Saturday, April 25, 2009

ಅಡ್ವಾಣಿಯ ಬಿಲಿಯಕ್ಕೆ ಎಷ್ಟು ಸೊನ್ನೆಗಳು ?

ಈಗ ದಿನ ಬೆಳಗಾದರೆ ಪತ್ರಿಕೆಯಲ್ಲಿ ಬಿಲಿಯಗಟ್ಟಲೆ ಡಾಲರ್ ಸ್ವಿಸ್ ಬಾಂಕಿನಿಂದ ತರುವ ವಿಚಾರ ಕಾಣುವುದು. ಕಮಲ ಪಕ್ಷದ ಅಡ್ವಾಣಿ   ಪ್ರದಾನಿಯಾದರೆ ಹಣ ತರಲು ಮರುದಿನವೇ ವಿಮಾನ ಹತ್ತುತ್ತಾರೆ. ಮುಂದೊಂದು ದಿನ ಕೈ ಪಕ್ಷದ ವತಿಯಿಂದ ಪ್ರದಾನಿ ಆಗಲಿರುವ ರಾಹುಲರೂ ಈಗ ಅಡ್ವಾನಿ ಜತೆ ಈ ಸ್ವಿಸ್ ಹಣದ ಬಗ್ಗೆ ಪ್ರತಿಕ್ರಿಯಿಸುತ್ತಿದಾರೆ. ನನಗಂತೂ ಬಿಲಿಯಕ್ಕೆಷ್ಟು ಸೊನ್ನೆ ಎನ್ನುವುದು ಇತ್ತೀಚಿನ ವರೆಗೂ ಗೊತ್ತಿರಲಿಲ್ಲ. ಜತೆಗೊಂದು ಗೊಂದಲ.


ಒಮ್ಮೆ ಒಬ್ಬ ಅಮೇರಿಕದ ಬಹು ದೊಡ್ಡ ಶ್ರೀಮಂತ ಸ್ವಿಸ್ ಬಾಂಕಿಗೆ ಹೋಗಿ ಒಂದು ಬಿಲಿಯ ಸ್ವಿಸ್ ಫ್ರಾಂಕ್ ಕೊಡಿ ಎಂದನಂತೆ. ದಾಖಲೆಗಳ ಪರಿಶೀಲಿಸಿ ನಿಮ್ಮ ಖಾತೆಯಲ್ಲಿ ಅಷ್ಟು ಹಣವಿಲ್ಲ, ಕ್ಷಮಿಸಿ ಎಂದು ಕಾರಕೂನ ಹೇಳಲು ಅದು ಹೇಗೆ ಸಾದ್ಯ ಕೆಲವು ಬಿಲಿಯ ಉಂಟೆಂದು ನನ್ನ ಖಾತೆ ಪುಸ್ತಕ ಹೇಳುತ್ತದೆ ಎಂದನಂತೆ. ಇಬ್ಬರೂ ಹೇಳಿದ್ದು ಸರಿ. ಕಾರಣ ಈ ಬರಹದ ಕೊನೆಯಲ್ಲಿದೆ.

1400 ಬಿಲಿಯ ಡಾಲರ್ ಹಣ ಸ್ವಿಸ್ ಬಾಂಕಿನಲ್ಲಿರುವ ಕಾರಣ ನಾವು ಇನ್ನು    ಅಡ್ವಾಣಿಯವರ ರಾಮ ರಾಜ್ಯದಲ್ಲಿ ಹೊಸ ತೇರಿಗೆ ಕಟ್ಟಬೇಕಾಗಿಯೇ ಇರುವುದಿಲ್ಲ. 40 ವರ್ಷ ಸರಕಾರ ನಡೆಸುವಷ್ಟು ಹಣ ಅಲ್ಲಿ ಕೊಳೆಯುತ್ತಿದೆಯಂತೆ ಎನ್ನುವಂತಹ ರಂಗು ರಂಗಿನ ಮಾತು ಕೇಳುತ್ತೇವೆ. ಒಂದು ಅವಧಿ ಪೂರ್ತಿ ಉಪ ಪ್ರದಾನಿಯಾಗಿದ್ದ ಅಡ್ವಾಣಿಗೆ ಅರುವತ್ತು ನಾಲ್ಕು ಕೋಟಿ ಬೋಫೋರ್ಸ್ ಲಂಚದ ಹಣದ ಜಾಡು ಹಿಡಿಯುವುದು ಸಾದ್ಯವಾಗಲಿಲ್ಲ ಎನ್ನುವ ವಿಚಾರ ಈಗ ನೆನಪಿಸಿಕೊಳ್ಳಲು ಈಗ ಸಕಾಲ.

ಗೆದ್ದರೂ ಚುನಾವಣೆ ಮುಗಿದ ನಂತರ ಅಡ್ವಾಣಿಗೆ ಆಶ್ವಾಸನೆ ಮರೆಯುವ ಸಾದ್ಯತೆ ಹೆಚ್ಚು.ನೆನಪಾದರೂ ಕೈಗೂಡುವುದು ಸಂಶಯ. ಅದುದರಿಂದ ಚುನಾವಣೆಯ ಅನುಕೂಲಕ್ಕಾಗಿ ಜನರನ್ನು ಉದ್ರೇಕಿಸಲು ಗೊಂದಲಕ್ಕೀಡು ಮಾಡಲು ಈ ವಿಚಾರ ಎತ್ತಬಾರದಿತ್ತು ಎಂದು ನನ್ನ ಅನಿಸಿಕೆ.  ಇವರು  ಹಣ  ತರಲು ಹೊರಟರೆ  ಅಲ್ಲಿನ  ಬಾಂಕ್  ಬಾಗಿಲು ಹಾಕುತ್ತದೆ  ಎನ್ನುತ್ತಾರೆ  ವ್ಯಂಗಚಿತ್ರಕಾರ  ಶ್ರಿ  ಸತೀಷ್  ಆಚಾರ್ಯ


ಅಂದ ಹಾಗೆ ಕಾಂಗ್ರೇಸಿನ ಯುವರಾಜ ರಾಹುಲ್ ಅಮೇರಿಕದ ಬೊಸ್ಟೊನ್ ವಿಮಾನ ನಿಲ್ದಾಣದಲ್ಲಿ ಸೆಪ್ಟೆಂಬರ್ 2001 ರಲ್ಲಿ ಎರಡು ಲಕ್ಷ ಡಾಲರ್ ನಗದು ಹಣ ತುಂಬಿದ ಸೂಟುಕೇಸು ಜತೆ ಸಿಕ್ಕಬಿದ್ದ ಬಗೆಗೆ ವದಂತಿ ಇರುತ್ತದೆ. ವರ್ಲ್ಡ್ ಟ್ರೇಡ್ ಸೆಂಟರಿಗೆ ವಿಮಾನ ಡಿಕ್ಕಿ ಹೊಡೆದ ನಂತರದ ಅಮೇರಿಕನರು ಕಠೀಣ ತನಿಖೆ ಕೈಗೊಳ್ಳುತ್ತಿದ್ದ ಕಾಲ. ತೆರೆಮರೆಯ ಕೈವಾಡದಿಂದ ಬಿಟ್ಟರೋ ಸುದ್ದಿ ಸುಳ್ಳೋ ಅನ್ನುವುದು ಅಸ್ಪಷ್ಟ.

ಗುಟ್ಟಾಗಿ ಹಣ ಇಡಲು ಸ್ವಿಸ್ ಬಾಂಕ್ ಆಗಬೇಕೆಂದು ಇಲ್ಲ. ಪ್ರಪಂಚದ ಹಲವು ಪುಟ್ಟ ದೇಶಗಳು ಈ ಸೌಕರ್ಯ ಒದಗಿಸುತ್ತದೆ. ಕಾಂಗ್ರೇಸಿನ ಯಜಮಾನತಿ ಸೋನಿಯಾ ಇಟಲಿಯ ವಟಿಕನ್ ಬಾಂಕಿನ ಉಪಯೋಗಿಸುವ ಸಾದ್ಯತೆಗಳೂ ದಾರಾಳ. ರಾಜೀವನ ಕಾಲದಿಂದಲೂ ಕುಟುಂಬಕ್ಕೆ ವಟಿಕನ್ ಹತ್ತಿರ. ಹಣದ ಬಣ್ಣವನ್ನು ನೋಡದ ಈ ಬಾಂಕ್ ಹಲವರು ದುಷ್ಟರ ಹಣ ಇಟ್ಟುಕೊಂಡ ದಾಖಲೆಗಳಿವೆ. ವಟಿಕನ್ ರಾಯಬಾರಿ ಕಛೇರಿಯ ಅಂಗವಾದ ಈ ಬಾಂಕಿನ ಟಪಾಲು ಸಾಗಾಟದಲ್ಲಿ ಬಾರತ ಹಾಗೂ ಇಟಲಿಯ ತನಿಖೆಗೆ ಒಳಪಡುವುದಿಲ್ಲ.

ಬಿಲಿಯ ಅಂದರೆ ಎಷ್ಟು ಎನ್ನುವ ಪ್ರಶ್ನೆ ಯಾರ ಜತೆ ಸಂಬಾಷಣೆ ಅನ್ನುವುದರ ಅವಲಂಬಿಸುತ್ತದೆ. . ಅಮೇರಿಕನರನ್ನು ಕೇಳಿದರೆ ಸಾವಿರ ಮಿಲಿಯ ಅಥವಾ ಒಂದರ ಹಿಂದೆ ಒಂಬತ್ತು ಸೊನ್ನೆಗಳು. ಆದರೆ ಯುರೋಪಿನವರ ಪ್ರಕಾರ ಬಿಲಿಯ ಎಂದರೆ ಒಂದರನ್ನು ಹನ್ನೆರಡು ಸೊನ್ನೆಗಳು ಹಿಂಬಾಲಿಸುತ್ತವೆ.

ಅಮೇರಿಕದ ಶ್ರೀಮಂತ ಪಡಕೊಳ್ಳಲು ಹೊರಟ ಬಿಲಿಯ ಎಂದರೆ 1,000,000,000 ಸ್ವಿಸ್ ಫ್ರಾಂಕ್ ಗಳು. ಆದರೆ ಯುರೋಪಿನ ಬಿಲಿಯ ಎಂದರೆ ಅಮೇರಿಕದವರು ಟ್ರಿಲಿಯನ್ ಎನ್ನುವ 1,000,000,000,000. ಮೂರು ಸೊನ್ನೆಗಳು ಜಾಸ್ತಿ. ಈಗ ರಾಜಕಾರಣಿಗಳು ಅನುಕೂಲಕ್ಕೆ ತಕ್ಕಂತೆ ಈ ಬಿಲಿಯ ಶಬ್ದ ಉಪಯೋಗಿಸುತ್ತಿದ್ದಾರೆ. ಸೊನ್ನೆಗಳ ಸಂಖ್ಯೆ ಯಾರಿಗೂ ಗೊತ್ತಿಲ್ಲ.



http://online.wsj.com/public/article/SB114364857897711253.html?mod=2_1125_1

1 comment:

rangamarakini said...

really wittting!
marakini