು /  ಅತ್ಯಾಚಾರದಲ್ಲಿ  ಮಹಿಳೆಯ  ಶರೀರ  ತನ್ನ  ಕಾಪಾಡಿಕೊಳ್ಳುತ್ತದೆ   ಇತ್ಯಾದಿ  ನುಡಿಮುತ್ತು ಉದುರಿಸಿದ   ಪುಡಾರಿಗಳನ್ನೆಲ್ಲ   ಮತದಾರರು ಮನೆಗೆ  ಕಳುಹಿಸಿದ್ದಾರೆ.  


ಅಮೇರಿಕದಲ್ಲಿ   ನವೆಂಬರ್    ಮೊದಲ ವಾರ  ಗಡಿಯಾರ  ಹಿಂದಕ್ಕಿಡುವ  ಪರಿಪಾಠ.  ಸೆಕೆಗಾಲದಲ್ಲಿ  ಮುಂದಿಡುವ    ಇದನ್ನು  daylight saving time  ಅನ್ನುತ್ತಾರೆ.     ರೊಮ್ನಿಯ   ವರ್ತನೆ  ಬಗೆಗೆ  ಚಿಂತನೆಗೆ  ಹಚ್ಚುವ      ಚಿತ್ರವೊಂದನ್ನು ಇಲ್ಲಿ ಹಾಕಿದ್ದೇನೆ. 


ಕಳೆದ  ವಾರ    ಬೆಂಗಳೂರಿಗೆ  ಬಂದ  ಸ್ಟೆಫನ್  ಹಾರ್ಪರ್  ಕೆನಡಾ  ದೇಶದ  ಜನರ ಪ್ರತಿನಿಧಿ,    ಪ್ರದಾನಿ ಎನ್ನುವ  ಬದಲು   ತೈಲ  ಕಂಪೇನಿ  ನೌಕರ  ಎಂದರೆವ್  ಹೆಚ್ಚು ಸಮಂಜಸ.   ಸಾವಿರಾರು ಎಕ್ರೆ ಕಾಡು  ಕಡಿಸಿ  ತೈಲ  ಮರಳಿನ  ಗಣಿಗಾರಿಕೆಗೆ  ಪ್ರೋತ್ಸಾಹಿಸಿದ  ಮಹಾನುಬಾವ.  ವಿರೊಧ  ವ್ಯಕ್ತಪಡಿಸಿದ  ವಿಜ್ಞಾನಿಗಳಿಗೆ   ಪರಿಸರವಾದಿಗಳಿಗೆ ಅಪಾರ ಹಿಂಸೆ ಕೊಟ್ಟವ.
 ಆದರೆ   ರಾಜಕಾರಣಿ ಅಲ್ಲವೇ !     ಕೆನಡದಲ್ಲೂ   ಮತದಾನ  ಹಕ್ಕಿನ    ಕನ್ನಡಿಗರಿದ್ದಾರೆ.  ಹಾಗೆ  ಅವರಿಗೆಲ್ಲ   ಫೋಟೊ   ತೋರಿಸಲು    ಈ  ಅಸಾಮಿ ಇಲ್ಲಿ ದೇವಸ್ಥಾನಕ್ಕೂ  ಬೇಟಿ  ಕೊಡುತ್ತಾನೆ.   

 ಈ ಹಾರ್ಪರ್  ಅವನನ್ನು    ಜೋರ್ಜ್  ಬುಸ್ನ  ಕಿರಿ ತಮ್ಮ  ಎನ್ನಬಹುದು. ಅಂದು ಬುಸ್  ಇರಾಕ್  ದಾಳಿ ಮಾಡಿದ.  ಅದರಲ್ಲಿ  ರಾಜಕಾರ್ಯದ ಜತೆ  ಸ್ವಕಾರ್ಯವೂ  ಸೇರಿತ್ತು.  ಟೆಕ್ಸಾಸ್   ಪ್ರಾಂತ್ಯದ  ಬುಶ್  ಕುಟುಂಬಕ್ಕೆ  ತೈಲ   ವ್ಯಾಪಾರ  ಸಂಪರ್ಕವಿದೆ.    ಇಂದು ಈ  ಮನುಷ್ಯ   ಕೆನಡದೊಳಗಿನ  ಆದಿವಾಸಿಗಳ  ಬೂಮಿ  ಲಗಾಡಿ ತೆಗೆಯುತ್ತಿದ್ದಾನೆ.  ಟಾರ್  ಮರಳಿನ  ಗಣಿಗಾರಿಕೆ  ಬಹಳ  ಗಲೀಜು.  ಎರಡು ಟನ್  ಮರಳು  ಪ್ಲಸ್  ಐದು  ಟನ್  ನೀರು  ಕುದಿಸಿದರೆ  ಒಂದು ಬಾರಲ್  ತೈಲ  ದೊರಕುತ್ತದೆ.  ಉಳಿದ  ಕಶಾಯ  ಯಾವುದೇ  ಮುಲಾಜಿಲ್ಲದೆ   ನದಿ  ನೀರಿಗೆ ಬಿಸಾಕುತ್ತಾರೆ.  


ಬಾರತ  ಬಯಲು  ಶೌಚಾಲಯ ಪದ್ದತಿ  ಅನುಸರಿತ್ತಿರಬಹುದು.  ಜಗತ್ತಿನ  ನಾಗರಿಕರು  ಪತ್ರಿಕೆಗಳು   ಅಣಕಿಸಬಹುದು.    ಆದರೆ  ಈ  ಅನಾಮಿಕ  ತೈಲ   ಕಂಪೇನಿಗಳು ಜಗತ್ತನ್ನೇ   ತಮ್ಮ  ಕಸದ  ತೊಟ್ಟಿಯನ್ನಾಗಿ     ಮಾಡಿಕೊಂಡಿವೆ.   ಹೊಗೆ  ಹಾಗೂ   ಮಲೀನತೆಯನ್ನು  ಪರೀಸರಕ್ಕೆ  ಬೀಸಾಕುತ್ತಿವೆ.   ಅಪಾರ  ಹಾನಿ ಉಂಟು ಮಾಡುವುದು   ಅಗೋಚರವಾಗಿಯೇ  ಉಳಿದುಬಿಡುತ್ತದೆ.                


ಈ  ಮದ್ಯೆ  ಒಂದು  ಸಂತಸದ  ವಿಚಾರ.  ಅಮೇರಿಕದ  ಹಲವು ಕಾಲೇಜುಗಳ  ನಿಯಂತ್ರಣದಲ್ಲಿ   ಅಪಾರ  ಬಂಡವಾಳ  ಇರುತ್ತದೆ. ಹಿಂದೆ  ಬಹುಜನ ದಾನಿಗಳು     ಅಮೇರಿಕದ  ಕಾಲೇಜುಗಳ  ನಿರ್ವಹಣೆಗೆ  ಹಾಗೂ    ವಿದ್ಯಾರ್ಥಿ ವೇತನಕ್ಕೆ  ಬಹಳಷ್ಟು    ದಾನ ಇತ್ತಿದ್ದಾರೆ.  ಅವೆಲ್ಲ  ಈಗ  ಕಾಲೇಜುಗಳ  ಹೆಸರಿನಲ್ಲಿ   ಶೇರುಮಾರುಕಟ್ಟೆಯಲ್ಲಿ  ಇರುತ್ತದೆ.    ಹಿಂದೆ  ದಕ್ಷಿಣ  ಆಪ್ರಿಕದಲ್ಲಿ  ವರ್ಣಬೇದ  ನಾಶಮಾಡಲು  ಕಾಲೇಜುಗಳು  ಅಲ್ಲಿನ  ಕಂಪೇನಿಗಳ ಮೇಲೆ ಹೂಡಿದ್ದ  ಬಂಡವಾಳ  ಹಿಂತೆಗೆತವೂ   ಬಹು ನಿರ್ಣಾಯಕ  ಪಾತ್ರವಹಿಸಿದೆ.    ಈಗ   ಅದೇ  ಮಾದರಿ  ತೈಲ  ಕಂಪೇನಿ ವಿರೋದ   ಅನುಸರಿಸಲು  ಪರಿಸರ  ಹೋರಾಟ  ಗುಂಪು  ಕರೆ    ಇತ್ತಿದೆ  ಮಾತ್ರವಲ್ಲ   ಸಫಲವೂ  ಆಗುತ್ತಿದೆ. 



