ಇಂದು ಜಾಲದಲ್ಲಿ ಒಂದು ಆಫ್ರಿಕದ ಹುಡುಗ ಸೈಕಲ್ ಡೈನೆಮೊ ಕೇಂದ್ರಿತ ವಿದ್ಯುತ್ ಗಾಳಿ ಯಂತ್ರ ಮಾಡಿದ ವಿವರಗಳು ಕಣ್ಣಿಗೆ ಬಿತ್ತು. ನನ್ನ ಸೈಕಲು ಪ್ರವಾಸದ ಸಮಯ ಇಂತಹ ಡೈನೆಮೊ ನನಗೆ ರಸ್ತೆ ಕಾಣಲು ಮಾತ್ರವಲ್ಲ ಡೇರೆಯೊಳಗೆ ಕೂಡ ಅಗತ್ಯವಾದ ಬೆಳಕನ್ನು ಪೊರೈಸುತ್ತಿತ್ತು. ಆದರೆ ದೀರ್ಘವಾದ ಹಗಲಿನಿಂದಾಗಿ ನಾನು ರಾತ್ರಿ ಸೈಕಲು ಸವಾರಿ ಮಾಡಿದ್ದು ಕಡಿಮೆ.
ಪ್ರವಾಸದ ಸಮಯ ನನ್ನ ಹತ್ತಿರ ಟಾರ್ಚ್ ಇರಲಿಲ್ಲ. ಇಂತಹ ಸರಳ ಸಾಮುಗ್ರಿಗಳ ಅನಾವಶ್ಯಕ ಹೊರುವುದರ ಬದಲು ಅಗತ್ಯ ಬಿದ್ದಾಗ ಕೊಂಡುಕೊಳ್ಳುವುದು ನನ್ನ ದೋರಣೆಯಾಗಿತ್ತು. ಮೊದಲು ನಾಲ್ಕು ತಿಂಗಳು ನಾನು ಒಂಟಿಯಾಗಿ ಹೊರಗೆ ಮಲಗಿರಲಿಲ್ಲ. ಯುರೋಪಿನಲ್ಲಿ ಮೊದಲು ಚಳಿ ಜೋರಾಗಿತ್ತು. ಮೆ ತಿಂಗಳಲ್ಲಿ ಒಂಟಿಯಾಗಿ ಆಕಾಶದಡಿ ಡೇರೆ ಬಿಡಿಸಿ ಮಲಗಲು ಪ್ರಾರಂಬಿಸಿದೆ. ಅನಂತರ ದೊಡ್ಡ ಪಟ್ಟಣಗಳ ಹೊರತು ಪಡಿಸಿದರೆ ಎಲ್ಲೂ ತಂಗುವುದಕ್ಕೆ ಹಣ ಖರ್ಚು ಮಾಡಲಿಲ್ಲ.
ರೋಮಿನಲ್ಲಿ ಕೊಡುಗೆಯಾಗಿ ಸಿಕ್ಕ ಸೈಕಲಿನಲ್ಲಿ ಮುಂದಿನ ಚಕ್ರಕ್ಕೆ ಡೈನೆಮೊ ಅಳವಡಿಸಲಾಗಿತ್ತು. ಡೇರೆಯ ಬಾಗಿಲಿನ ಬಳಿಯಲ್ಲಿ ಸೈಕಲನ್ನು ಅಡಿಮೇಲಾಗಿ ಇಟ್ಟು ಚಕ್ರ ನನ್ನ ಕೈಗೆ ಸುಲಭವಾಗಿ ಸಿಗುವಂತೆ ಮಾಡುತ್ತಿದ್ದೆ. ಏಳು ಅಡಿ ಉದ್ದ ಮತ್ತು ನಾಲ್ಕು ಅಡಿ ಅಗಲದ ಡೇರೆಯಲ್ಲಿ ಎಲ್ಲ ಸಾಮಾನುಗಳೂ ವ್ಯವಸ್ಥಿತವಾಗಿ ಇಡುತ್ತಿದ್ದು ಕಣ್ಣು ಮುಚ್ಚಿದರೂ ಸಿಗುವಂತಿತ್ತು. ಅಕಸ್ಮಾತ್ ಬೆಳಕು ಬೇಕಾದರೆ ಹೊರಗೆ ಕೈ ಹಾಕಿ ಚಕ್ರ ತಿರುಗಿಸುತ್ತಿದ್ದೆ. ನಾಲ್ಕು ಕ್ಷಣ ಸಿಗುವ ಬೆಳಕು ನನಗೆ ಸಾಕಾಗುತ್ತಿತ್ತು.
ಐದು ವರ್ಷ ಹಿಂದೆ ಮಲಾವಿ ದೇಶದ ಬಡ ಹುಡುಗನೊಬ್ಬ ಕೈಗೆ ಸಿಕ್ಕ ಗುಜರಿವಸ್ತುಗಳ ಉಪಯೋಗಿಸಿ ಒಂದು ಡೈನೆಮೊ ಮಾಡಿದ್ದು ಮತ್ತು ಅನಂತರ ಅವನಿಗೆ ವಿದ್ಯಾಬ್ಯಾಸ ಸಹಾಯ ದೊರಕಿದ್ದೂ ಮೊದಲು ಓದಿದ್ದೆ. ಈಗ ಸೂಕ್ಷ್ಮವಾಗಿ ಚಿತ್ರ ನೋಡುವಾಗ ಅವನ ಡೈನೆಮೊ ಮಾದರಿಯಲ್ಲಿಯೇ ನಾನು ಬಳಸಿದ್ದು ಗಮನಕ್ಕೆ ಬಂದು ಈ ಬಗೆಗೆ ಬರೆಯಲು ಕೂತೆ. ಗಾಳಿ ಯಂತ್ರ ಎಂದರೆ ಬೆಳಕು ಮಾತ್ರವಲ್ಲ ಸ್ವಾತಂತ್ರ ಎನ್ನುವ ಅವನ ಕಥೆ ಚೆನ್ನಾಗಿದೆ.
Sunday, October 04, 2009
Subscribe to:
Post Comments (Atom)
No comments:
Post a Comment