Friday, April 10, 2009

ಅಮಾಯಕ ಸರ್ದಾರ್ಜಿಗಳ ಕೊಲ್ಲಿಸಿದ ರಾಜೀವನ ಕಾಂಗ್ರೇಸ್

ಈಗ ಸರ್ದಾರ್ಜಿ ಪತ್ರಕರ್ತನೊಬ್ಬ ಪಚಿಗೆ ಬೂಟೆಸೆದ ಪರಿಣಾಮ ಟೈಟ್ಲರಿಗೆ ಟಿಕೇಟು ಇಲ್ಲ ಎನ್ನುವುದೇ ಸುದ್ದಿ. ಆದರೆ ಟೈಟ್ಲರ ಪ್ರಭೃತ್ತಿಗಳ ಮುಂದಾಳ್ತನದಲ್ಲಿ ಸಾವಿರಾರು ಸಿಖ್ ಜನರು ಸತ್ತದ್ದು ಮಾತ್ರವಲ್ಲ ಕಾಂಗ್ರೇಸ್ ಪಕ್ಷ ಇಂದಿರಾ ಗಾಂಧಿ ಕೊಲೆ ಪ್ರಕರಣದಲ್ಲಿ ಒಬ್ಬ ನಿರ್ದೋಷಿಯನ್ನು ನೇಣು ಹಾಕಿದ ಅಪವಾದವನ್ನೂ ಹೊತ್ತಿದೆ.

ದೆಹಲಿಯ ತಿಹಾರ್ ಜೈಲಿನಲ್ಲಿ ಉರುಳಿಗೆ ಕೊರಳೊಡ್ಡಿದ ಪ್ರಾಯುಶ: ಕೂನೆಯ ವ್ಯಕ್ತಿ ಹಿಂದುಳಿದ ಜಾತಿಯಿಂದ ಬಂದ ಕೆಹರ್ ಸಿಂಗ್ ಎನ್ನುವ ಅಮಾಯಕ. ಇಂದಿರಾ ಗಾಂಧಿಯ ಕೊಲೆಯ ನಂತರದ ನಾಲ್ಕು ದಿನಗಳಲ್ಲಿ ಕಾಂಗ್ರೇಸಿನ ಮೇಲುಚಾರಣೆಯಲ್ಲಿ ಸಿಕ್ಕರ ಮಾರಣ ಹೋಮ ನಡೆದಿತ್ತು. ದೊಡ್ಡ ಮರ ಉರುಳಿದಾಗ ಸಾಕಷ್ಟು ಅನಾಹುತವಾಗುವುದು ಎಂದ ಅಗ ಪಟ್ಟವೇರಿದ ಮೂರ್ಖ ರಾಜೀವ ನಿಯಂತ್ರಣಕ್ಕೆ ಮಿಲಿಟರಿ ಕರೆಸುವುದರ ಬದಲಾಗಿ ಗಲಭೆಗೆ ಮೌನ ಸಮ್ಮತಿ ವ್ಯಕ್ತ ಪಡಿಸಿದ್ದ.

ಕೆಹರ ಸಿಂಗನ ಮೇಲೆ ಕೊಲೆ ಯೋಜನೆಯಲ್ಲಿ ಪಾಲ್ಗೊಂಡಿದ್ದ ಎನ್ನುವುದಕ್ಕೆ ಖಚಿತ ರುಜುವಾತು ಇರಲೇ ಇಲ್ಲ. ಗುಂಡಿಕ್ಕಿದ ಬೆಯಂತ್  ಸಿಂಗರ ಪತ್ನಿ ಮತ್ತು ಕೇಹರ್ ಸಿಂಗ್ ಒಂದೇ ಗ್ರಾಮದವರು ಎನ್ನುವ ವಿಚಾರವೇ ಸಾಕಾಗಿತ್ತು ರಾಜೀವನ ಕೈಗೊಂಬೆ ನ್ಯಾಯಾಲಯಕ್ಕೆ.  ಪರಮೋಚ್ಚ   ನ್ಯಾಯಾಲಯದ  ಮಾಜಿ ವಕೀಲನೆಂಬ ಹೆಗ್ಗಳಿಕೆಯ ವೆಂಕಟರಮಣ ಎಂಬಾತ ಈ ಮರಣ ಶಾಸನಕ್ಕೆ ಹೆಬ್ಬೆಟ್ಟು ಒತ್ತಿಯೇ ಬಿಟ್ಟ.   ರಾಜೀವನ ರಾಜ್ಯಬಾರದಲ್ಲಿ ನಡೆದ ನ್ಯಾಯಾಂಗ ಕೈಗೊಂಡ ಕೊಲೆ ಎಂದರೂ ಸರಿ. ಅನಂತರ ತಿಹಾರ್ ಜೈಲಿನ ಒಳಗಡೆಯೇ  ಕೆಹರ ಸಿಂಗರ  ಅಂತಿಮ ಕ್ರಿಯೆಗಳನ್ನು ನೆರವೇರಿಸಲಾಗಿತ್ತು. ಬೂದಿಯನ್ನೂ ಅವರ ಸಂಬಂದಿಕರಿಗೆ ಕೊಡಲಿಲ್ಲ.
ಅಂದು  ಅತ್ಯದಿಕ  ಪ್ರಸಾರ  ಹೊಂದಿದ ವಾರ ಪತ್ರಿಕೆ   Illustrated Weekly ತನ್ನ 4 December 1988 ರ ಸಂಚಿಕೆಯಲ್ಲಿ ಈ ಪ್ರಕರಣವನ್ನು ವಿವರವಾಗಿ ಪ್ರಕಟಿಸಿತ್ತು. ತಿಂಗಳು ಕಳೆದು  ಜನವರಿ  ತಿಂಗಳಲ್ಲಿ   ಸತ್ವಂತ್  ಸಿಂಗರ  ಜತೆ   ಕೆಹರ್ ಸಿಂಗರನ್ನು ಗಲ್ಲಿಗೇರಿಸಿದರು. ಸಾರ್ವಜನಿಕ  ಅಬಿಪ್ರಾಯಕ್ಕೆ  ಯಾವ  ಬೆಲೆಯೂ  ದೊರಕಲಿಲ್ಲ. 

ಇಂದಿರಾ ಗಾಂಡಿಯನ್ನು [ ಅವರ ಮೂಲ ಪಾರ್ಸಿ ಹೆಸರು.   ಇಂದಿರಾ  ರಾಜಕೀಯ. ಲಾಭಕ್ಕಾಗಿ ಗಾಂಧಿ ಎಂದು ಬದಲಾಯಿಸಿಕೊಂಡರು] ಕೊಂದವರು ಸಿಖ್ ಜನ ಎನ್ನುವುದು ಸಾಕಾಗಿತ್ತು ಕಾಂಗ್ರೇಸಿನವರಿಗೆ  ಸಾವಿರಾರು  ಸಂಖ್ಯೆಯಲ್ಲಿ   ಆ ಜನಾಂಗದವರ ಕೊಲ್ಲಲು. ಬೆಯಂತ್ ಸಿಂಗರ ಪತ್ನಿಯ ಹಳ್ಳಿಯವ ಎನ್ನುವ ರುಜುವಾತು ಸಾಕಾಗಿತ್ತು ಕೆಹರ್ ಸಿಂಗರ ಗಲ್ಲಿಗೇರಿಸಲು.  ಇದು ಕಾಂಗ್ರೇಸ್ ರಾಜ್ಯಭಾರದಲ್ಲಿ    ನ್ಯಾಯಾಂಗದ   ವೈಖರಿ.

No comments: