Thursday, October 15, 2009

ಕುಲಾಂತರಿ ಬದನೆಗೆ ನಾವು ಪ್ರಯೋಗ ಪಶುಗಳು.



ಕುಲಾಂತರ ಬದನೆ ತಳಿಯನ್ನು ಭಾರತದಲ್ಲಿ ಬೆಳೆಸಿ ಮಾರುಕಟ್ಟೆಗೆ ಬಿಡುಗಡೆ ಮಾಡಲು ಸಂಬಂದ ಪಟ್ಟ ಸಮಿತಿ ಒಪ್ಪಿದೆ ಎಂದು ಇಂದಿನ ಪತ್ರಿಕೆಯಲ್ಲಿ ಕಂಡು ಆಘಾತವಾಯಿತು. ಹಲವಾರು ವರ್ಷಗಳಿಂದ ನಡೆಯುತ್ತಿರುವ ಆಂದೋಲನಕ್ಕೆ ಇದೊಂದು ಹಿನ್ನೆಡೆ. ಆದರೆ ಈ ಸಮಿತಿಯಿಂದ ನಾವು ನ್ಯಾಯಬದ್ದ ವರದಿ ನಿರೀಕ್ಷಿಸುವಂತಿರಲಿಲ್ಲ.

ಕುಲಾಂತರಿ ತಂತ್ರಜ್ನಾನ ಒಪ್ಪಿಗೆ ಸಮಿತಿಯ ಮೂರು ಜನ ಸದಸ್ಯರ ಹಿನ್ನೆಲೆ ಸಂಶಯಾಸ್ಪದ.
ಇದು ಪೋಲಿಸು ಇಲಾಖೆಯ ಸಲಹಾ ಸಮಿತಿಗೆ ದಾವೂದ್ ಇಬ್ರಾಯಿಯನ್ನು ನೇಮಿಸಿದಂತಾಗಿದೆ. ಇಬ್ಬರು ಮೊದಲು ಮಹಿಕೊ ಬೀಜ ಕಂಪೇನಿ ಕೃಪಾಪೋಷಿತ ಸಂಶೋದನೆಯಲ್ಲಿ ನಿರತರಾಗಿದ್ದರು. ಮೂರನೆಯವರು ಸ್ವತಹ ಕುಲಾಂತರಿ ತಂತ್ರಜ್ನಾನದಲ್ಲಿ ನಿರತರಾಗಿರುವವರು.

ನಮ್ಮ ದೇಶದಲ್ಲಿ ಕಡಿಮೆ ಉತ್ಪತ್ತಿಗೆ ಕಾರಣ ಕಳಪೆ ಗುಣಮಟ್ಟದ ಕೀಟನಾಶಕವೆಂದು ಕೆಲವು ನಮ್ಮ ಹಿತಚಿಂತಕ ಕಂಪೇನಿಗಳು ಬೆಳೆಗೆ ಕೀಟಗಳ ನಿರೋದಿಸುವ ಶಕ್ತಿ ಇದ್ದರೆ ಉತ್ತಮವೆಂದು ಡಂಗುರ ಸಾರುತ್ತಿವೆ. ಕೀಟಗಳು ತಿನ್ನೋದೆ ಇಲ್ಲವಾದ ಕಾರಣ ಬೆಳೆ ಕೊಯಿಲಾಗುವಾಗ ಹೆಚ್ಚು ಸಿಗುತ್ತದೆ. ಬಿತ್ತನೆ ಬೀಜ ಮಾತ್ರ ಪ್ರತಿ ಸಲ ಖರೀದಿಸಬೇಕು ಹಾಗೂ ಸ್ವಲ್ಪ ದುಬಾರಿ. ಇದು ದೊಡ್ಡ ವಿಷಯವೇ ಅಲ್ಲ ಎನ್ನುತ್ತಾರೆ ಬೀಜ ಕಂಪೇನಿಯ ಪಾಠ ಉರುಹೊಡೆದ ನಮ್ಮ ಅಧಿಕಾರಿಗಳು ರಾಜಕಾರಣಿಗಳು. .

ಸರಿ ಮಾರಾಯರೇ, ಅವರು ಏನು ಬೇಕಾದರು ಮಾಡಿಕೊಳ್ಳಲಿ ಎಂದು ನಾವು ಸುಮ್ಮನಿರುವಂತಿಲ್ಲ. ಇದರಲ್ಲಿ ಸಾಮಾನ್ಯ ಬದನೆಗಿಂತ ಶೇ. ೧೫ ರಷ್ಟು ಕಡಿಮೆ ಕಾಲೊರಿ ಅಂತೆ. ಹಾಗಾದರೆ ಹೆಚ್ಚು ತಿಂದರಾಯಿತು ಬಿಡಿ. ಈ ಕುಲಾಂತರಿ ಆಹಾರ ಪದಾರ್ಥಗಳಿಗೆ ಗುರುತು ಚೀಟಿ ಅಂಟಿಸುವ ಯೋಜನೆ ಇಲ್ಲ. ನಮ್ಮ ಊಟದ ಬಟ್ಟಲಿನಲ್ಲಿ ಕುಲಾಂತರಿ ಆಹಾರ ಸಾಮುಗ್ರಿ ತಲಪುವಾಗಲೂ ನಮಗೆ ತಿಳಿಯಲು ಅಸಾದ್ಯ. ಅದುದರಿಂದ ಇದನ್ನು ಎಲ್ಲರೂ ವಿರೋದಿಸುವ ಅಗತ್ಯ ಇರುತ್ತದೆ. ಪ್ರಪಂಚದಲ್ಲಿ ಇಂದು ಕುಲಾಂತರಿ ಅಹಾರ ಪದಾರ್ಥ ಚಲಾವಣೆ ಇರುವುದು ಅಮೇರಿಕದ ಬಾಗವಾದ ಹವಾಯಿ ದ್ವೀಪದಲ್ಲಿ ಪಪ್ಪಾಯಿ ಹಣ್ಣು ಮಾತ್ರ.

 ಬದನೆಗೆ ಬಾರತವೇ ತವರು. ಬದನೆಯ ಮಟ್ಟಿಗೆ ಪ್ರಪಂಚದಲ್ಲಿ ಎಲ್ಲೂ ಇಷ್ಟು ವಿವಿದತೆ ಇರುವುದಿಲ್ಲ. ಈಗ ಇದನ್ನು ಸರಕಾರ ಅನುಮೋದಿಸಿದರೆ ಪ್ರಪಂಚದಲ್ಲಿಯೇ ಪ್ರಥಮವಾಗಿ ತವರಿನಲ್ಲಿಯೇ ಒಪ್ಪಿದ ಕುಲಾಂತರಿ ಆಹಾರ ಪದಾರ್ಥವಾಗುತ್ತದೆ ಮತ್ತು ಈ ವಿವಿದತೆಯನ್ನು ಅಪಾಯಕ್ಕೆ ಒಡ್ಡಿದಂತಾಗುತ್ತದೆ. . ಚೀನದವರು ಸೊಯಾ ಅವರೆ ಮತ್ತು ಪೆರು ದೇಶದವರು ಬಟಾಟೆಯಲ್ಲಿ ಈ ದೊಂಬರಾಟ ಒಪ್ಪಿಲ್ಲ ಎನ್ನುವುದನ್ನು ನಾವು ಈಗ ನೆನಪಿಸಿಕೊಳ್ಳಬೇಕು.

ಹತ್ತಿಯಂತಹ ಮನುಷ್ಯ ತಿನ್ನದ ಬೆಳೆಯು ಕುಲಾಂತರಿ ಆದಾಗ ಅಲ್ಲರ್ಜಿ ಮತ್ತು ಪ್ರಾಣಿಗಳ ಸಾವಿಗೆ ಕಾರಣವಾಗಬಹುದಾದರೆ ಬದನೆಯಂತಹ ನಿತ್ಯ ಬಳಕೆ ಆಹಾರ ಪದಾರ್ಥಕ್ಕೆ ಇದನ್ನು ಬೆರೆಸಿದರೆ ಆಗುವ ಅನಾಹುತ ಊಹಿಸಲು ಅಸಾದ್ಯ.

ನಾನು ಪ್ರಯೋಗಾಲಯದ ಇಲಿ ಅಲ್ಲ ಎಂದು ಸಾವಿರಾರು ಜನ ಈ ಇ ಆಂದೋಲನದಲ್ಲಿ ಪಾಲ್ಗೊಂಡಿದ್ದರು. ಸಾವಿರಾರು ಇ ಪತ್ರಗಳನ್ನು ದೊಡ್ಡ ಸಿಂಗರಿಗೆ ಕಳುಹಿಸಲಾಗಿತ್ತು. ಅನಂತರ ನಿಮ್ಮ ಕಾಳಜಿ ಅರ್ಥವಾಗಿದೆ ಎಂದು ಕೇಂದ್ರ ಸರಕಾರದ ಪತ್ರವೂ ನನಗೆ ಬಂದಿತ್ತು.

ಈಗ ತಜ್ನರ ವರದಿ ಕೇಂದ್ರ ಸರಕಾರದ ಕೈ ಸೇರಿದೆ. ಇನ್ನು ಬಾಕಿ ಇರುವುದು ರಾಜಕಾರಣಿಗಳ ಹಾಗೂ ಅಧಿಕಾರಿಗಳ ಮುದ್ರೆ ಮಾತ್ರ ಬಾಕಿ. ಗಾಬರಿ ಏನೂ ಬೇಡ. ನಾನು ಸರಿಯಾಗಿ ವ್ಯವಸ್ಥೆ ಮಾಡುತ್ತೇನೆ. ಇನ್ನೂ ನನ್ನ ಕೈಯಲ್ಲೇ ಇದೆ ಎನ್ನುತ್ತಾರೆ ಕೈ ಪಕ್ಷದ ಮಂತ್ರಿ ಜೈರಾಮ ರಮೇಶ. ನಾಲ್ಕು ತಿಂಗಳು ಹಿಂದೆ ತಾನು ಕುಲಾಂತರಿ ಅಹಾರದ ವಿರೋದ ಎಂದು ಹೇಳಿದ ಮಹಾನ್ ಸಾಹಸಿ ಜೈರಾಮರ ಕೈಯಲ್ಲಿರುವುದೇ ನನಗೆ ಗಾಬರಿಗೆ ಕಾರಣ.


ಮಾಜಿ ರಕ್ಷಣಾ ಮಂತ್ರಿ ಜಾರ್ಜ್ ಸಿಯಾಚನ್ ಗಡಿ ಪ್ರದೇಶಕ್ಕೆ ಹೋದದ್ದೂ ಇವರ ಸಾಹಸದ ಎದುರು ಬರೇ ಸಪ್ಪೆ. ನಮ್ಮ ವೀರ ಧೀರ ಪರಿಸರ ಮಂತ್ರಿ ಜೈರಾಮ್ ರಮೇಶರು ಬೋಪಾಲಕ್ಕೆ ಹೋದದ್ದು ಮಾತ್ರವಲ್ಲ ಪಾಳು ಬಿದ್ದಿರುವ ಕೀಟನಾಶಕ ಕಾರ್ಖಾನೆಯಲ್ಲಿ ರಾಶಿಬಿದ್ದ ಕಲ್ಮಶವನ್ನೂ ಮುಟ್ಟಿದರು. ಸುತ್ತುಮುತ್ತೆಲ್ಲ ಇಷ್ಟು ಹಸಿರಾಗಿರುವಾಗ ಬೂಮಿ ವಿಷಮಯವಾಗಿರಲು ಸಾದ್ಯವೇ ? ಎಂದು ಪ್ರಶ್ನಿಸಿದರು. ನಾನು ಹೋಗಿ ಮುಟ್ಟಿ ನೋಡಿದೆ, ಆದರೂ ಕೆಮ್ಮುತ್ತಿಲ್ಲ ಆರೋಗ್ಯವಾಗಿ ಹಾಗೂ ಜೀವಂತವಾಗಿದ್ದೇನೆ. ಅದುದರಿಂದ ಈ ಇಪ್ಪತ್ತೈದು ವರ್ಷ ಹಿಂದಿನ ದುರಂತ ಮರೆತು ನಾವು ಮುಂದಕ್ಕೆ ಸಾಗಬೇಕು ಎಂದು ಅಪ್ಪಣೆ ಕೊಡಿಸಿದರು. ಹಾಗೆಯೇ ಕುಲಾಂತರಿ ಬದನೆಯಲ್ಲಿ ಮಾಡಿದ ಪಲ್ಯ ತಿಂದರೂ ನಾನು ಬದುಕಿದ್ದೇನೆ ಎನ್ನಬಹುದು ಈ ಮಹಾನುಭಾವರು …….. ರಾಮ್, ರಾಮ್

ಆದರೂ ನಮ್ಮ ಪ್ರಯತ್ನ ನಾವು ಮಾಡೋಣ. ಪರಿಸರ ಮಂತ್ರಿ ಜೈರಾಮರಿಗೆ ಒಂದು ಪತ್ರ ಬರೆಯಿರಿ. ವಿಳಾಸ ಹಾಗೂ ಸಲಹೆಗೆ ಈ ಕೊಂಡಿಯನ್ನು ಕ್ಲಿಕ್ಕಿಸ.

ಬಾರತಕ್ಕೆ ಈ ಕುಲಾಂತರಿ ಬೆಳೆಗಳು ಬೇಕೊ ಅನ್ನುವ ವಿಚಾರದಲ್ಲಿ ಹೆಚ್ಚಿನ ಮಾಹಿತಿಗೆ  

4 comments:

Chamaraj Savadi said...

ಕುಲಾಂತರಿ ತಳಿಗಳ ಸಂಶೋಧನೆಗೆ ಮುಖ್ಯ ಕಾರಣ ಅವಶ್ಯಕತೆಗಿಂತ ಹಣ ಹಾಗೂ ಮನ್ನಣೆ ಗಳಿಸುವುದೇ ಮುಖ್ಯ ಕಾರಣ. ಬೀಜ/ಗೊಬ್ಬರ/ಕೀಟನಾಶಕ ಕಂಪನಿಗಳು ತಮ್ಮ ಉತ್ಪಾದನೆ ಹೆಚ್ಚಿಸಿಕೊಳ್ಳಲು ಆಗಾಗ ಇಂಥ ಘಾತಕ ವಿಚಾರಗಳನ್ನು ವಿಶ್ವವಿದ್ಯಾಲಯಗಳ ತಜ್ಞರ ತಲೆಗೆ ತುರುಕುತ್ತಾರೆ. ಸಾಕಷ್ಟು ಹಣವೂ ಬಿಡುಗಡೆಯಾಗುತ್ತದೆ. ವಿಜ್ಞಾನಿಗಳಿಗೆ ಸಂಶೋಧನೆ ನಡೆಸಿ ತಾನು ಪ್ರಥಮನೆನಿಸಿಕೊಳ್ಳುವ ಆಸೆ. ಹೀಗಾಗಿ, ಇಂಥ ಅಪಾಯಕಾರಿ ಉತ್ಪಾದನೆಗಳು ಹೊರಬರತೊಡಗುತ್ತವೆ.

