ದೀಪ ಆರಿಸಿ ಲಕ್ಷಾಂತರ ಮೇಣದ ಬತ್ತಿ ಉರಿಸಿದರೂ ವಾತಾವರಣ ಮಲೀನತೆ ಉಂಟಾಗುತ್ತದೆ. ನಮ್ಮಲ್ಲಿ ವಿದ್ಯುತ್ ತಯಾರಿ ಹಿಂದಿರುವ ಮಲೀನತೆ ಬಗೆಗೆ ಖಚಿತವಾದ ಮಾಹಿತಿ ಲಬ್ಯವಾಗದಿದ್ದರೂ ಮೇಣದಬತ್ತಿಯಿಂದ ಸಿಎಫ್ಎಲ್ ಬಳಕೆ ಉತ್ತಮ ಎನಿಸುತ್ತದೆ.
ಅತಿ ಹೆಚ್ಚು ವಿದ್ಯುತ್ ಬೇಡಿಕೆ ಇರುವ ಸಂಜೆ ಏಳರಿಂದ ಒಂಬತ್ತರ ವರೆಗೆ ದಿನವೂ ನನಗೆ ಜಾಲದಿಂದ ಸಂಪರ್ಕ ಕಡಿದುಕೊಳ್ಳುವ ಆಸೆ. ರಾತ್ರಿ ವಿದ್ಯುತ್ ಖಾತರಿ ಪೊರೈಕೆ ಇದ್ದರೆ ಖಂಡಿತ ಮಾಡುತ್ತೇನೆ. ತಾಂತ್ರಿಕ ವೈಫಲ್ಯಗಳಾದರೆ ಗ್ರಾಮೀಣ ಫೀಡರ್ ಗಳನ್ನು ರಾತ್ರಿ ಸರಿಪಡಿಸುವುದಿಲ್ಲ. ಮರುದಿನ ಬೆಳಗ್ಗೆ ಏಳಕ್ಕೆ ವಿದ್ಯುತ್ ಪೊರೈಕೆ. ಹಾಗಾಗಿ ಇರುವ ದಾಸ್ತಾನು ಹೆಚ್ಚಿನ ಬಾಗ ಖಾಲಿ ಮಾಡಿಕೊಳ್ಳುವುದು ಮೂರ್ಖತನ ಎನಿಸುತ್ತದೆ. ಹಾಗೆ ರಾತ್ರಿಯಿಡೀ ವಿದ್ಯುತ್ ಪೊರೈಕೆ ಇದ್ದರೆ ನನಗೆ ಶೇಖರಿಸಿಟ್ಟ ವಿದ್ಯುತ್ ವ್ಯರ್ಥವಾಯಿತಲ್ಲ ಎನ್ನುವ ಬಾವನೆ ದಿನವೂ ಬೆಳಗ್ಗೆ ಆವರಿಸಿಕೊಳ್ಳುತ್ತದೆ.
ಹಗಲು ನಮಗೆ ವಿದ್ಯುತ್ ಕೊರತೆ ಬಾದಿಸುವುದೇ ಇಲ್ಲ. ದಿನಕ್ಕೆ ಆರು ಘಂಟೆಯ ಕಡಿತ ನಮಗೆ ಯಾವುದೇ ಪರಿಣಾಮ ಬೀಳುವುದಿಲ್ಲ. ಈಗ ಇದನ್ನು ನಾನು ಕುಟ್ಟುತ್ತಿರುವುದೂ ಸೂರ್ಯದೇವನ ಕೃಪೆಯಿಂದ. ನಮಗೆ ವಿದ್ಯುತ್ ಮದ್ಯಾಹ್ನದ ನಂತರ.
