Saturday, April 18, 2009

ಲೋನ್ ಮೇಳ ಪೂಜಾರಿ ಸಾಲ ಕೊಡಿಸ್ತೀನಿ ಅಂದಿದ್ದರು


ಈ ಸಲ ನಮ್ಮಲ್ಲಿ ಕೈ ಪಕ್ಷದ ಅಬ್ಯರ್ಥಿಯಾಗಿರುವ ಜನಾರ್ಧನ ಪೂಜಾರಿಯವರನ್ನು ನಾನು ಒಮ್ಮೆ ಬೇಟಿ ಮಾಡಿದ್ದೆ. ಅವರಾಗ ಕೇಂದ್ರ   ಸರಕಾರದಲ್ಲಿ ಮಂತ್ರಿಯಾಗಿದ್ದು ಸಾಲಮೇಳಗಳ ಅಬ್ಬರದ ಕಾಲ.   ಹೋದವರಿಗೆ  ಬಂದವರಿಗೆಲ್ಲ  ಕೈ ಚಾಚಿ ಸಾಲ   ವಿತರಣೆಯಾಗುತಿತ್ತು.

ನಾನು   ಸೈಕಲು ಪ್ರವಾಸದ ತಯಾರಿ ಜತೆಗೆ ವೀಸಾ ಬೇಟೆಯಲ್ಲಿ ನಿರತನಾಗಿದ್ದೆ. ಒಂದು ಪ್ರದೇಶದ   ಮೊದಲ ವೀಸಾ ಪಡಕೊಳ್ಳುವುದು ಬಹಳ ಕಷ್ಟ. ನಂತರ  ಸುತ್ತುಮುತ್ತಲಿನ    ದೇಶಗಳ ಅರ್ಜಿಯೊಂದಿಗೆ ಅವರು ಕೊಟ್ಟಿದ್ದಾರೆ ನೀವೂ ಕೊಡಿ ಎನ್ನಬಹುದು. ಹಾಗೆ ಮಂತ್ರಿಗಳ ಶಿಫಾರಸ್ಸು ಪ್ರಥಮ   ವೀಸಾ ಪಡಕೊಳ್ಳಲು ಸಹಾಯವಾಗ ಬಹುದೆಂದು ನನಗಾಸೆ.

ಕಾಂಗ್ರೇಸು ಕಾರ್ಯಕರ್ತ ಗೆಳೆಯ ಪದ್ಮನಾಭ ರೈ ಅವರಲ್ಲಿ ನನ್ನ ಸಮಸ್ಯೆ ಹೇಳಿಕೊಂಡೆ. ಅವರು ಮರು ಮಾತಿಲ್ಲದೆ ಕರೆದೊಯ್ದರು ಪೂಜಾರಿಯವರ ಸನ್ನಿದಾನಕ್ಕೆ.

ಮಂಗಳೂರ ಸರ್ಕೀಟ್ ಹೌಸಿನಲ್ಲಿ ನಡೆಯುತ್ತಿದ್ದ ಪೂಜಾರಿಯವರ ಒಡ್ಡೋಲಗದಲ್ಲಿ ಸಾಲಾಗಿ ವಿವಿದ ಬಾಂಕುಗಳ ಹಿರಿಯ ಅಧಿಕಾರಿಗಳು ಕೂತಿದ್ದರು. ಮಂತ್ರಿಗಳ ಬೇಟಿಗೆ ಅಲ್ಲಿಗೆ ಹೋದ ಹೆಚ್ಚಿನವರು ಬಾಂಕು ಸಾಲ ಶಿಫಾರಸ್ಸಿಗಾಗಿ ಬಂದವರೆಂದು ಪ್ರತ್ಯೇಕ ಹೇಳಬೇಕಾಗಿಲ್ಲವಲ್ಲ. ಶ್ರೀ ಪೂಜಾರಿಯವರು ನನ್ನ ನಿವೇದನೆ  ಎರಡು ನಿಮಿಷ ಅಲಿಸಿದರು. ನಂತರ ಇದೆಲ್ಲ ದಂಡ. ಒಂದು ಒಳ್ಳೆ project ತಗೊಂಡು ಬಾ ಹತ್ತು ಲಕ್ಷ ಸಾಲ  ಕೊಡಿಸ್ತೀನಿ ಎಂದು ನನ್ನ ಬೀಳ್ಕೊಟ್ಟರು. ನನ್ನ ಆಸೆಗೆ ತಣ್ಣೀರು ಎರಚಿದಂತಾದರೂ ಅವರ ಕಾಳಜಿ ಕುಶಿಯಾಯಿತು.

ಸದಾ ರಾಜಕಾರಣ ಅಲೋಚಿಸುವ ಪೂಜಾರಿಯವರು  ನನ್ನ ಪ್ರವಾಸಕ್ಕೆ  ಬೆಂಬಲ  ಸೂಚಿಸಲಿಲ್ಲ.

ಚಿತ್ರ ಕೃಪೆ :ಶ್ರಿ ಹರೀಶ್ಚಂದ್ರ ಶೆಟ್ಟಿ

1 comment:

NATESH said...

ಚೆನ್ನಾಗಿದೆ..ದೇವರು ಕೊಟ್ಟರೂ..!