ಪ್ರಪಂಚದ  ಜನಜೀವನ    ಸಂಪೂರ್ಣ  ನಾಶವಾಗುವ   ಮಿತಿಯ  ಐದು ಪಟ್ಟು  ಪೆಟ್ರೊಲ್, ಕಲ್ಲಿದ್ದಲು ದಾಸ್ತಾನು ಇದೆ.  ಆ ಕಂಪೇನಿಗಳ  ಮಾರುಕಟ್ಟೆ  ಬೆಲೆ  ಆ  ದಾಸ್ತಾನಿನ  ಮೌಲ್ಯವನ್ನೂ  ಒಳಪಟ್ಟಿದೆ. ಅಕಸ್ಮಾತ್  ಆಷ್ಟೂ  ಇಂದನ  ದಹಿಸಿದರೆ  ಹಿಂದೆ  ಬರಲಾಗದ  ಶೋಚನೀಯ   ಸ್ಥಿತಿಗೆ  ಪ್ರಪಂಚ  ತಲಪುತ್ತದೆ.  ಉದಾಹರಣೆ  ರಿಲಿಯನ್ಸ್  ಪಾಲುಬಂಡವಾಳ  ಎಂಟುನೂರು  ರೂಪಾಯಿ ಬೆಲೆ    ಈಗ  ಆಂದ್ರದ ಕರಾವಳಿಯಲ್ಲಿರುವ   ನೈಸರ್ಗಿಕ  ಅನಿಲದ  ಮೌಲ್ಯವನ್ನೂ ಒಳಗೊಂಡಿದೆ.   



ಗಣಿಗಾರಿಕೆ   ಎಷ್ಟು ಶಕ್ತಿಶಾಲಿ  ಎಂದರೆ  ಎಡ್ಡಿಯ  ಕಾಲದಲ್ಲಿ  ಕರ್ನಾಟಕದ  ರಸ್ತೆಗಳಲ್ಲಿ ರೆಡ್ಡಿಯ  ಲಾರಿಗಳ  ಹಾರಾಟ  ನೆನಪಿಸಿಕೊಂಡರೆ ಸಾಕು. ಮೊನ್ನೆ   ಪ್ರಾಮಾಣಿಕ   ತೈಲ  ಮಂತ್ರಿ  ಜೈಪಾಲ  ರೆಡ್ಡಿಯನ್ನು  ಅಂಬಾನಿ  ಎಂಬ  ಎಣ್ಣೆ ದೊರೆ     ಕೆಳಗಿಳಿಸಿದ್ದು  ನೆನಪಿಸಿಕೊಳ್ಳಬಹುದು.  ಈ  ಸನ್ನಿವೇಶ  ಇಂದು    ಇಡೀ  ಪ್ರಪಂಚದಲ್ಲಿದೆ.     ಅಂತೂ     ಒಬಾಮ  ಗೆಲುವು  ಪರಿಸರಕ್ಕೆ  ಖಂಡಿತ  ಲಾಭ.  ಪುನಹ  ಚುನಾವಣೆ ಎದುರಿಸುವ  ಅನಿವಾರ್ಯತೆ ಇಲ್ಲದಿರುವ  ಒಬಾಮ  ಈಗಾಗಲೇ  ದಿಟ್ಟ ಹೆಜ್ಜೆಗಳಿಡುವ  ಲಕ್ಷಣ  ತೋರಿಸಿದ್ದಾನೆ.  :-)   
http://www.iol.co.za/scitech/science/environment/obama-re-commits-to-climate-change-pledge-1.1419983#.UJ_D_uSDqzl

Tuesday, November 06, 2012

ವಾಸಿಸುವ ಊರನ್ನೇ ಬೈಯ್ಯುವ ಬುದ್ದಿಜೀವಿ ಕಾರ್ನಾಡ






ಇಂದಿನ   ಕನ್ನಡ ಪ್ರಭ  ಓದುವಾಗ  ಆರು ತಿಂಗಳು  ಹಿಂದೆ  ಇವರೇ  ಬರೆದ  ಎರಡು  ಲೇಖನಗಳು  ನೆನಪಾದವು.  


ಕನ್ನಡದ  ಉದಯವಾಣಿಯಲ್ಲೂ  ಇಂಗ್ಲೀಶಿನಲ್ಲಿ  ನ್ಯೂಸ್ ವೀಕ್     ಬಳಗದ  ಜಾಲ  ಪತ್ರಿಕೆಯಲ್ಲೂ  ಬೆಂಗಳೂರು  ಬಗೆಗಿನ   ಲೇಖನ  ಪ್ರಕಟವಾಗಿತ್ತು.    ಅಮೇರಿಕದಿಂದ  ಪ್ರಕಟವಾಗುವ  ಪತ್ರಿಕೆಯಲ್ಲೂ  ಬೆಂಗಳೂರಿನ  ಬಗ್ಗೆ  ಕೆಟ್ಟದಾಗಿ ಬರೆಯುವ  ಈ ಕಾರ್ನಾಡ್  ಬಗೆಗೆ  ಯೋಚಿಸಲೂ  ಹೇಸಿಗೆ  ಅನಿಸುತ್ತದೆ  -   ಹಲವಾರು ವರ್ಷಗಳಿಂದ  ಇಲ್ಲಿಯೇ  ಬದುಕಿರಿರುವುದಾದರೂ    ನೆಲೆ ನಿಂತ  ಊರಿಗೆ  ಸಮಾಜಕ್ಕೆ    ಈತನ  ಕೊಡುಗೆ  ಸೊನ್ನೆ.  ಬೆಂಗಳೂರಿನ  ಕಸದ  ರಾಶಿಗೆ    ಯುರೋಪಿನಂತಿತ್ತು  ಬೆಂಗಳೂರು  ಎನ್ನುವ   ಈ  ಕಾರ್ನಾಡನ  ಕೊಡುಗೆ  ಇಲ್ಲವೇ ?  ಉಂಟು.  ತಮ್ಮ  ಪಾಲಿನ    ಕಸ.  

ನಾ  ಮೊದಲು ನೋಡಿದ  ಬೆಂಗಳೂರು  ಇದಲ್ಲವಲ್ಲ ಎಂದು ಗಿರೀಷ    ಕಾರ್ನಾಡ      ಉದಯವಾಣಿಯಲ್ಲಿ ಹಪಹಪಿಸಿದ್ದಾರೆ.  ಆದರೆ  ದಾರಿ ಅಗಲಗೊಳಿಸಲು    ಅವರ ಮನೆ ಗೋಡೆ  ಕೆಡವುದರ  ವರೆಗೆ ಅವರೂ  ಸುಮ್ಮನಿದ್ದರು.  ಮುಂಬಯಿಯಲ್ಲಿ   ಪದ್ಯ  ಹೇಳುವವಳಿಗಾಗಿ     ಬಹಳ   ಅಗತ್ಯವಿದ್ದ     ಮೇಲ್ಸೇತುವೆ   ನಿರ್ಮಾಣ  ಸ್ಥಗಿತಗೊಳಿಸಲಾಗಿತ್ತು. ವಿಳಂಬವಾದಂತೆ   ಯೋಜನಾ ಖರ್ಚು ಏರುತ್ತಾ  ಹೋಗುತ್ತದೆ.  

ಪ್ರತಿ ದಿನ  ನಾಲ್ಕು ನೂರು  ಕಾರುಗಳು  ಸಾವಿರದ ಇನ್ನೂರು  ಬೈಕುಗಳು  ರಸ್ತೆಗಿಳಿಯುತ್ತದೆ  ಎನ್ನುವ   ಈ ಕಾರ್ನಾಡರು  ಸ್ವತಹಾ  ಕಾರು  ಉಪಯೋಗಿಸುವವರೇ  ಆಗಿದ್ದಾರಲ್ಲ  !   ರಸ್ತೆ  ಅಗಲವಾದರೆ  ಇವರಿಗೂ  ಅನುಕೂಲವಲ್ಲವೇ ?   ರಾಚ್ಗನ್  ತಮಿಳು ಸಿನೆಮದಲ್ಲಿ  ಕಾರು ತಯಾರಿ ಕಂಪೇನಿ ಯಜಮಾನನಾಗಿ  ನಟಿಸಿದ    ಈ  ಕಾರ್ನಾಡರಿಗೆ   ಕಾರು  ತಯಾರಿ ಹಾಗೂ   ಉಪಯೋಗದ  ಸಮಸ್ಯೆಗಳ    ಬಗೆಗೆ   ಅರಿವು  ಇರಬಹುದಲ್ಲ ??   

ಕೊನೆಗೆ    ಇಂಗ್ಲೀಷ್  ಕನ್ನಡದಲ್ಲೆರಡರಲ್ಲೂ  ತಮ್ಮ  ಗೋಳು  ಬರೆಯುವ  ಅವರು  ಮೊದಲು  
ವೈಯುಕ್ತಿಕ   ವಾಹನದ ಬದಲಾಗಿ ವೈಯುಕ್ತಿಕ  ಶ್ರಮ  ಉಪಯೋಗಿಸಿ  ನಡೆಯೋಣ,  ಸೈಕಲ್ ಉಪಯೋಗಿಸೋಣ  ಅಥವಾ  ಬಸ್ಸಿನ ವ್ಯವಸ್ಥೆ ಹೆಚ್ಚು  ಬಲಿಷ್ಟಗೊಳಿಸೋಣ  ಎನ್ನಬಹುದಾಗಿತ್ತು.    ಅವರ  ನಾಟಕಗಳಲ್ಲಿ  ಈ   ಸಂದೇಶ    ಕೊಡುತ್ತಿದ್ದರೆ   ಪರಿಣಾಮಕಾರಿಯಾಗುತಿತ್ತು.   

ಕಾರು ನಾಡರ  ಬಗೆಗೆ  ಇನ್ನಷ್ಟು  ಉತ್ತಮ  ಪ್ರತಿಕ್ರಿಯೆ ಓದಲು
http://www.kannadaprabha.com/pdf/7112012/9.pdf

Tuesday, October 16, 2012

ಜಗತ್ತನ್ನು ಉಳಿಸಲು ದೇವರು ಅವತರಿಸುತ್ತಾನೆ …….



ದೇವರು  ಆರು ದಿನಗಳಲ್ಲಿ ಜಗತ್ತನ್ನು ಸೃಷ್ಟಿಸಿದ. ಇದು  ಅಮೇರಿಕ  ಎಂಬ  ದೇಶದ  ಹಲವು  ರಾಜ್ಯಗಳಲ್ಲಿ  ಪುಟ್ಟ   ಮಕ್ಕಳು  ಶಾಲೆಯಲ್ಲಿ    ಓದುವ   ಪಾಠ.    ಅನಂತರ  …  ಕ್ಷಮಿಸಿ ಇಲ್ಲಿ ಸ್ವಲ್ಪ   ಗೊಂದಲವಿದೆ.     ಗಿನಿಸಿಸ್ ಒಂದರ ಪ್ರಕಾರ  ಗಿಡ  ಮರಗಳ ಪ್ರಾಣಿಗಳ  ಅನಂತರ  ಆಡಮ್ ಹಾಗೂ   ಇವ್  ಇವರನ್ನು ಜತೆಯಾಗಿ ಸೃಷ್ಟಿಸಿದ.

  

ಆದರೆ,  ಗಿನಿಸಿಸ್  ಎರಡರ  ಪ್ರಕಾರ  ಮೊದಲು  ಆಡಮ್ ನಂತರ  ಗಿಡಮರಗಳು ಪ್ರಾಣಿಗಳ     ಸೃಷ್ಟಿಯಾದ  ನಂತರ  ಆಡಮನ   ಪಕ್ಕೆಲುಬುವಿನಿಂದ   ಅವನಿಗೊಂದು  ಜತೆಗಾರ್ತಿ ಇವ್ ಳನ್ನು   ಕೊಟ್ಟ.    



ಒಟ್ಟಿನಲ್ಲಿ ದೇವರು   ಆಡಮ್  ಮತ್ತು ಇವ್  ಅವರನ್ನು  ಸೃಷ್ಟಿಸಿದ  ಅನ್ನುವುದಕ್ಕೆ  ಯಾವುದೇ  ಸಂಶಯವಿಲ್ಲ.   ಅಮೇರಿಕದಲ್ಲಿ    ಪುಟ್ಟ  ಮಕ್ಕಳ   ವಿದ್ಯಾಬ್ಯಾಸ  ಈ ರೀತಿ  ಸಾಗಲು   ಅಲ್ಲಿನ  ಪ್ರಮುಖ    ಪಕ್ಷವು  ಡಾರ್ವಿನನ  ವಿಕಾಸವಾದವನ್ನು  ಸಂಪೂರ್ಣ  ಅಲ್ಲಗಳೆದು  ಬೈಬಲ್ ವಾದವನ್ನು  ಪ್ರತಿಪಾದಿಸುತ್ತದೆ.

ಅವರು  ಅಲ್ಲಿನ  ಮಕ್ಕಳಿಗೆ ಏನು ಬೇಕಾದರೂ  ಕಲಿಸಲಿ ಎಂದು ನಾವು  ಪೂರ್ತಿಯಾಗಿ     ಬಿಟ್ಟುಬಿಡುವಂತಿಲ್ಲ. ಯಾಕೆಂದರೆ   ನವೆಂಬರ್   ಮೊದಲ  ವಾರ   ಅಮೇರಿಕದಲ್ಲಿ  ಅಧ್ಯಕ್ಷರ   ಚುನಾವಣೆ  ನಡೆಯಲಿದೆ.  ಈ ಚುನಾವಣೆ ಫಲಿತಾಂಶ   ಮುಂದಿನ ದಿನಗಳಲ್ಲಿ  ಜಾಗತಿಕ   ಪರಿಸರ  ದ್ವಂಸದ    ಬಗೆಗೆ  ನಿರ್ಣಾಯಕ  ತಿರುವು ಕೊಡಲಿದೆ. ಯಾಕೆಂದರೆ  ಅಲ್ಲಿನ    ಒಂದು  ಪಕ್ಷವು  ಮಾನವನ  ಚಟುವಟಿಕೆಗಳಿಂದಾಗಿ    ಭೂಮಿ    ಉಷ್ಣವಾಗುವುದನ್ನೂ  ಅಲ್ಲಗಳೆಯುತ್ತದೆ.   ಮತದಾರರಲ್ಲಿ   ಇನ್ನೇನು  ಅವತರಿಸಲಿರುವ  ಆ  ಸರ್ವಶಕ್ತ  ದೇವನು  ಎಲ್ಲವನ್ನೂ  ಸರಿಪಡಿಸುತ್ತಾನೆ  ಎನ್ನುವ   ಭ್ರಮೆಯನ್ನುಂಟು   ಮಾಡುತ್ತಾರೆ  ಈ  ಪಕ್ಷದವರು.   ನನ್ನ  ತಕರಾರು ಇರುವುದು  ದಾರ್ಮಿಕ   ಕಾರಣವಲ್ಲ,  ನಾವಿರುವ ಈ   ಜಗತ್ತಿನ  ಬಗೆಗೆ   ಪರಿಸರ ಕಾಳಜಿ    ಅಷ್ಟೇ.  ಆದರೆ    ಈಗ   ಒಬಾಮನೇ    ಗೆದ್ದರೂ ಸುಖವಿಲ್ಲ.    ಯಾಕೆಂದರೆ ಶಾಸನ  ಸಭೆಗಳಲ್ಲಿ ಅವನ  ಪಕ್ಷಕ್ಕೆ  ಬಹುಮತವಿಲ್ಲ.  ಹಾಗೆ ಈ  ವಿತಂಡವಾದಿಗಳು  ಅವನ  ಪ್ರತಿ ಹೆಜ್ಜೆಗೂ  ಕಿರಿಕಿರಿ  ಉಂಟುಮಾಡುತ್ತಿದ್ದಾರೆ,  ಮುಂದೆಯೂ  ಮಾಡುತ್ತಾರೆ.    


