೨೦೦೫ರಲ್ಲಿ ಅಕ್ಕ ಪಕ್ಕದ ರೈತರು ಕೈ ಜೋಡಿಸಿ ಬೃಹತ್ ಆಕೃತಿಗಳ ರೂಪಿಸಲು ಪ್ರಾರಂಬಿಸಿದರು. ಪ್ರವಾಸಿಗಳಿಂದ ಊರ ಆರ್ಥಿಕ ಸ್ಥಿತಿ ಉತ್ತಮಗೊಳ್ಳುವುದು ಈ ಕೃತಿಗಳ ಹಿಂದಿನ ನೂಕು ಶಕ್ತಿ. ಮೆ ತಿಂಗಳಲ್ಲಿ ನಾಟಿ ಮಾಡಿದ ಬೆಳೆಯು ಸೆಪ್ಟಂಬರ್ ತಿಂಗಳಿಗಾಗುವಾಗ ಬೆಳೆದು ನಿಂತು ಆ ಆಕರ್ಷಕ ಚಿತ್ರವನ್ನು ತೋರ್ಪಡಿಸುತ್ತದೆ. ಮೊದಲು ರೈತರು ಕಂಪ್ಯೂಟರಿನಲ್ಲಿ ವಿನ್ಯಾಸ ಮಾಡಿ ಯಾವ ರೀತಿಯಲ್ಲಿ ನೆಡುವುದೆಂದು ತೀರ್ಮಾನಿಸುತ್ತಾರೆ. ನೂರಾರು ಸ್ವಯಂಸೇವಕರು ನಾಲ್ಕು ಬಣ್ಣದ ನೇಜಿ ನೆಡುವುದರಲ್ಲಿ ಕೈ ಜೋಡಿಸುತ್ತಾರೆ. ಇದರಿಂದಾಗುವ ಪ್ರಯೋಜನ ಗುರುತಿಸಿ ಈಗ ಹಲವು ಹಳ್ಳಿಗಳು ಈ ಮೇಲ್ಪಂಕ್ತಿ ಅನುಸರಿಸುತ್ತಿವೆಯಂತೆ.
ಸಾವಿರಾರು ನಾಟಿ ತಳಿಗಳು ಕಣ್ಮರೆಯಾಗುತ್ತಿರುವ ಈ ದಿನಗಳಲ್ಲಿ ವಿಬಿನ್ನತೆ ಅನಿವಾರ್ಯ ಎನ್ನುವುದೂ ಇದರಿಂದ ನಾವು ಕಲಿಯುವ ಸಂದೇಶ. ಮೇಲಿನ ಚಿತ್ರದಲ್ಲಿರುವ ಬೇರೆ ಬೇರೆ ಬಣ್ಣದ ನಾಲ್ಕು ತಳಿಯ ಬತ್ತದ ಸಸಿಗಳು ಉಪಯೋಗವಾಗುವುದಂತೆ. ಹದಿನೈದು ಸಾವಿರ ಚದರಡಿ ಮೀರುವ ಈ ಚಿತ್ರಗಳು ನೆಲದಲ್ಲಿ ನಿಂತರೆ ಹೆಚ್ಚೇನು ಗುರುತಿಸಲಾಗದ ಕಾರಣ, ಇದರ ಪೂರ್ತಿ ಸ್ವರೂಪ ಅರ್ಥೈಸಲು ಅಲ್ಲೊಂದು ನಿರ್ಮಿಸಲಾದ ಅಟ್ಟಳಿಗೆ ಏರಬೇಕಂತೆ. ವಿಮಾನ ಚಾಲಕರಿಗೆ ಹಾಗೂ ಪ್ರಯಾಣಿಕರಿಗೆ ಕಣ್ಣಿಗೆ ಹಬ್ಬ.
1 comment:
ಸೊಗಸಾದ ಲೇಖನ. ರೈತರ ಕ್ರಿಯಾಶೀಲತೆಗೆ ನಿದರ್ಶನ.
Post a Comment