ಕಾಂಗ್ರೇಸ್ ಪಕ್ಷದ ದೋರಣೆ ಯಾವತ್ತೂ ವಿರೋದಾಬಾಸಗಳಿಂದ ಕೂಡಿರುತ್ತದೆ. ಕುಳಿತ ರೆಂಬೆಯನ್ನೇ ಕಡಿಯುವುದರಲ್ಲಿ ಅವರು ಚುರುಕು. ಗುಪ್ತ ಮತದಾನಕ್ಕೆ ಪೂರಕವಾಗಿ ಚುನಾವಣಾ ಆಯೋಗ ಕಾನೂನು ೪೯ ಓ ಪ್ರಕಾರ ನಕಾರಾತ್ಮಕ ಮತ ಚಲಾವಣೆಗೆ ಮತಯಂತ್ರದಲ್ಲಿಯೇ ಅವಕಾಶ ಮಾಡಿಕೊಡುವ ಪ್ರಸ್ತಾಪ ಹಾಕಿತ್ತು. ಕೈ ಮತ್ತು ಕಮಲ ಪಕ್ಷವೂ ಸೇರಿದಂತೆ ಎಲ್ಲ ಪಕ್ಷದವರೂ ಅದನ್ನು ವಿರೋದಿಸಿದರು. ಅದುದರಿಂದ ಗುಪ್ತ ಮತದಾನ ಎಂದರೆ ಜೋಕ್ ಎನ್ನುವಂತಾಗಿದೆ.
ತನ್ನ ಅಭ್ಯರ್ಥಿ ಇಲ್ಲವೆನ್ನುವ ನೆಲೆಯಲ್ಲಿ ೪೯ ಓ ಕ್ಕೆ ಸಾರ್ವಜನಿಕವಾಗಿ ಶರಣಾದ ಕಾಂಗ್ರೇಸ್ ಪಕ್ಷ ಸಾವಿರಾರು ಜನರಲ್ಲಿ ಗುಪ್ತತೆಗೆ ಲೋಪ ಉಂಟಾಗದಂತೆಯೇ ನಕಾರಾತ್ಮಕ ಮತ ಹಾಕಿಸಿತು. ಅದೇ ಕ್ಷೇತ್ರದಲ್ಲಿ ಸುಷ್ಮ ಸ್ವರಾಜ್ ಮತ ಚಲಾವಣೆ ಕೆಮರಾ ಎದುರಾಗಿದ್ದ ಕಾರಣ ಇದೊಂದು ಅಪೂರ್ವ ಘಟನೆ ಎಂದು ಪರಿಗಣಿಸಿ ತಕರಾರನ್ನು ಚುನಾವಣಾ ಆಯೋಗಕ್ಕೆ ಕೊಟ್ಟಿದೆ. ಇಂದಿನ ಕನ್ನಡ ಪ್ರಭ ಪತ್ರಿಕೆಯಲ್ಲಿ ಈ ಗುಪ್ತ ಮತದಾನದ ಸುದ್ದಿ ಓದಿದೆ.
ನಾನು ಈ ಸಲ ಮತಗಟ್ಟೆಯಿಂದಲೇ ದೂರವಿರಲೂ ಬಹುದು. ಪುತ್ತೂರು ವಿಧಾನ ಸಭಾ ಕ್ಷೇತ್ರದ ಒಂದನೇಯ ಮತಗಟ್ಟೆಯಲ್ಲಿ ನಾನೊಬ್ಬ ಮತದಾರ. ಕಳೆದ ಬಾರಿ ೪೯ ಓ ಪ್ರಕಾರ ನಿರಾಕರಣ ಮತ ಚಲಾವಣೆ ಮಾಡಿದ್ದೆ. ಆರು ಕಿಲೋಮೀಟರ್ ವಾಹನ ಓಡಿಸಿ ಒಂದು ಘಂಟೆ ಸಾಲಿನಲ್ಲಿ ನಿಂತು ಕೊನೆಗೆ ಅವರಿಗೆ ನಿರಾಕರಣ ಮತದ ಬಗೆಗೆ ಮನದಟ್ಟು ಮಾಡಿ ಸಹಿ ಹಾಕಿ ಬಂದೆ. ಅಲ್ಲಿ ಬೆಂಚಿನಲ್ಲಿ ಕೂತಿದ್ದ ಮರಿನಾಯಕರು ಇವನು ನಮ್ಮವನಲ್ಲ ಎಂದು ಕೆಂಗಣ್ಣು ಬೀರಿದರು. ಕೊನೆಗೆ ನೋಡಿದರೆ ಲೆಕ್ಕಾಚಾರ ಹೀಗಿದೆ.