ಅಮೇರಿಕದಲ್ಲೊಂದು  ಪ್ರಬಲ ಪಕ್ಷ – ಆನೆ ಪಕ್ಷ.  ಇವರೆಲ್ಲ  ದರ್ಮಬೀರುಗಳು.    ಈ  ಆನೆ ಪಕ್ಷದ   ರಾಜಕಾರಣಿಗಳ  ವರ್ತನೆ ಕೆಲವೊಮ್ಮೆ  ಹಾಸ್ಯಾಸ್ಪದವೂ  ಆಗಿರುವ  ಕಾರಣ  ಮೋಜು  ಅನಿಸುವುದಾದರೂ  ಅವರ ಕೈಯಲ್ಲಿ  ಅಧಿಕಾರ  ಅನ್ನುವಾಗ  ಬೀತಿ ಉಂಟಾಗುತ್ತದೆ.  ಡಾರ್ವಿನನ  ವಿಕಾಸವಾದದಿಂದ ಹಿಡಿದು   ಇಂದು  ವಿಜ್ಞಾನಿಗಳು  ಪ್ರಯೋಗದಿಂದ  ಖಚಿತಪಡಿಸುವ  ವಾತಾವರಣ  ಉಷ್ಣವಾಗುವುದರ ವರೆಗೆ ಎಲ್ಲವನ್ನೂ  ಅಲ್ಲಗಳೆಯುತ್ತಾರೆ.   ಮಾನವ ವಿಕಾಸ  ಬಗೆಗೆ    ಬೈಬಲ್‍ವಾದದಲ್ಲಿ   ಪಾಠ  ಮಾಡಬೇಕೆಂದು  ಶಿಕ್ಷಕರ  ಮೇಲೆ  ಒತ್ತಡವಿದೆ.      ನಿರಪರಾಧಿಗಳಿಗೆ      ಅತಿ ಹೆಚ್ಚು  ಮರಣದಂಡನೆ  ವಿದಿಸುವ  ರಾಜ್ಯ    ಸರಕಾರಗಳೆಲ್ಲ    ಈ  ಆನೆ ಪಕ್ಷದವು. ಈ   ಪಕ್ಷದ    ಬುಶ್  ಇತ್ಯಾದಿ    ತೈಲ ದೊರೆಗಳಿಗೆ     ಉತ್ತರ ದ್ರುವದ  ಹಿಮಕವಚ ಕರಗಿದರೆ   ಅಲ್ಲೂ  ತೈಲಬಾವಿ  ಕೊರೆಯುವ  ದೂರಾಲೋಚನೆ. 


ಏರುತ್ತಿರುವ  ಸಮುದ್ರ ಮಟ್ಟದಿಂದಾಗಿ  ಈಗಾಗಲೇ   ಅಮೇರಿಕದ  ಪೂರ್ವ ಕರಾವಳಿಯ  ಇತ್ತೀಚಿನ  ವರೆಗೆ     ೩೫೦ ಜನರ ವಾಸ್ತವ್ಯವಿದ್ದ   ಹಾಲೆಂಡ್ ಹೆಸರಿನ    ದ್ವೀಪವೊಂದು  ಮುಳುಗಿದರೂ  ಇವರು ಕಣ್ಮುಚ್ಚಿ ಕುಳಿತುಕೊಳ್ಳಲು  ತಯಾರು. ಮೇಲಿರುವ  ಚಿತ್ರದಲ್ಲಿರುವ   ಕಟ್ಟಡ  ಆ  ದ್ವೀಪದ  ಕೊನೆಯ  ಕಟ್ಟಡ.    ಈ  ವಿಚಾರದಲ್ಲಿ    ಕಿತಾಪತಿ  ಮಾಡದೆ   ಸುಮ್ಮನಿರಲು  ಮಾದ್ಯಮಗಳಿಗೆ ಹಾಗೂ  ವಿಜ್ಞಾನಿಗಳಿಗೆ  ಒತ್ತಡವಿದೆ.     

 ಅಂದು  ಈ  ಪಕ್ಷದ    ಜಾರ್ಜ್    ಬುಶ್  ಇರಾಕನ್ನು   ದಂಡೆತ್ತಿ  ಹೋದದ್ದು  ತೈಲ ಬಾವಿ  ವಶಪಡಿಸಿಕೊಳ್ಳುವುದಕ್ಕೆ.  ಆಗ  ಜನಬೆಂಬಲ  ದೊರಕಿಸಿಕೊಳ್ಳಲು   ಸದ್ದಾಮನಲ್ಲಿ  ಅಪಾಯಕಾರಿ  ಶಸ್ತ್ರಾಸ್ತ್ರಗಳಿವೆ  ಎಂದು    ಎಷ್ಟು ಅಪಪ್ರಚಾರ ಮಾಡಿದ್ದಾರೆಂದರೆ   ಇಂದಿಗೂ,   ಒಂಬತ್ತು  ವರ್ಷ    ಕಳೆದ  ನಂತರವೂ  ಆನೆ ಪಕ್ಷದ  ಅನುಯಾಯಿಗಳಿಗೆ  ಅದು ಸುಳ್ಳೆಂದು  ಅರಿವಾಗಲೇ  ಇಲ್ಲ.     ಎರಡೇ  ಪಕ್ಷಗಳು  ಅಂದ ನಂತರ  ಸಮಪಾಲು   ಜನ  ಇವರ   ಬೆಂಬಲಿಗರೆಂದು  ಹೇಳಬಹುದು.  ಮುಂದುವರಿಸಿ  ಹೇಳುವುದಾದರೆ   ಅರೆವಾಶಿ  ಅಮೇರಿಕನರು  ಅರೆ ಹುಚ್ಚರು  ಅನ್ನಲೂ  ಬಹುದು.  J


 ಇಷ್ಟರ  ವರೆಗೆ ನಮಗೆ ಇಸ್ಲಾಮಿಕ್  ಮೂಲಬೂತವಾದ  ಮಾತ್ರ  ಪರಿಚಿತವಾಗಿತ್ತು.  ನಿಜಕ್ಕೂ  ನೋಡಿದರೆ  ಈ   ಕ್ರೈಸ್ತ  ಭಯೋತ್ಪಾದನೆ  ಹೆಚ್ಚು  ಅಪಾಯಕಾರಿ.    ಇದರ   ಗಂಬೀರ  ಸಮಸ್ಯೆ  ನಮಗೆ  ಅರಿವಾಗದೆ ಇರುವುದಕ್ಕೆ  ಕಾರಣ  -  ಮಾದ್ಯಮಗಳೆಲ್ಲ  ಅವರ   ನಿಯಂತ್ರಣದಲ್ಲಿ  ಇರುವುದು.  ದೇವರು ಬಂದು  ನಮ್ಮನ್ನೆಲ್ಲ  ಕಾಪಾಡುತ್ತಾನೆ  ಎನ್ನುವ  ಮೂರ್ಖನ  ಕೈಯ್ಯಲ್ಲಿ    ಜಗತ್ತಿನ  ಅತಿ ದೊಡ್ಡ  ಅಣುಬಾಂಬುಗಳ ರಾಶಿಯ  ನಿಯಂತ್ರಣವಿದ್ದರೆ    ??        



eÛeé% …ßÎé @ÈÚƒ¾ÚßÆÇ @ÈæßÂOÚ¥ÚÆÇ«Ú PÃÌ`¾Úß«é VÚßM®Úâ´VÚ×Úß }ÚÈÚß½ ®ÛÃ…ÄÀÈÚ«Úß„ Ôæ_`ÒOæàMsÚÈÚâ´.   eÛ}ÚÀ~Þ}Ú ÑÚÈÚáÛdÈÚ«Úß„ «æÄOÚ_`ÑÚÄß ÑÚÈÚßÁÚ «ÚsæÑÚ†æÞOÚß ÈÚß}Úß¡ @ÈæßÂOÚÈÚ«Úß„ ¥æÞÈÛƒ®Ú}ÚÀ¥Ú ÑÛÈÚáÛÃdÀÈÚ«Û„W ®ÚÂÈÚ~%ÑÚÄß ÑÚMɨ۫ڥÚÆÇ …¥ÚÅÛÈÚzæ }ÚÁÚ†æÞOæM¥Úß …ÕÁÚMVÚÈÛW OÚÁæ ¬ÞsÚÄß @ÈÚâ´ ®ÚÃ…Ä ÈæÞ¦OæVÚ×ÛW¥Ú§ÈÚâ´. 

C Õ«æ„Åæ¾ÚßÆÇ «ÛÈÚâ´ CÈÚÁæVæ @eÛk}ÚÁÛW¥Ú§ Éßmé ÁæàÞÉß„ ÈÚß}Úß¡ B«Úà„ d«Ú¯Ã¾ÚßÁÛW DئÁÚßÈÚ …ÁÛOé J†ÛÈÚß @ÈÚÁÚ «ÚsÚßÈÚy ÔæVÚÅæzæ¾Úß ÑÚ°¨æ%¾Úß«Úß„ VÚÈÚ߬ÑÚ†æÞOÚß. ÁæàÞÉß„ @ÈÚÁÚß ÈæàÞÈÚß%«é ^Ú^é%«Ú @«Úß¾ÚáÛ¿ß. GÄÇ @ÈæßÂOÚ«Ú„ÁÚß C «æÄ¥Ú ¥æÞÈÚÁÚß- @M¥ÚÁæ ¾æßÞÑÚßPÃÑÚ¡«Ú OÛ«Úà«Ú«Úß„ ®ÛÆÑÚ†æÞOÚß GM…ߥÚß ÈæàÞÈÚß%«é ^Ú^é%«Ú ®ÚÃ~®Û¥Ú«æ. ÉßÑæàÓÞ¾Úß eÛÀOÚÓ«é Òn¾ÚßÆÇ ¾æßÞÑÚßPÃÑÚ¡ ÈÚß}æ¡ d¬ÑÚß}Û¡«æ GM…ߥÚß ÈæàÞÈÚß%«Ú„ÁÚ «ÚM¸Oæ. ^Ú^é%Væ Ôæ^Úß` Ôæ^Úß` ÑÚMSæÀ¾Úß ÑÚ¥ÚÑÚÀÁÚß †æÞOÚß. ÔÛVÛW ÈÚߥÚßÈæ¾ÚáÛW d«ÚÑÚMSæÀ¾Úß«Úß„ Ôæ_`ÑÚßÈÚâ´¥Úß @ÈÚÁÚ ÑÚM®ÚÃ¥Û¾Úß. Éßmé ÁæàÞÉß„¾Úß }Û}Ú eÛeé% ÁæàÞÉß„ ÈÚßàÈÚÁÚß ®Ú~„¾ÚßÂM¥Ú 35 ÈÚßOÚQ×Ú«Úß„ ®Ús榥ڧÁÚß! ÈæàÞÈÚß%«Ú„ÁÚ C ¬ÄßɬM¥ÛW @…ÃÔÛM ÆMOÚ«é 1862ÁÚÆÇ …ÔÚß®Ú~„}Ú‡ÈÚ«Úß„ ¬ÎæÞƒÒ¥ÚৠDMlß. 

ÈæàÞÈÚß%«Ú„ÁÚß ÈÚß}Úß¡ eÛeé% …ßÎé @ÈÚÁÚ"†Û«é% @Væç«é BÈÛMeæÆOÚÅéÓ' }ÚÈÚß½¥æÞ A¥Ú ÉËÚ‡ÈæãM¥Ú«Úß„ ÑÚäÏoÑÚßÈÚ OÚ«ÚÑÚß OÚMt¥Ú§ÁÚß. }ÛÈÚâ´ «ÚM¸¥Ú§«æ„Þ GÄÇÁÚà «ÚM…†æÞOÚß GM…ߥÚß @ÈÚÁÚ BÁÛ¥æ¾ÚáÛW}Úß¡. @ÈÚÁÚM}æ¾æßÞ ÑÚIJVÚ×Úß ÈÚß}Úß¡ Ñè¦ @ÁæÞ¸¾ÚáÛ¥Ú ÈÚÔÛ¸VÚ×Úà «Úsæ¥ÚßOæàMt¥Û§Áæ, B}ÚÁÚ ÈÚßßÒÇÈÚßÁÚß }ÚÈÚß½«æ„Þ @«ÚßÑÚÂÑÚ†æÞOÚß GM¥Úß …¾ÚßÑÚß}Û¡Áæ. JM¥æÞ JM¥Úß ÈÚß}Ú- @M¥ÚÁæ }ÚÈÚß½ ÈÚß}ÚÈæãM¥Ú«æ„Þ ÔæàM¦ÁÚßÈÚ ÉËÚ‡¥Ú ÑÚäÏo @ÈÚÁÚ VÚßÂ."PÃÌ`¾Úß«é Áæçmé' ÑÚMYÚl«æ¾Úßß ÔÚ}Úß¡ @MËÚVÚ×Ú ¥æçÈÛ«ÚßËÛÑÚ«ÚÈÚâ´ ÉËÚ‡¥Ú OÛ«Úà«ÛW ®ÚÂÈÚ~%}ÚÈÛVÚ†æÞOÚß GM¥Úß …¾ÚßÑÚß~¡¥Ú§Áæ, ÑÚIJVÚ×Úß ËÚÂÞ¾Úß}é ÉËÚ‡¥Ú OÛ«Úà«Úß AVÚ†æÞOÚß G«Úß„~¡¥Û§Áæ. BM¢Ú «ÛVÚÂOÚ}æVÚ×Ú ÈÚߨæ´À ÑÚMYÚÎÚ%ÈÚ«Úß„ }Ú¯°ÑÚ†æÞOÛ¥ÚÁæ ¥æÞÈÚÁæÞ ®ÚÈÛsÚ }æàÞÁÚ†æÞOÚÎæo. 

ಇವೆಲ್ಲ  ಯೋಚಿಸುವಾಗ ಸಚ್ಚಿದಾನಂದ  ಹೆಗ್ಡೆಯವರ   ಮಾತು  ಇಲ್ಲಿ  ಪ್ರಸ್ತುತವೆನಿಸುತ್ತದೆ.   ಅವರು ಬರೆಯುತ್ತಾರೆ -    ಪ್ರಕೃತಿಯೊಂದಿಗೆ   ಒಂದಾಗುವುದು ಮಾನವ    ದರ್ಮ.   ಪ್ರಕೃತಿಯನ್ನು ತುಳಿಯುವುದು ಅದರ್ಮ.  ಪ್ರಕೃತಿ ಇರುವುದು  ಮಾನವನಿಗಾಗಿ ಎಂಬ  ಸೆಮೆಟಿಕ್ ಸಿದ್ದಾಂತವನ್ನು ನಾವು ಕೈ ಬಿಟ್ಟು  ಭಾರತಿಯ  ಸಂಸ್ಕೃತಿಗೆ  ಮರಳಬೇಕು.  ಈಗ  ಇರುವುದು  ಅದೊಂದೆ  ಪರಿಹಾರ.



ತಡವಾಗಿ   ಸೇರ್ಪಡಿಸಿದ   ಸೂಚನೆ  :    ಅಶೋಕಣ್ಣನವರು ಹೇಳಿದಂತೆ,    ಕನ್ನಡ  ಪ್ರಭದ  ಅಕ್ಷರಗಳು  ಅಳವಡಿಸಿರದ  ಗಣಕಗಳಲ್ಲಿ  ಜೋರ್ಜ  ಅವರ  ಅಂಕಣ  ಓದಲು  ಸಾದ್ಯವಾಗುವುದಿಲ್ಲ.   ಸುಲಭ  ಪರಿಹಾರವೆಂದರೆ  ಫೋಂಟ್  ಹಂಗಿಲ್ಲದೆ  ಓದಲು   ಮೂಲ   ಕನ್ನಡ  ಪ್ರಭ  ಪತ್ರಿಕೆಯ  ಪುಟವನ್ನೇ  ತೆರೆಯಿರಿ    - http://www.kannadaprabha.com/pdf/14102012/10.pdf.   ಆ  ಲೇಖನದ  ಇಂಗ್ಲೀಶ್ ಮೂಲಪ್ರತಿಯನ್ನೇ  ಓದುವ  ಆಸಕ್ತಿ ಇದ್ದರೆ  -   http://tjsgeorge.blogspot.in/2012/10/as-religious-hardliners-gain-ground.html

Saturday, October 06, 2012

ರಸ್ತೆಗಳ ಕಾರುಗಳಿಂದ ಮುಕ್ತಗೊಳಿಸೋಣ !!

ನಮ್ಮ  ಸಮಾಜ  ಇಂದು ಭ್ರಮಾಲೋಕದಲ್ಲಿದೆ.   ಕಾರುಗಳ   ಗುಲಾಮಗಿರಿಗೆ  ಎಲ್ಲರೂ   ಒಳಪಟ್ಟಿದ್ದೇವೆ.    ಪರದೇಶಗಳ  ಸಹಾಯದಿಂದ  ತಯಾರುವ ಕಾರುಗಳನ್ನು   ಪರದೇಶಿ ಇಂದನ  ಬಳಸಿ  ಕಾರುಗಳ    ಓಡಿಸುವುದು  ಹೆಮ್ಮೆಯ  ಸಂಕೇತ  ಅನ್ನುವುದೇ ಯೋಚಿಸಿ ನೋಡಿದರೆ    ಮುಜುಗರದ  ವಿಚಾರ.  ಇಂದು   ಸಾರ್ವಜನಿಕ  ಸೊತ್ತಾದ  ರಸ್ತೆಯನ್ನು   ಕಾರು  ಎಂಬ   ವೈಯುಕ್ತಿಕ  ಸೊತ್ತು   ಸಮಾಜಕ್ಕೆ  ಅರಿವೇ  ಆಗದಂತೆ    ಆತಿಕ್ರಮಿಸುತ್ತಿದೆ.   ಪರಿಣಾಮವಾಗಿ   ರಸ್ತೆ ಇರುವುದೇ  ಕಾರುಗಳಿಗಾಗಿ  ಎನ್ನುವ  ಬಾವನೆ ಸಮಾಜ  ಹೊಂದಿರುವುದು ಬೇಸರದ  ವಿಚಾರ.  

ಕೊಳ್ಳುಬಾಕ  ಸಂಸ್ಕೃತಿಯ  ಪ್ರಮುಖ  ಬಾಗಗಳಾದ  ಟಿವಿ  ಮೊಸೈಕಲು ಮೊಬೈಲುಗಳು  ಸಮಾಜವನ್ನು  ಪ್ರಜ್ನೆರಹಿತವಾಗಿ   ಭ್ರಮಾಲೋಕದತ್ತ ದೂಡುತ್ತಿವೆ.  ಜನ    ಕಾರು ಕೊಳ್ಳಲು,  ನಡೆಸಲು   ತಮ್ಮ ದುಡಿಮೆಯ  ಬಹು ಪಾಲು  ಹಣವನ್ನು  ವಿನಿಯೋಗಿಸುತ್ತಿದ್ದಾರೆ.   ಸರಕಾರಗಳು ಕಾರು ಓಡಾಟ  ಸುಗಮಗೊಳಿಸಲು  ಎನ್ನುವ  ನೆಪದಲ್ಲಿ   ರಸ್ತೆಗಾಗಿ  ಬಹುಪಾಲು ಹಣವನ್ನು  ಪೋಲು ಮಾಡಿತ್ತಿದೆ.   ಕಾರು  ದಟ್ಟಣೆಯಿಂದಾಗಿ    ಪರಿಸರ ಮಾಲಿನ್ಯ,  ರಸ್ತೆಯಲ್ಲಿ ತಡೆಯಿಂದಾಗಿ  ಸಮಯ ಪೋಲು ಇತ್ಯಾದಿ ಹಲವಾರು    ಸಮಸ್ಯೆಗಳು.   ವರ್ಷದಲ್ಲಿ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ  ಹೆಚ್ಚು  ಜನ  ರಸ್ತೆ ಅಪಘಾತದಲ್ಲಿ  ಸತ್ತು  ಪ್ರಪಂಚದಲ್ಲಿಯೇ  ಅತಿ ಹೆಚ್ಚು  ರಸ್ತೆ ಅಪಘಾತದಲ್ಲಿ  ಸಾಯುವ  ದೇಶವೆನ್ನುವ ಕುಖ್ಯಾತಿ   ನಮ್ಮದು.     ಅರ್ಥಾತ್  ಒಂದು  ರೀತಿಯಲ್ಲಿ  ಕಾರಿಗಾಗಿ ನಾವು ಎನ್ನುವ  ಸ್ಥಿತಿ  ತಲಪಿದ್ದೇವೆ. 




ರಸ್ತೆಗಳ  ಮುಕ್ತಗೊಳಿಸೋಣ  ಹೋರಾಟ    ಇಂದು ನಿನ್ನೆಯದಲ್ಲ.  ಬಹಳ ಹಿಂದೆಯೇ  ಅದರ    ಕಿಡಿ ಹತ್ತಿದೆ.  ಆದರೆ  ಲಾಭದೆಡೆ  ಮುಖ ಮಾಡಿ ಕೂತ     ಸರಕಾರ  ಹಾಗೂ ಮಾದ್ಯಮಗಳು  ಸದಾ  ಕಾರು ಕಂಪೇನಿಗಳ  ಬೆಂಬಲಕ್ಕಿದ್ದು  ತಕ್ಷಣ  ಅವರ ನಿಯಂತ್ರಣದಲ್ಲಿರುವ     ಅಗ್ನಿಶಾಮಕದಳದ ಉಪಯೋಗ  ಪಡಕೊಳ್ಳುತ್ತಾರೆ.   ಅದುದರಿಂದ   ಈ  ಚಳುವಳಿಯೂ   ಅಣ್ಣಾ  ಹಜಾರೆ  ಸತ್ಯಾಗ್ರಹದಂತಾಗಿ   ಜಯ  ಸಾದಿಸಲಿಲ್ಲ. 

ಜಿ ಎಸ್ ಜಯದೇವರು  ತಮ್ಮ ಪುಸ್ತಕ    ಹಳ್ಳಿಹಾದಿಯಲ್ಲಿ   ಭ್ರಷ್ಟಾಚಾರ    ಜನರು ಒಪ್ಪಿಕೊಳ್ಳುವ    ವಿಚಾರ   ಹೇಳುತ್ತಾರೆ  - ಪ್ರತಿಯೊಬ್ಬರ  ಮನಸ್ಸಿನಲ್ಲೂ  ತಾವೂ  ಸಹ  ಇಂತಹ ಲಾಭದಾಯಕ  ಸ್ಥಾನಕ್ಕೆ  ಏರಿಕೊಂಡು  ಅಧಿಕಾರ ಅಂತಸ್ತು ಹಣ  ಎಲ್ಲವನ್ನೂ  ಗಳಿಸಬೇಕೆಂದು  ಭಾವಿಸುತ್ತಾರೆ. ಇದು ಬಹುಸಂಖ್ಯಾತ  ಬಾರತಿಯರ  ಕನಸು.  ಇಂತಹ ಕನಸನ್ನು ಕಾಣುತ್ತ  ಇದು ಸಾದ್ಯವಾಗದೆ ತಮಗೆ    ಇರುವುದರಿಂದ ವಿಫಲತೆಯ ಅತೃಪ್ತಿಯಲ್ಲಿ  ಯಾರೊ  ಒಬ್ಬ  ಮಾನ  ಮರ್ಯಾದೆ  ಮೈಚಳಿ ಬಿಟ್ಟು  ಮೆಲೇರಿದರೆ  ಅಬಿಮಾನದ  ಮಹಾಪೂರವನ್ನೇ  ಹರಿಸುತ್ತಾರೆ.  ತಮ್ಮ  ’ಕನಸನ್ನು   ಅವನು ನನಸು ಮಾಡಿದ ’   ಎಂದು ಅಂತರಂಗದಲ್ಲಿ ಅವನನ್ನು ಮೆಚ್ಚುತ್ತಾರೆ.  ಹಾಗಾಗಿ    ರಾಜಕೀಯದ  ಹೊಲಸಿನ ಬಗ್ಗೆ  ಅಸಹ್ಯವಾಗಲಿ, ಪ್ರತಿರೋದವಾಗಲಿ  ಇಂದು ಕಂಡು ಬರುತ್ತಿಲ್ಲ.    

 ಬಹುಕಾಲದಿಂದ  ಸಮಾಜಕ್ಕೆ  ಕಾರುಗಳ  ಬಗೆಗೆ  ಈ  ರೀತಿ  ಅಭಿಮಾನ  ಉಂಟೆಂಬ   ಬಾವನೆ  ನಾನು ಹೊಂದಿದ್ದೇನೆ.  ಎಲ್ಲರೂ   ಮುಂದೊಂದು ದಿನ  ಮಾರುತಿ ಸಾಂಟ್ರೊ  ಯಜಮಾನರಾಗುವವರೇ.  ನನಗೆ   ಜ್ಞಾನೋದಯವಾಗಲು     ಪ್ರಮುಖ  ಕಾರಣ - ಸ್ವಾವಲಂಬನೆ ಸಂಕೇತವಾದ  ಸೈಕಲಿನ ಬಗೆಗೆ  ಕೊರೆಯುವ  ಹುಚ್ಚು. :-)          ಕಾರುಗಳು  ಹೇಗೆ  ಸಮಾಜವನ್ನು  ಇಷ್ಟೊಂದು ಗುಲಾಮಗಿರಿಗೆ    ಒಳಪಡಿಸಿತೆಂದು  ವಿವರಿಸಲು  ಮುಖ್ಯ  ಮೈಲುಗಲ್ಲುಗಳಾದ  ವ್ಯಕ್ತಿಗಳ ಸನ್ನಿವೇಶಗಳ   ಸ್ಥೂಲ  ಚಿತ್ರಣ  ಮುಂದೆ   ಕೊಡುತ್ತೇನೆ.  

ಕಾರುಗಳು   ಇಷ್ಟೊಂದು  ಜನಪ್ರಿಯವಾಗಲು  ಅಮೇರಿಕದ   Miller McClintock  ಎಂಬವನ    ಕೊಡುಗೆ ಅಪಾರ.  ಮೂಲತ  ಸ್ಟಾನ್ಪೋರ್ಡಿನಲ್ಲಿ  ಇಂಗ್ಲೀಷು  ಮೇಸ್ಟ್ರಾದ  ಈ  ಬುದ್ದಿಜೀವಿ    ಸುಮಾರು  ವಾಹನ ಸಂಚಾರ   ಮಾಹಿತಿ  ಸಂಗ್ರಹಿಸಿ    ಹಾವರ್ಡ್ ನಲ್ಲಿ  ಈ  ವಿಷಯದಲ್ಲಿ  ಪ್ರಥಮ  ಪಿಚ್ಚಡಿ  ಎನಿಸಿಕೊಂಡವ.  ಮುಂದೆ  ಟ್ರಾಫಿಕ್  ಇಂಜಿನಿಯರುಗಳ  ಪಿತಾಮಹ.  

ಕಳೆದ  ಶತಮಾನದ   ದ್ವಿತೀಯ   ದಶಕದ  ಪ್ರಥಮಾರ್ಧದಲ್ಲಿ       ವಾಹನಗಳೆಂದರೆ ಅತಿ ಹೆಚ್ಚು  ಮಾನವ  ಜೀವನಕ್ಕೆ ಹಾನಿ ಉಂಟು ಮಾಡುವ ವಸ್ತು  ಎಂದು  ಫ್ರೌಡ  ಲೇಖನ  ಬರೆದಾತ.   ಲಾಸ್ ಎಂಜಲಸ್ ಸೇರಿದಂತೆ ಹಲವು ಪಟ್ಟಣಗಳು  ಇವನನ್ನು  ಸಲಹೆಗಾರನಾಗಿ   ಬಳಸಿಕೊಂಡವು.    ರಸ್ತೆ ಅಗಲ  ಮಾಡುವುದರಿಂದ  ಹೆಚ್ಚು ಹೆಚ್ಚು  ವಾಹನಗಳ  ಆಕರ್ಶಿಸಿ  ಚಾಲನೆ  ಮೊದಲಿನಷ್ಟೇ  ಗೊಜಲಾಗಿರುತ್ತದೆ.   ರಸ್ತೆಗಳಲ್ಲಿ  ಕಾರುಗಳ  ಬದಲು  ಟ್ರಾಮುಗಳ     ಚಾಲನೆಗೆ ಅನಿರ್ಬಂದಿತ ಓಡಾಟಕ್ಕೆ    ಹೆಚ್ಚು   ಪ್ರಾಶಸ್ತ್ಯ  ಕೊಡಬೇಕು  ಎಂದಲ್ಲ   ಬರೆದಾತ   ಇವನು.   ಆ  ಕಾಲದಲ್ಲಿಯೇ   ತುಂಬಾ ಮಕ್ಕಳ  ಬಲಿ ತೆಗೆದುಕೊಂಡ  ಕಾರುಗಳ    ಬಗೆಗೆ    ಜನರ ಮನಸ್ಸಿನಲ್ಲೂ  ಒಲುಮೆಯಿರಲಿಲ್ಲ.     ಆದರೆ     ಕಾರು ತಯಾರಕರು  ತುಂಬಾ  ಕಾರುಗಳ ತಯಾರಿಸುತ್ತಿದ್ದಾರಲ್ಲಾ  !!!

ಆಗ    ಈ  ಮಿಲ್ಲರ್     ಮಹಾತ್ಮ  ಸ್ಟೂಡ್ ಬೇಕರ್    ಕಂಪೇನಿಯ   ಸಂಪರ್ಕಕ್ಕೆ  ಬಂದ.    ಅವನ ವರ್ತನೆ   ಇಂದಿನ  ಪರೀಸ್ಥಿತಿಗೆ    ಹೋಲಿಸುವುದಾದರೆ   ಬಿಜೆಪಿಯಿಂದ  ಕಾಂಗ್ರೇಸಿಗೆ   ನೆಗೆದು  ಸೊನಿಯಾ  ಜಪ  ಪ್ರಾರಂಬಿಸಿದಂತಾಯಿತು.      ತಕ್ಷಣ  ಅವನ  ವಾದಸರಣಿಯೆಲ್ಲ  ಬದಲಾವಣೆ ಹೊಂದಿತು.  ಪಟ್ಟಣಗಳ  ರಚನೆ  ಕಾರು ಬಳಕೆಗೆ ಅನುಗುಣವಾಗಿರಬೇಕು.  ಆಗ  ಕಾರಿನ ಯಜಮಾನ  ಬಹಳ  ಸಮಯ ಉಳಿಸಲು    ಹಾಗೂ  ಕಾರ್ಯವೆಸಗಲು ಅನುಕೂಲವಾಗುತ್ತದೆ  ಎಂದ.     ಕಾಲೇಜುಗಳಲ್ಲಿ    ಸ್ಟುಡ್ ಬೇಕರ್  ಕಂಪೇನಿ  ಸಹಾಯದಿಂದ  ಐನೂರಕ್ಕೂ  ಹೆಚ್ಚು  ಮರಿ ಇಂಜೀನಿಯರುಗಳು  ತಯಾರಾದವು.  ಇದೊಂದು    ಕೈಗಾರಿಕೆಗಳು  ಬುದ್ದಿಜೀವಿಗಳ  ತಮ್ಮ  ಸ್ವಾರ್ಥಕ್ಕಾಗಿ ಬಳಸಿಕೊಳ್ಳುವ  ಪಾಠ  ಕಲಿತ  ನಿರ್ಣಾಯಕ  ತಿರುವು. 





೧೯೧೯ರಲ್ಲಿ  ಅಮೇರಿಕದ  ರಾಜದಾನಿಯಿಂದ  ಸುಮಾರು ಎಂಬತ್ತು ಮಿಲಿಟರಿ  ಲಾರಿಗಳು ೪೮೦೦    ಕಿಮಿ  ದೂರದಲ್ಲಿರುವ   ಪಶ್ಚಿಮ  ಕರಾವಳಿಯತ್ತ  ಹೊರಡುತ್ತವೆ.  ಏಳುತ್ತಾ  ಬೀಳುತ್ತಾ  ದಾರಿಗಡ್ಡವಾದ ಸೇತುವೆಗಳ  ರಿಪೇರಿ ಮಾಡುತ್ತಾ  ಈ ಪಟಲಾಂ  ೬೨   ದಿನಗಳ  ತರುವಾಯ  ಗುರಿಮುಟ್ಟುತ್ತದೆ.    ಆಗ  ಅದರಲ್ಲಿ ಪುಡಿ ಅಧಿಕಾರಿಯಾಗಿದ್ದ ಐಸೆನ್ ಹೂವರ್ ಮುಂದೆ ಅಮೇರಿಕದ  ಅದ್ಯಕ್ಷನಾಗುತ್ತಾನೆ.   ಈ  ಮದ್ಯೆ  ಈತನಿಗೆ  ಎರಡನೇ   ಮಹಾಯುದ್ದದಲ್ಲಿ   ಹೀಟ್ಲರ್  ಮಹರಾಯ   ರಾಜರಸ್ತೆಗಳ   ಉಪಯುಕ್ತತೆ  ಪಾಠ ಮಾಡಿದ್ದ.   ಹಾಗೆ   ಐಸೆನ್ ಹೂವರ್  ಅಮೇರಿಕ  ದೇಶದಾದ್ಯಂತ   ಸಾಗಾಣಿಕೆಗೆ  ಅನಿವಾರ್ಯವಾದ  ಉತ್ತಮ  ರಸ್ತೆಗೆ  ಅಡಿಪಾಯ ಹಾಕುತ್ತಾನೆ.   