ನಮ್ಮಲ್ಲಿ ಕೆಲವರು ಉಪವಾಸ ಮಾಡುತ್ತಾರೆ. ಅಂದು ಅನ್ನ ಊಟಮಾಡುವುದು ನಿಶಿದ್ದ. ಇತರ ನಿರ್ಬಂಧ ಇಲ್ಲದ ಕಾರಣ ಗೋದಿ ಇತ್ಯಾದಿಗಳಿಂದ ತಯಾರಿಸಿದ ತಿಂಡಿತಿನಿಸುಗಳನ್ನು ಹಣ್ಣು ಹಂಪಲುಗಳನ್ನು ಹೆಚ್ಚಾಗಿಯೇ ಬಕ್ಷಿಸುತ್ತಾರೆ. ದೀಪ ಆರಿಸುವ ಬಗೆಯೂ ಹೀಗಾದರೆ ಮೊಂಬತ್ತಿ ಉಪಯೋಗ ಹೆಚ್ಚಾದರೆ ಇದರಿಂದ ಯಾವುದೇ ಪ್ರಯೋಜನ ಇರುವುದಿಲ್ಲ.ಬರುವ ವರ್ಷ ಮೇಲ್ಕಾಣಿಸಿದ ಅಸ್ಟ್ರೇಲಿಯಾದ ಸಿಡ್ನಿ ಪಟ್ಟಣದಂತೆ ನಮ್ಮೂರ ಪಟ್ಟಣಗಳೂ ದೀಪವಾರಿಸಲಿ ಎಂದು ಹಾರೈಸೋಣ. 43 ಲಕ್ಷ ಜನಸಂಖ್ಯೆಯ ಈ ಪಟ್ಟಣದಲ್ಲಿ ಅರ್ಧಕ್ಕೂ ಹೆಚ್ಚು ಜನ ದೀಪವಾರಿಸಿದ್ದರಂತೆ. ಜನರಲ್ಲಿ ಅರಿವು ಮೂಡಿಸಲು ಈ ಆಚರಣೆ ಸಹಾಯಕ.
ಚಿತ್ರ ಕೃಪೆ : National Geographic Society
3 comments:
ಈ ವಿಷ್ಯ ವಿಜಯ ಕರ್ನಾಟಕದಲ್ಲಿತ್ತು.ಆಸ್ಟ್ರೇಲಿಯಾ ಸಿಡ್ನಿಯಲ್ಲಿನ ಅರ್ಥ್ ಅವರ್ ಎಂಬ ಸಂಘಟನೆ ಈ ಬಗ್ಗೆ-ಏರುತ್ತಿರುವ ಜಾಗತಿಕ ತಾಪಮಾನದ ಬಗ್ಗೆ ಮಾಡುವ ಕಾರ್ಯಕ್ರಮ ಇದಾಗಿದೆ.ಭಾರತದಲ್ಲೂ ಈ ಕಾರ್ಯಕ್ರಮದ ಬಗ್ಗೆ ಐಎನ್ಜಿ ವೈಶ್ಯ ಸಂಸ್ಥೆ ಭಾಗವಹಿಸಿದೆ.
ಈ ವಿಷ್ಯ ವಿಜಯ ಕರ್ನಾಟಕದಲ್ಲಿತ್ತು.ಆಸ್ಟ್ರೇಲಿಯಾ ಸಿಡ್ನಿಯಲ್ಲಿನ ಅರ್ಥ್ ಅವರ್ ಎಂಬ ಸಂಘಟನೆ ಈ ಬಗ್ಗೆ-ಏರುತ್ತಿರುವ ಜಾಗತಿಕ ತಾಪಮಾನದ ಬಗ್ಗೆ ಮಾಡುವ ಕಾರ್ಯಕ್ರಮ ಇದಾಗಿದೆ.ಭಾರತದಲ್ಲೂ ಈ ಕಾರ್ಯಕ್ರಮದ ಬಗ್ಗೆ ಐಎನ್ಜಿ ವೈಶ್ಯ ಸಂಸ್ಥೆ ಭಾಗವಹಿಸಿದೆ.
ಇದೊಂದು ಪ್ರಪಂಚದಾದ್ಯಂತ ಚದರಿ ಹೋದ ಸಹಚಿಂತಕರು ಕೈಜೋಡಿಸುವ ಪ್ರಯತ್ನ. ಜನರ ಸ್ಪಂದನ ಚೆನ್ನಾಗಿತ್ತು ಎನ್ನುತ್ತದೆ ಮಾದ್ಯಮ ವರದಿ. ಪ್ರತಿಕ್ರಿಯೆಗೆ ದನ್ಯವಾದ
Post a Comment