Wednesday, April 01, 2009

ನಮ್ಮೂರ ಗಾಂಪ ಸತ್ತ

ಮೊನ್ನೆ ನಮ್ಮ ಗ್ರಾಮದ ಗಣ್ಯ ವ್ಯಕ್ತಿ ಗಾಂಪ ಸತ್ತ ಸುದ್ದಿ ಬಂತು. ಮನುಷ್ಯನನ್ನೂ ಮರವನ್ನೂ ಖಚಿತವಾಗಿ ಅಳೆಯಲು ಸಾದ್ಯವಾಗುವುದು ಅಡ್ಡ ಬಿದ್ದಾಗಲೇ ಎನ್ನುವ ಮಾತು ನೆನಪಾಯಿತು. ಅವನ ನಡುವಳಿಕೆ ನೆನಪಾಗಿ ಜತೆಗೆ ಏನನ್ನು ತೆಗೋಂಡು ಹೋದ ಎಂದು ಕೇಳಲು ಮನಸ್ಸು ತವಕಿಸಿತು.

ಈ ರಾಜಕಾರಣಿಗಳು ತಮ್ಮ ಸ್ವಾರ್ಥ ಸಾಧನೆಗೆ ಅಕ್ರಮ ಸಕ್ರಮ ಎನ್ನುವ ಅದ್ಬುತ ಆಲೋಚನೆಯನ್ನು ಜಾರಿಗೆ ತಂದರು. ಎಲ್ಲ ಅಕ್ರಮಗಳಿಗೂ ಬೆಲೆ ನಿಗದಿಪಡಿಸಿದರು. ಒಂದಷ್ಟು ಸೋಮಾರಿಗಳು ಅವರಿವರ ಸೊತ್ತು ಎಗರಿಸುವುದೇ ಉದ್ಯೋಗ ಮಾಡಿಕೊಂಡು ಉಳಿದ ಗ್ರಾಮಸ್ಥರಿಗೆ ಮಾದರಿಯಾದರು. ಅದುದರಿಂದ ಜನ ಮುಗ್ದ ಹಳ್ಳಿಗರು ತಮಗೆ ಅರಿವಿಲ್ಲದೆಯೇ ಭ್ರಷ್ಟರಾದುದು ಇತಿಹಾಸ.

ತನಗೆ ಅಸರೆ ಕೊಟ್ಟವರ ಭೂಮಿಗೆ ಗುಟ್ಟಾಗಿ ಅರ್ಜಿ ಹಾಕಿದವರು ಹಳ್ಳಿಗಳಲ್ಲಿ ಹಲವು ಜನ. ಗಾಂಪ  ಇವರಿಗೊಂದು  ಮಾದರಿಯಾದ.  ಅಲ್ಲೊಂದು ಮಸೀದಿ ಕಟ್ಟುವ ಸುದ್ದಿ ಕೇಳಿದ ಕಾರಣ ಹಿಂದುಗಳಿಗೆಂದು ಉಳಿಸಲು ಅರ್ಜಿ ಹಾಕಿದೆ ಎಂದು ಗಾಂಪ ಹೇಳಿದರೆ ನಾವು ಅಲ್ಲಿ ಗೇರು ಬೀಜ ಇತ್ಯಾದಿ ಕಾಡುತ್ಪತ್ತಿ ಹಾಗೂ ಸೊಪ್ಪು ಸೌದೆಯನ್ನು ಸಂಗ್ರಹಿಸುತ್ತೇವೆ ಎಂದಳು ಅವನ ದರ್ಮಪತ್ನಿ.

ಗಳ ಎಣಿಸಿದ ಎಂದು ಉತ್ತರ ಕನ್ನಡದಲ್ಲೋದು ಗಾದೆ ಇದೆಯಂತೆ. ನಾನು ಕೇಳಿದ ಕಥೆ ಹೀಗಿದೆ. ಅತಿಥಿಯೊಬ್ಬ ಬಂದು ವಾರ ಕಳೆದರೂ ಹೊರಡುವ ಲಕ್ಷಣ ಕಾಣಲಿಲ್ಲ. ಮನೆ ಯಜಮಾನ ಕೊನೆಗೊಮ್ಮೆ ನೀವು ಯಾವಾಗ ಹೊರಡುವುದು ಎಂದಾಗ ಈ ಮನೆ ನನ್ನದು. ಹೊರಡುವ ಪ್ರಶ್ನೆ ಇಲ್ಲವಲ್ಲ ಎಂದು ಅತಿಥಿ ಉತ್ತರಿಸಿದ. ವಿಚಾರ ನ್ಯಾಯಾಲಯಕ್ಕೆ ಹೋಯಿತು. ಅತಿಥಿ ತನ್ನದೆಂದು ಹೇಳಿ ಮನೆಯ ಯಜಮಾನನಿಗೆ ಮನೆಯ ಛಾವಣಿಯ ಎದುರಿನ ಬದಿಯಲ್ಲಿ ಎಷ್ಟು ಗಳಗಳಿವೆಯೆಂದು ಸವಾಲು ಹಾಕಿದೆ. ಈ ಅತಿಥಿ ಮಲಗಿಕೊಂಡೇ ಗಳ ಎಣಿಸಿದ್ದ. ಮನೆಯಾತ ಅದು ತಾನೆ ಕಟ್ಟಿಸಿದ್ದ ಮನೆಯಾದರೂ ಅನಂತರ ಗಳ ಎಣಿಸುವ ಗೋಜಿಗೆ ಹೋಗಿರಲಿಲ್ಲವಂತೆ.

ಈಗ ಚುನಾವಣೆ ಘೋಷಣೆಯಾಗಿದೆ. ಸಮಾಜದ ಸೊತ್ತುಗಳನ್ನು   ವಶಪಡಿಸಿಕೊಳ್ಳುವ ಹೊಸ ಹೊಸ ಅಕ್ರಮ ಸಕ್ರಮ ಮಾರ್ಗಗಳ ಪಾಠ ರಾಜಕಾರಣಿಗಳು  ಹಳ್ಳಿಗರಿಗೆ ಮಾಡುತ್ತಾರೆ.  ವಿಷ ಬೀಜ  ಬಿತ್ತಿ  ಹುಲುಸಾದ  ಬೆಳೆ ತೆಗೆಯುತ್ತಾರೆ.   ಹೊಸ ತಲೆಮಾರಿನ     ಹಲವಾರು ಗಾಂಪರು ಹುಟ್ಟಿಕೊಳುತ್ತಾರೆ.