ಧಾರವಾಡದ ಕೃಷಿ ವಿಶ್ವವಿದ್ಯಾಲಯ ಕುಲಾಂತರಿ ಬದನೆ ಬಗ್ಗೆ ಸಂಶೋಧನೆ ನಡೆಸುತ್ತಿದ್ದು, ಅದು ಅಂತಿಮ ಹಂತದಲ್ಲಿದೆ ಎಂದು ನಾನು ಪ್ರಜಾವಾಣಿ ವರದಿಗಾರನಾಗಿದ್ದಾಗ, ಅಲ್ಲಿಂದ ವರದಿ ಮಾಡಿದ್ದೆ. ಆನಂತರ, ರೈತ ಸಂಘಟನೆಗಳು ಕೃಷಿ ಮೇಳದಂದು ವಿಶ್ವವಿದ್ಯಾಲಯಕ್ಕೆ ಮುತ್ತಿಗೆ ಹಾಕಿ ಪ್ರತಿಭಟಿಸಿದ್ದವು. ಅದೇಕೋ ನಂತರ ಪ್ರತಿಭಟನೆಗೆ ಕಾವು ಏರಲಿಲ್ಲ. ಏರಿದ್ದು, ಕುಲಾಂತರಿ ಬದನೆಯ ಸಂಶೋಧನೆಯಲ್ಲಿ. ಅದರ ಫಲಿತಾಂಶ ಈಗ ಕಣ್ಣ ಮುಂದಿದೆ.
ಜನರಿಗೆ ತುರ್ತಾಗಿ ಬೇಕಾದ ಎಷ್ಟೋ ವಿಷಯಗಳತ್ತ ಸರ್ಕಾರದ ಅಥವಾ ವಿಜ್ಞಾನಿಗಳ ಗಮನ ಹರಿಯುತ್ತಿಲ್ಲ. ಆದರೆ, ಬೇಡದ ವಿಷಯಗಳ ಬಗ್ಗೆ ಬೇಕಾಬಿಟ್ಟಿ ಹಣ ಹರಿಯುತ್ತಿದೆ. ಸಂಶೋಧನೆಗಳು ನಡೆಯುತ್ತಿವೆ. ಇದಕ್ಕೆ ಮರುಳು ಎನ್ನಬೇಕೋ, ಬೆಪ್ಪುತನ ಎನ್ನಬೇಕೋ, ಶಿವಲೀಲೆ ಎಂದು ನಿಟ್ಟುಸಿರಡಬೇಕೋ? ನಮಗೆ ಬೇಡದ ಕಡುಬನ್ನು ಗಂಟಲಲ್ಲಿ ತುರುಕುವ ಇಂಥ ಕೆಲಸಗಳಿಗೂ ಪ್ರತಿಭಟನೆ ನಡೆಸಬೇಕಾಗಿ ಬಂದಿರುವುದು ದುಃಸ್ಥಿತಿ. ಆದರೆ, ಬೇರೆ ದಾರಿಯೇ ಇಲ್ಲ ಎನ್ನುವುದು ವಾಸ್ತವ.
ನಿಮ್ಮ ವಾದಕ್ಕೆ ನನ್ನ ಬೆಂಬಲವಿದೆ.

rangamarakini said...

how rediculous these committees which gave green signal to BT Brinjal. who are interested in this - only MNC and the so called scientists who will mint money once they hav monopoly over the farmers and dictate which one they should cultivate. once BT make a road, then its all over. why these BT could not enter other so called developped nations? its obvious - market strategy and to control the farmers of India! its really pity that the govt yielding to it.

sunaath said...

It is possible that the powers permitting the BT have some vested interest in permitting the BT.

Dr.K.G.Bhat,M.B:B.S said...

there is no concrete evidence that BT varieties are harmful.we happily force our doctors to give us treatment according to our fancy and don't say it does not happen.when hybreed rice entered the field back in the 60s there was lot of controversy.
we should believe our scientists.
if they say it is alright it is perfectly alright.
we are very good at opposing anything.whether qualified or not we have opinion about everything from Atom bomb to chikun gunea.carry on.