ಈ  ಕಾರು  ಗುಲಾಮಗಿರಿಗೆ  ಕಟ್ಟಡ ವಿನ್ಯಾಸಗಾರರೂ  ತಮ್ಮ  ಕೊಡುಗೆ ಇತ್ತಿದ್ದಾರೆ.  Walter Gropius  /   Le Corbusier   ಮುಂತಾದ   ಹಲವಾರು ಪ್ರಖ್ಯಾತ   ವಿನ್ಯಾಸಗಾರರು  ತಮ್ಮ  ಪಟ್ಟಣಗಳ   ಹಾಗೂ   ಕಟ್ಟಡಗಳ  ಕಾರುಗಳಲ್ಲಿ  ಅಗಮಿಸುವರಿಗೆ  ಅನುಕೂಲವಾಗಲೆಂದು  ನಿರ್ಮಿಸಿದರು.  ಇವರನ್ನು ಮಾದರಿಯೆಂದು  ಒಪ್ಪಿದ  ಉಳಿದ  ವಿನ್ಯಾಸಗಾರರೂ   ಮನೆಯಲ್ಲೊಂದು ಕಾರು ಉಂಟೆಂದು  ಪರಿಗಣಿಸಿ  ಕಾರು ಖರೀದಿಗೆ  ಹಾಗೂ  ಅದರಲ್ಲೇ  ತಿರುಗಾಟಕ್ಕೂ   ಪರೋಕ್ಷ   ಒತ್ತಡ  ಹಾಕಿದರು.    



   
ಹೆಚ್ಚು ಕಾರುಗಳ  ತಯಾರಿಕೆಗೆ ಹೆಚ್ಚು ಜನರಿಗೆ  ಕೆಲಸ ಕೊಡುವುದು   ಹಾಗೂ   ಅದು   ಅಭಿವೃದ್ದಿಗೆ  ಪೂರಕ   ಎಂದು  ಇತರ  ದೇಶಗಳ  ಪುಡಾರಿಗಳಿಗೆ ಮನವರಿಕೆ ಮಾಡಿಕೊಟ್ಟಿರುವುದು  ಹೀಟ್ಲರ್  ಮಹಾಶಯ. ಜರ್ಮನಿಯಲ್ಲಿ ೧೯೩೨ರಲ್ಲಿ     ೩೩೦೦೦ ಜನ ೧ ಲಕ್ಷ  ನಾಲ್ಕು  ಸಾವಿರ  ಕಾರು ತಯಾರಿಸಿದರೆ  ಮೂರು ವರ್ಷ  ಅನಂತರ  ಒಂದು ಲಕ್ಷ  ಜನ  ಕೆಲಸ ಮಾಡಿ  ಮುರೂವರೆ  ಲಕ್ಷ  ಕಾರುಗಳ  ತಯಾರಿಸಿದರು.   ವೈಯುಕ್ತಿಕವಾಗಿ    ಅವನನ್ನು ಉಗಿದರೂ  ಅವನ  ಅಪಾರ   ಬುದ್ದಿವಂತಿಕೆ   ಎಲ್ಲ ದೇಶಗಳೂ ಇಂದು   ಅನುಬವಿಸುತ್ತಿದೆ,  ಅನುಸರಿಸುತ್ತಿದೆ.  ಅವನದೊಂದು   ಅರ್ಥಪೂರ್ಣ  ಹೇಳಿಕೆ  ಹೀಗಿದೆ.  “Through clever and constant application of propaganda, people can be made to see paradise as hell, and also the other way round, to consider the most wretched sort of life as paradise.” Adolf Hitler

ವಾಹನಗಳ  ಗೂಂಡಾಗಿರಿ  ಅರಿವಿರುವ    ನನಗೆ  ರಸ್ತೆಗಳಿರುವುದು  ಯಾರಿಗಾಗಿ ಎನ್ನುವ    ಗೊಂದಲ  ಹೊಸತಲ್ಲ.  ಆದರೆ   ಆರು ತಿಂಗಳು ಹಿಂದೆ ಒಂದು ಅಪಘಾತಕ್ಕೆ ಸಿಲುಕಿದ ನಂತರ  ನನ್ನೂರಿನ   ಜನರ  ವರ್ತನೆ  ಅಘಾತ ಉಂಟು ಮಾಡಿತು.  ಸೇರಿದ  ಗೂಂಡಾ  ಜನರ  ವರ್ತನೆ   ದಾರಿ ತಪ್ಪಿ ಬಂದ ಮೊಸೈಕಲಿಗನ    ಸಮರ್ತಿಸುವಂತಿತ್ತು.  ನೀವು  ಸೈಕಲಿಗಾಗಿ  ಲಕ್ಷ  ರೂಪಾಯಿ ಖರ್ಚು ಮಾಡಿರಬಹುದು, ಅದನ್ನು ತಪ್ಪು  ದಾರಿಯಲ್ಲಿ ಬಂದು   ಪುಡಿ ಮಾಡಿದ್ದಕ್ಕೆ   ಅವನು   ಒಂದೆರಡು ಸಾವಿರ  ಕೊಡುತ್ತಾನೆ  ಎನ್ನುತ್ತಾರೆ    ಸೇರಿದ  ಗೂಂಡಾಗಳು.   

ನಿಜಕ್ಕೂ  ನೋಡಿದರೆ  ಒಬ್ಬ  ಸೈಕಲು ಸವಾರನನ್ನು  ನೀನಾದರೂ  ಸೈಕಲಿನಲ್ಲಿ ಪ್ರಯಾಣ  ಮಾಡಿ  ವಾಹನದಟ್ಟನೆ, ಮಲೀನತೆ  ಕಡಿಮೆ ಮಾಡಿದೆಯಲ್ಲ  ಎನ್ನುವ  ಬಾವನೆಯಲ್ಲಿ  ವಾಹನ ಚಾಲಕ ನಗುಮುಖದಿಂದ ಸ್ವಾಗತಿಸಬೇಕು.  ಆದರೆ  ಇವನೆಲ್ಲಿಂದ ಬಂದ ಶನಿ  ಎನ್ನುವ   ಬಾವನೆ  ಹೆಚ್ಚು  ಫಾಶನ್  ಆಗಿರುವುದು  ಮಾನವ  ಜನಾಂಗದದ  ದುರದೃಷ್ಟ. 



ಕಾರುಗಳ  ಗುಲಾಮಗಿರಿಯಿಂದ  ಹೊರಬರಲು ಪ್ರಯತ್ನಿಸೋಣ.  ರಸ್ತೆಗಳಿರುವುದು  ನಾಗರಿಕರಿಗೆ ಹೊರತು  ವಾಹನಗಳಿಗಲ್ಲ  ಎನ್ನುವ   ಮಾತು ನ್ಯೂಯೊರ್ಕ್  ಮೆಯರ್  ಬ್ಲೂಮ್ ಬೆರ್ಗ್  ಇತ್ತೀಚೆಗೆ   ಘೋಷಿಸಿದ್ದರು.    ನಮ್ಮ  ಸೌಜನ್ಯರಹಿತ  ವರ್ತನೆಗೆ  ಕಾರಣ  ನಮ್ಮಲ್ಲಿನ     ಶೀಘ್ರ  ಬೆಳವಣಿಕೆಯೂ  ಹೌದು.  ಮೊಬೈಲ್  ಆಗಲಿ  ವಾಹನಗಳಾಗಲಿ ದೊರಕುವ ಮೊದಲು ಅರಿವು ಮೂಡಬೇಕಾಗಿತ್ತು.   ಇನ್ನಾದರೂ  ಎಚ್ಚೆತ್ತುಕೊಳ್ಳುವರೆಂದು  ಹಾರೈಕೆ. 

ಕೊನೆ ಮಾತು :  ಈಗ  ಹತ್ತು ತಿಂಗಳಿಂದ  ನಾನು ಕಾರು ಚಾಲನೆಯಿಂದ  ದೂರವಿದ್ದೇನೆ.  ನಡೆಯುವುದು, ಸೈಕಲು ಹಾಗೂ  ಸಾರ್ವಜನಿಕ  ಸಾರಿಗೆ ಉಪಯೋಗದಲ್ಲಿ  ಹಳ್ಳಿಯಲ್ಲಿದ್ದರೂ     ಸುದಾರಿಸಬಹುದೆಂಬ  ದೈರ್ಯ  ಬಂದಿದೆ.  ರಾತ್ರಿ ತಿರುಗಾಟ  ಇತ್ಯಾದಿ  ಸಾದ್ಯವಾಗದಿದ್ದರೂ  ಅನಿವಾರ್ಯ  ಓಡಾಟಕ್ಕೆ  ತೊಂದರೆಯಾಗಿಲ್ಲ.  ಈ ಪರ್ಯಾಯಗಳ  ಬಗೆಗೆ   ಮುಂದೆ ಬರೆಯುತ್ತೇನೆ.