ಅನೆ 15
ಕೈ 314
ಕಮಲ 598
ಸೈಕಲ್ 17
ಬಂಡಾಯದ ಕೈ 38
ತೆಂಗಿನ ಕಾಯಿ 82
ಒಟ್ಟು ಚಲಾವಣೆ 1064
ಹಾಗಾದರೆ ನನ್ನ ಮತ ಎಲ್ಲಿ ಹೋಯಿತು ? ಹೀಗೆ ಮತಗಟ್ಟೆಯಿಂದ ಕೊನೆಯ ಫಲಿತಾಂಶ ಘೋಷಣೆ ಮಟ್ಟದ ವರೆಗೆ ಎಲ್ಲೂ ನಿರಾಕರಣ ಮತಗಳು ಲೆಕ್ಕಕ್ಕೆ ಸಿಗಲಿಲ್ಲ.. ಮೊದಲು ಕುಲಗೆಟ್ಟ ಮತಗಳು ಎನ್ನುವ ಪಂಗಡವಿತ್ತು. ಈಗ ಅದಕ್ಕೆ ಅವಕಾಶ ಇರುವುದಿಲ್ಲ. ಪ್ರತಿಯೊಂದು ಮತವೂ ಅಮೂಲ್ಯ ಎನ್ನುವಾಗ ಇದರನ್ನು ಪ್ರತಿ ಹಂತದಲ್ಲೂ ಲೆಕ್ಕಕ್ಕೆ ತೆಗೆದು ಕೊಳ್ಳುವುದರ ಬದಲಿಗೆ ಇವುಗಳ ಅಸ್ತಿತ್ವವನ್ನೇ ನಿರಾಕರಿಸಿದಂತಾಗಿದೆ.
ಈ ಭಾರಿ ಕಮಲ ಪಕ್ಷದ ಅಬ್ಯರ್ಥಿ ನಾಗ್ಪುರದಿಂದ ಲಕೋಟೆಯಲ್ಲಿ ಬಂದವರು. ಕಾರ್ಯಕರ್ತರು ಕಳುಹಿಸಿದ ಪಟ್ಟಿಯಲ್ಲಿ ಇವರ ಹೆಸರೇ ಇರಲಿಲ್ಲವಂತೆ. ಕೈ ಪಕ್ಷದವರು ದೇಶಕ್ಕಿಂತ ಪಕ್ಷ ಮುಖ್ಯ ಎನ್ನುವ ನಿಲುವಿನಲ್ಲಿ ಬಾಂಕುಗಳನ್ನು ಖಾಲಿ ಮಾಡಿದವರು. ಶ್ರೀ ರಾಮ ಭಟ್ಟರು ಯೋಗ್ಯವರಾದರೂ ಗೆಲ್ಲುವ ಸಾದ್ಯತೆ ಇಲ್ಲವೇ ಇಲ್ಲ. ಅದುದರಿಂದ ನಾನು ಮತಗಟ್ಟೆಗೆ ಹೋದರೂ ೪೯ ಓ ಮಂತ್ರ ಜಪಿಸುತ್ತೇನೆ. ಹೋಗುವುದೇ ವ್ಯರ್ಥ ಅನ್ನುವ ಅನಿಸಿಕೆಯೂ ಉಂಟು. ಪ್ರಜಾವಾಣಿಯಲ್ಲಿರುವ ವ್ಯಂಗ ಚಿತ್ರ ಹೇಳೋದು ಸರಿ ಅನ್ನಿಸುತ್ತೆ.
Sunday, April 26, 2009
Subscribe to:
Post Comments (Atom)
No comments:
Post a Comment